1 ಪ್ಲೇಟ್ ಪಾನೀಪುರಿ ಬೆಲೆ 830 ರೂಪಾಯಿ: 1 ಪ್ಲೇಟ್ ಪಾವ್ ಭಾಜಿ ಬೆಲೆ 1,270 ರೂಪಾಯಿ..

London News: ಯಾರಾದ್ರೂ ಹೀಗೆ ಹೇಳೋದನ್ನಾ ಕೇಳಿದಿರಾ..? ಏನಂದ್ರೆ, ಪಾನೀಪುರೀನಾ..? ನನಗೆ ಅದರ ಸ್ಮೆಲ್ ಕಂಡ್ರೆ ಆಗಲ್ಲಾ, ನನಗೆ ಪಾನೀಪುರಿ ಅಂದ್ರೆ ಆಗಲ್ಲಾ ಅಂತಾ ಯಾರಾದ್ರೂ ಹೇಳೋದನ್ನು ನೀವು ಯಾವತ್ತಾದ್ರೂ ಕೇಳಿದೀರಾ..? ಹಾಗೆ ಕೇಳಿರೋಕ್ಕೆ ಸಾಧ್ಯಾನೇ ಇಲ್ಲಾ. ಯಾಕಂದ್ರೆ, ಪಾನೀಪುರಿ ಅಂದ್ರೆ ಅಷ್ಟು ರುಚಿಕರ ತಿಂಡಿ. ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಜನ ಅದನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟು ತಿನ್ನುತ್ತಾರೆ.

ಭಾರತದಲ್ಲಿ ನಾವು 20ರಿಂದ 30 ರೂಪಾಯಿ ನಡಿ ಪಾನೀಪುರಿ ತಿನ್ನುತ್ತೇವೆ. ಯಾವುದಾದರೂ ಫ್ಯಾನ್ಸಿ ರೆಸ್ಟೋರೆಂಟ್‌ಗೆ ಹೋದಾಗ ಮಾತ್ರ 100ರಿಂದ 200 ರೂಪಾಯಿ ನೀಡಬಹುದು. ಅಲ್ಲದೇ, ಅದರ ಕ್ವಾಂಟಿಟಿ ಕೂಡ ದರಕ್ಕೆ ತಕ್ಕಂತೆ ಇರುತ್ತದೆ. ಆದರೆ ಲಂಡನ್‌ನ ಹಲ್ದಿರಾಮ್ಸ್ ಅಂಗಡಿಯಲ್ಲಿ ಸಿಗುವ ಪಾನೀಪುರಿ, ಪಾವ್ ಭಾಜಿ ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ.

ಯಾಕಂದ್ರೆ ಇಲ್ಲಿನ ಪಾನೀಪುರಿ ಬೆಲೆ 1 ಪ್ಲೇಟ್‌ಗೆ 830 ರೂಪಾಯಿ. ಪಾವ್‌ಭಾಜಿ ಬೆಲೆ 1 ಪ್ಲೇಟ್‌ಗೆ 1,270 ರೂಪಾಯಿ. ಅಲ್ಲದೇ ಇಲ್ಲಿ ಸಿಗುವ ಎಲ್ಲ ತಿನಿಸುಗಳ ಬೆಲೆ ಇದೇ ರೀತಿ ಹೆಚ್ಚೆಚ್ಚು ಇದೆ. ಇಷ್ಟು ಬೆಲೆ ಇರಲು ಕಾರಣ, ಇಲ್ಲಿನ ಹಣದುಬ್ಬರ. ಇಲ್ಲಿ ಬಾಾಡಿಗೆ, ದಿನಸಿ ಬೆಲೆ ಹೀಗೆ ಎಲ್ಲದರ ಬೆಲೆಯೂ ಹೆಚ್ಚು, ಅದರ ಮೇಲೆ ಈ ರೀತಿಯಾಗಿ ತಿನಿಸುಗಳ ಬೆಲೆ ನಿಗದಿಪಡಿಸಲಾಗುತ್ತದೆ.

ಆದರೂ ಕೂಡ, ಬೆಲೆ ಎಷ್ಟಾದರೂ ಇರಲಿ ನಾವು ನಮ್ಮ ಭಾರತೀಯ ಚಾಟ್ಸ್ ತಿನ್ನಲೇಬೇಕು ಎಂದು ಲಂಡನ್‌ನಲ್ಲಿರುವ ಭಾರತೀಯರು ಹಲ್ದಿರಾಮ್ಸ್‌ಗೆ ಬಂದು, ಚಾಟ್ಸ್ ಸವಿಯುತ್ತಾರಂತೆ. ಅಲ್ಲದೇ, ಸ್ಥಳೀಯ ಬ್ರಿಟೀಷ್ ಪ್ರಜೆಗಳು ಕೂಡ, ಹಲ್ದಿರಾಮ್ಸ್‌ನಲ್ಲಿ ಸಿಗುವ ಚಾಟ್ಸ್ ತಿನ್ನುತ್ತಾರಂತೆ.

About The Author