Saturday, March 29, 2025

Latest Posts

ತಾಯಿಯನ್ನು ನಿಂದಿಸಿದ ಮಾವನನ್ನು ಇರಿದು ಕೊಂದ ಅಳಿಯ

- Advertisement -

Hassan Crime news: ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೋದರ ಮಾವನನ್ನು ಅಳಿಯ ಚಾಕುವಿನಿಂದ ಇರಿದು ಕೊಂದು ಹಾಕಿದ್ದಾನೆ. ಹಾಸನ‌ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿ ಗಂಜಿಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ.

ಪ್ರಭುಸ್ವಾಮಿ (50) ಕೊಲೆಯಾದ ವ್ಯಕ್ತಿ. ಅಜಯ್ (22) ಮಾವನನ್ನು ಕೊಲೆಗೈದ ಆರೋಪಿ. ಅಜಯ್‌ನ ತಾಯಿ ಸಾವಿತ್ರಮ್ಮ ಏಳೆಂಟು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ತವರು ಮನೆಗೆ ಬಂದು ನೆಲೆಸಿದ್ದರು. ಈಕೆಯ ಸೋದರ ಪ್ರಭುಸ್ವಾಮಿ ಹಾಗೂ ಸಾವಿತ್ರಮ್ಮ ಗಂಜಿಗೆರೆ ಗ್ರಾಮದಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಜಮೀನು ವಿಚಾರವಾಗಿ ಆಗಾಗ್ಗೆ ತಂಗಿಯೊಂದಿಗೆ ಪ್ರಭುಸ್ವಾಮಿ ಜಗಳವಾಡುತ್ತಿದ್ದ.

ಮದ್ಯ ಸೇವಿಸಿ ಬಂದು ಒಡಹುಟ್ಟಿದ ತಂಗಿ ಹಾಗೂ ಆಕೆಯ ಮಗಳನ್ನು ಪ್ರಭುಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದರಿಂದ ಬೇಸತ್ತು ಹೋಗಿದ್ದ ಸಾವಿತ್ರಮ್ಮ ತನ್ನ ಮಗನಿಗೂ ಮಾವ ಜಗಳವಾಡುವ ವಿಷಯ ತಿಳಿಸಿದ್ದಳು. ನಿನ್ನೆ ಕೂಡ ಪ್ರಭುಸ್ವಾಮಿ ತಂಗಿಯೊಂದಿಗೆ ಜಗಳವಾಡಿ ಕೆಟ್ಟ ಪದಗಳಿಂದ ನಿಂದಿಸಿದ್ದ.

ವಿಷಯ ತಿಳಿದು ಗಂಜಿಗೆರೆ ಗ್ರಾಮಕ್ಕೆ ಆಗಮಿಸಿದ ಅಜಯ್ ಮನೆಯಲ್ಲಿಯಿದ್ದ ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಕಳ್ಳತನ ಗೈದ ಬಂಧಿಸಿದ ಪೋಲಿಸರು

ಎರಡುವರೆ ವರ್ಷ ಆದ್ಮೇಲೆ ಸಿಎಂ ಬದಲಾಗ್ತಾರಾ ಎಂಬ ಪ್ರಶ್ನೆಗೆ ಸಚಿವ ರಾಜಣ್ಣ ಹೇಳಿದ್ದೇನು..?

ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ

- Advertisement -

Latest Posts

Don't Miss