Sunday, April 20, 2025

Latest Posts

Tamil Nādu: ತಮಿಳುನಾಡು ಭವಿಷ್ಯದ ವಿಚಾರದಲ್ಲಿ ರಾಜಿ ಇಲ್ಲ. ಕೇಂದ್ರಕ್ಕೆ ಸಿಎಂ ಸ್ಟಾಲಿನ್ ಎಚ್ಚರಿಕೆ..

- Advertisement -

Political News: ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಟೀಕಿಸುತ್ತಲೇ ಬಂದಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಇದೀಗ ಕ್ಷೇತ್ರ ಮರುವಿಂಗಡಣೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಕಳೆದೆರಡು ದಿನಗಳ ಹಿಂದಷ್ಟೇ ಖುದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕ್ಷೇತ್ರಗಳ ಮರುವಿಂಗಡಣೆಯ ಕುರಿತು ಹೇಳಿಕೆ ನೀಡಿದ್ದರು, ಇದಾದ ಬೆನ್ನಲ್ಲೇ ಈ ನಿರ್ಧಾರದ ವಿರುದ್ಧ ಅಪಸ್ವರವೆತ್ತಿರುವ ಸ್ಟಾಲಿನ್‌ ಇದೇ ಮಾರ್ಚ್‌ 5 ರಂದು ಅಲ್ಲಿನ ಸರ್ವಪಕ್ಷಗಳ ಸಭೆಯನ್ನು ಕರೆದು ಈ ಕುರಿತು ಗಂಭೀರವಾದ ಚರ್ಚೆ ನಡೆಸಲಿದ್ದಾರೆ. ಇನ್ನೂ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ 40 ಕ್ಕೂ ಅಧಿಕ ರಾಜಕೀಯ ಪಕ್ಷಗಳಿಗೆ ಈ ಸಭೆಗೆ ಆಮಂತ್ರಣ ನೀಡಲಾಗಿದೆ.

ಜನಸಂಖ್ಯಾ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಬಿಡುವುದಿಲ್ಲ..

ನಿಮ್ಮ ನಿರ್ಧಾರದಿಂದ ನಾವು 8 ಸೀಟ್‌ ಕಳದುಕೊಳ್ತೇವೆ..

ಇನ್ನೂಈ ವಿಚಾರದ ಕುರಿತು ಮಾತನಾಡಿರುವ ಸ್ಟಾಲಿನ್‌, ಕೇಂದ್ರದ ಈ ಕ್ಷೇತ್ರ ಮರುವಿಂಗಡಣೆಯ ನಿರ್ಧಾರವು ತಮಿಳುನಾಡಿನ ಮೇಲೆ ನೇತಾಡುವ ತೂಗು ಕತ್ತಿಯಾಗಿದೆ. ಕಾರಣ ನಮ್ಮ ತಮಿಳುನಾಡು ಜನಸಂಖ್ಯೆ ನಿಯಂತ್ರಣದಲ್ಲಿ ತನ್ನದೇ ಆದ ಸಫಲತೆ ಕಂಡಿದೆ. ಅಲ್ಲದೆ ಜನಸಂಖ್ಯೆ ಆಧರಿಸಿ ನಡೆಯಲಿರುವ ಕ್ಷೇತ್ರ ಮರುವಿಂಗಡಣೆಯಲ್ಲಿ ನಮ್ಮಲ್ಲಿನ 8 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಜನಸಂಖ್ಯೆಯ ನಿಯಂತ್ರಣದಲ್ಲಿ ಸಕ್ಸಸ್‌ ಕಂಡಿರುವ ರಾಜ್ಯವನ್ನು ಅಭಿನಂದಿಸುವ ಬದಲು ಕೇಂದ್ರವು ಈ ರೀತಿ ಸ್ಥಾನಗಳಿಗೆ ಕತ್ತರಿ ಪ್ರಯೋಗ ಮಾಡುವುದು ಎಷ್ಟು ಸರಿ..? ಅಲ್ಲದೆ ಹೀಗೆ ಮಾಡುವುದರಿಂದ ಸದನದಲ್ಲಿ ತಮಿಳುನಾಡಿಗೆ ಸಂಬಂಧಿಸಿದ ಧ್ವನಿಗಳು ಕಡಿಮೆಯಾಗುತ್ತದೆ ಅಲ್ಲವೆ..? ಎಂದು ಸ್ಟಾಲಿನ್‌ ಪ್ರಶ್ನೆ ಮಾಡಿದ್ದಾರೆ.

