Sunday, September 15, 2024

Latest Posts

ಸಚಿನ್-ಲಾರಾ ದಾಖಲೆ ಉಡೀಸ್, ಕೊಹ್ಲಿ ಈಗ 20 ಸಾವಿರ ರನ್ ಸರದಾರ..!

- Advertisement -

ಇಂಗ್ಲೆಂಡ್: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಈಗ 20 ಸಾವಿರ ರನ್ ಗಳ ಸರದಾರ.
ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಎದುರಿನ ವಿಶ್ವಕಪ್ ಪಂದ್ಯದಲ್ಲಿ 37 ರನ್ ಗಳಿಸುತ್ತಿದ್ದಂತೆ, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ರನ್ ಬೇಟೆ 20 ಸಾವಿರ ಮುಟ್ಟಿತು. ಈ ಮೂಲಕ ಕ್ರಿಕೆಟ್ ದಂತಕಥೆ ಗಳಾದ ಸಚಿನ್ ತೆಂಡುಲ್ಕರ್ ಮತ್ತು ಬ್ರಿಯಾನ್ ಲಾರ ಅವರ ಹೆಸರಿನಲ್ಲಿದ್ದ ಜಂಟಿ ದಾಖಲೆ ಯನ್ನ ಅಳಿಸಿ ಹಾಕಿದ್ರು.

ಅಷ್ಟೇ ಅಲ್ಲದೇ ಈ ಸಾಧನೆ ಮಾಡಿದ ವಿಶ್ವದ 12 ನೇ ಮತ್ತು ಭಾರತದ 3ನೇ ಆಟಗಾರ ಅನ್ನೋ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾದ್ರು. ಅಷ್ಟೇ ಅಲ್ಲದೇ ಅತಿ ವೇಗವಾಗಿ 20 ಸಾವಿರ ರನ್ ಕಲೆ ಹಾಕಿದ ವಿಶ್ವದ ಮೊದಲ ಬ್ಯಾಟ್ಸ್ ಮನ್ ಅನ್ನೋ ಹಿರಿಮೆ ಗಳಿಸಿದ್ರು. ಒಟ್ಟು 77 ಟೆಸ್ಟ್ ಪಂದ್ಯಗಳ 131 ಇನಿಂಗ್ಸ್ ಗಳಲ್ಲಿ 6613 ರನ್ ಕಲೆ ಹಾಕಿರುವ ಕೊಹ್ಲಿ, 67 ಟಿ-ಟ್ವೆಂಟಿ ಪಂದ್ಯಗಳ 62 ಇನಿಂಗ್ಸ್ ಗಳಲ್ಲಿ 2263 ಗಳಿಸಿದ್ದಾರೆ. ಇನ್ನು 232 ಏಕದಿನ ಪಂದ್ಯಗಳ 223 ಇನಿಂಗ್ಸ್ ಗಳಲ್ಲಿ 11124ರನ್ ಕಲೆ ಹಾಕಿದ ಕೊಹ್ಲಿ, ಒಟ್ಟು 417 ಇನಿಂಗ್ಸ್ ಗಳಲ್ಲಿ ಈ ದಾಖಲೆ ನಿರ್ಮಿಸಿದ್ರು. ಈ ಮೂಲಕ ಸಚಿನ್ ತೆಂಡುಲ್ಕರ್ ಮತ್ತು ಬ್ರಿಯಾನ್ ಲಾರ ಅಳಿಸಿ ಹಾಕಿದ್ರು. ಈ ಹಿಂದೆ ಸಚಿನ್ ಮತ್ತು ಲಾರ, 20 ಸಾವಿರ ರನ್ ಕಲೆ ಹಾಕಲು ತಲಾ 453 ಇನಿಂಗ್ಸ್ ಪಡೆದುಕೊಂಡಿದ್ದರು.

ಇಂಡಿಯಾ v/s ಇಂಗ್ಲೆಂಡ್ ರೋಚಕ ಪಂದ್ಯ..!ಆರೆಂಜ್ ಜರ್ಸಿ ತೊಡೋದು ಯಾರು..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=WBF33LNmlfg
- Advertisement -

Latest Posts

Don't Miss