Monday, December 23, 2024

Latest Posts

ಕೋವಿಡ್-19 ನಡುವೆ ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರ ಅನುಮತಿ.

- Advertisement -

ಹೋರಿಗಳನ್ನು ಓಡಿಸುವ ಮತ್ತು ಬೆದರಿಸುವ ಆಟಗಳು ಹಲವಾರಿವೆ.ಆದರೆ ಬಲಿಷ್ಟವಾದ ಗೂಳಿಗಳನ್ನೇ ಪಳಗಿಸುವ ಆಟ ಜಲ್ಲಿಕಟ್ಟು ಇದು
ತಮಿಳುನಾಡಿನಲ್ಲಿ ಸಂಪ್ರದಾಯವಾಗಿ ಬಂದಿರುವ ಆಟ, ಈ ಬಾರಿಯ ಕೊರೊನಾ ನಡುವೆ ಜಲ್ಲಿಕಟ್ಟು ನಡೆಯುತ್ತದೋ ಇಲ್ಲವೋ ಎನ್ನುತ್ತಿದ್ದವರಿಗೆ ತಮಿಳುನಾಡು ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಅಂದರೆ ಜಲ್ಲಿಕಟ್ಟು ಕ್ರೀಡೆಗೆ ಅನುಮತಿಯನ್ನು ನೀಡಿದೆ. ಇದರ ಜೊತೆಗೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅವುಗಳೆಂದರೆ ಪ್ರತಿ ಗೂಳಿಯ ಜೊತೆಗೆ ಕೇವಲ ಇಬ್ಬರು ವ್ಯಕ್ತಿಗಳನ್ನು ಅಂದರೆ ಗೂಳಿಯ ಮಾಲಿಕರು ಮತ್ತು ಸಹಾಯಕರನ್ನು ಮಾತ್ರ ಅಖಾಡದೊಳಗೆ ಇರಲು ಅನುಮತಿ ನೀಡಿದೆ. ಭಾಗವಹಿಸುವವರಿಗೆ 48 ಗಂಟೆಗಳ ಹಿಂದೆ ಮಾಡಿಸಲಾದ ಕೊವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಎಲ್ಲರಿಗೂ ಡಬಲ್ ಡೋಸ್ ವ್ಯಾಕ್ಸಿನ್ ಕಡ್ಡಾಯ, ಮತ್ತು 300 ಆಟಗಾರರಿಗೆ ಜಲ್ಲಿಕಟ್ಟು ಅಥವಾ ಗೂಳಿ ಪಳಗಿಸಲು ಅವಕಾಶವಿದ್ದರೆ, 150 ಆಟಗಾರರಿಗೆ ತಮಿಳಿನಲ್ಲಿ ಎರತು ಬಿಡುತಾಳ್’ ಎಂದು ಕರೆಯಲಾಗುವ ಬುಲ್ ರೇಸಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಈ ಎಲ್ಲಾ ಮುನ್ಸೂಚನೆಗಳೊಂದಿಗೆ ಜಲ್ಲಿಕಟ್ಟು ಕ್ರೀಡೆಗೆ ಅನುಮತಿಯನ್ನು ನೀಡಿದೆ.

- Advertisement -

Latest Posts

Don't Miss