Tuesday, April 15, 2025

Latest Posts

ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ..!

- Advertisement -

ರಾಯಚೂರು: ರಾಯಚೂರಿನ ವಸತಿ ನಿಲಯದ ವಿದ್ಯಾರ್ಥಿನಿಯರನ್ನ ಕೈ ಹಿಡಿದು ಎಳೆದು ಅಸಭ್ಯವಾಗಿ ವರ್ತಿಸಿರೋ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.

ರಾಯಚೂರಿನ ಸರ್ಕಾರಿ ವಸತಿ ಶಾಲೆಯೊಂದರ ಗಣಿತ ವಿಭಾಗದ ಶಿಕ್ಷಕನೊಬ್ಬ ಪ್ರೌಢಶಾಲಾ ವಿದ್ಯಾರ್ಥಿನಿಯರ ಮೈ-ಕೈ ಮುಟ್ಟಿ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾನೆ.

ಈ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಂದಲೇ ಇಲ್ಲಿನ ಶಿಕ್ಷಕರು ತಮ್ಮ ಬಟ್ಟೆಗಳನ್ನು ಒಗೆಸುತ್ತಾರೆ, ಅಲ್ಲದೆ ಕಸ ಗುಡಿಸೋ ಕೆಲಸವನ್ನೂ ವಿದ್ಯಾರ್ಥಿನಿಯರಿಂದಲೇ ಮಾಡಿಸ್ತಿದ್ದಾರೆ.  ಇನ್ನು ಈ ಶಿಕ್ಷಕನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ. ಈತನ ಅಸಭ್ಯ ವರ್ತನೆಗೆ ಇಡೀ ಶಿಕ್ಷಕ ಸಮುದಾಯ ತಲೆ ತಗ್ಗಿಸುವಂತಾಗಿದೆ.

ಅನಿಲ್ ಕುಮಾರ್ , ಕರ್ನಾಟಕ ಟಿವಿ-ರಾಯಚೂರು

- Advertisement -

Latest Posts

Don't Miss