ಅಭಿನಂದಿಸುವ ಬದಲು ಅನ್ಯಾಯ ಸರಿಯೆ..?

ತಮಿಳುನಾಡು ಭವಿಷ್ಯದ ವಿಚಾರದಲ್ಲಿ ರಾಜಿ ಇಲ್ಲ.

ಕೇಂದ್ರಕ್ಕೆ ಸಿಎಂ ಸ್ಟಾಲಿನ್ ಎಚ್ಚರಿಕೆ..

ಕೇಂದ್ರ ಸರ್ಕಾರ ತಮಿಳುನಾಡಿನ ಮೇಲೆ ನಡೆಸುತ್ತಿರುವ ಅನ್ಯಾಯವನ್ನು ಡಿಎಂಕೆ ಖಂಡಿಸುತ್ತದೆ. ಅದರೆ ನಮ್ಮ ಬೇಡಿಕೆಯಲ್ಲಿ ಸ್ಪಷ್ಟತೆಯಿದೆ ಯಾವುದೇ ಕಾರಣಕ್ಕೂ ಜನಸಂಖ್ಯೆಯ ಮಾನದಂಡದ ಮೇಲೆ ಸಂಸದೀಯ ಕ್ಷೇತ್ರಗಳನ್ನು ನಿರ್ಧರಿಸಲು ಮುಂದಾಗಬೇಡಿ. ನಾವು ತಮಿಳುನಾಡಿನ ಕಲ್ಯಾಣದ ವಿಚಾರದಲ್ಲಿ ಹಾಗೂ ಭವಿಷ್ಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಟಾಲಿನ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಕೇಂದ್ರ ಸರ್ಕಾರವು ರಾಜ್ಯದ ಮೇಲೆ ಹಿಂದಿಯನ್ನು ಹೇರುವ ಮೂಲಕ ಭಾಷಾ ಯುದ್ಧದ ಬೀಜಗಳನ್ನು ಬಿತ್ತುತ್ತಿದೆ. ತಮಿಳುನಾಡು ಯಾವುದೇ ಭಾಷೆಯನ್ನು ವಿರೋಧಿಸುವುದಿಲ್ಲ. ಪರಭಾಷೆಯನ್ನು ಕಲಿಯಲು ಬಯಸುವವರಿಗೆ ಅಡ್ಡಿ ಮಾಡುವುದೂ ಇಲ್ಲ. ಆದರೆ ಮಾತೃಭಾಷೆ ತಮಿಳಿನ ಮೇಲೆ ಪ್ರಾಬಲ್ಯ ಸಾಧಿಸಲು ಮತ್ತು ನಾಶಮಾಡಲು ಬೇರೆ ಯಾವುದೇ ಭಾಷೆಗೆ ಅವಕಾಶ ನೀಡುವುದಿಲ್ಲ. ಇದಕ್ಕಾಗಿಯೇ ನಾವು ದ್ವಿಭಾಷಾ ನೀತಿಯನ್ನು ಅಂದ್ರೆ ತಮಿಳು ಮತ್ತು ಇಂಗ್ಲಿಷ್ ಪಾಲಿಸುತ್ತಿದ್ದೇವೆ’ ಎಂದು ಸ್ಟಾಲಿನ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ ತಮಿಳುನಾಡಿನಲ್ಲಿ ಸದ್ಯ 39 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಇತ್ತೀಚೆಗೆ ಸ್ಟಾಲಿನ್‌ ಅವರು ತಮಿಳುನಾಡಲ್ಲಿ ಜನಸಂಖ್ಯೆ ಕುಸಿತದ ವಿರುದ್ಧ ಎಚ್ಚರಿಕೆ ನೀಡಿ, 16 ಸಂಪತ್ತುಗಳ ಸಂಕೇತವಾಗಿ ಎಲ್ಲರೂ 16 ಮಕ್ಕಳನ್ನು ಹೆರಬೇಕು ಎಂದು ಕರೆ ನೀಡಿದ್ದರು.

- Advertisement -

Latest Posts

Don't Miss