Sunday, March 3, 2024

Latest Posts

ವರ್ಲ್ಡ್ ಕಪ್ ಗೆದ್ದು ಯೋಧರಿಗೆ ಅರ್ಪಿಸ್ತೀವಿ- ವಿರಾಟ್ ಕೊಹ್ಲಿ

- Advertisement -

ಭಾರತದಲ್ಲಿ ಐಪಿಎಲ್ ಹವಾ ಮುಗಿದಾಯ್ತು. ಇನ್ನೇನಿದ್ರು ವರ್ಲ್ ಕಪ್ ಹವಾ ಶುರು..ಇದೇ ತಿಂಗಳ 30ನೇ ತಾರೀಖಿ ನಿಂದ ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದ್ದು, ಈ ಬಾರಿ ಚಾಂಪಿಯನ್ ಪಟ್ಟಕ್ಕಾಗಿ 10 ದೇಶಗಳು ಸೆಣಸುತ್ತಿವೆ.

ಈ ಬಾರಿಯ ವಿಶ್ವ ಕಪ್ ಟೂರ್ನಿ ಇಂಗ್ಲೆಂಡ್ ನಲ್ಲಿ ನಡೆಯುತ್ತಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬ್ಲೂ ಬಾಯ್ಸ್ ಇಂಗ್ಲೆಂಡ್ ನತ್ತ ಮುಖಮಾಡಿದ್ದಾರೆ. ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ಟೀಂ ಸಾಲಿನಲ್ಲಿ ಮಂಚೂಣಿಯಲ್ಲಿರೋ ಭಾರತ, ತನ್ನ ಮೂದಲ ಹೋರಾಟದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ ಎದುರಿಸಲಿದೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಮಾತನಾಡಿದ ವಿರಾಟ್ ಕೊಹ್ಲಿ, ಈ ಬಾರಿ ನಾವು ವಿಶ್ವ ಕಪ್ ಗೆದ್ದೇಗೆಲ್ಲುತ್ತೆವೆ. ಆ ಗೆಲುವನ್ನ ನಮ್ಮ ಸೇನೆಗೆ ಅಂದರೆ ವೀರ ಯೋಧರಿಗೆ ಅರ್ಪಿಸುತ್ತೇವೆ ಎಂದಿದ್ದಾರೆ.

ಸದ್ಯ ೧೫ ಆಟಗಾರರ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು ಕ್ಯಾಪ್ಟನ್ ವಿರಾಟ್ ಕೊಹ್ಲಿ, ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಅನುಭವಿ ಹಾಗೂ ಯಂಗ್ ಪ್ಲೇಯರ್ಸ್ ಸಜ್ಜಾಗಿದ್ದಾರೆ. ಬ್ಲೂ ಬಾಯ್ಸ್ ಜರ್ನಿ ಪೋಟೋಗಳನ್ನ ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಅದೇನೆ ಇರಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಮೂರನೇ ಬಾರಿ ವಿಶ್ವ ಕಪ್‌ ಗೆಲ್ಲುವ ನಿರೀಕ್ಷೆ ಮೂಡಿಸಿ ಕ್ರಿಕೆಟ್ ಪ್ರಿಯರ ಕುತೂಹಲ ಕೆರಳಿಸಿದೆ.

ಎಲ್ಲಿದೆ ಮುಂಬೈ ಗೆದ್ದ ಆ ಕಪ್….?ಈ ವಿಡಿಯೋ ತಪ್ಪದೇ ನೋಡಿ.

https://www.youtube.com/watch?v=HrsiKLn2LSI
- Advertisement -

Latest Posts

Don't Miss