www.karnatakatv.net:ದೇಶದ ಜನರು ಈಗ ಐಪಿಎಲ್ ನ ಹಬ್ಬದಲ್ಲಿದ್ದಾರೆ . ಐಪಿಎಲ್ ಇನ್ನೇನು ಸ್ವಲ್ಪ ದಿನಗಳಲ್ಲೇ ಮುಗಿಯುತ್ತದೆ , ನಂತರ ಟಿ20 ವಿಶ್ವಕಪ್ ಶುರುವಾಗುತ್ತದೆ . ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಯುಎಇ ನಲ್ಲಿ ಪುರುಶರ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ , ಎಲ್ಲಾ ದೇಶಗಳೂ ಸಹ ಟಿ20 ಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿವೆ , ಈ ನಿಟ್ಟಿನಲ್ಲಿ ಭಾರತದ ಬಿಸಿಸಿಐ ಟೀಮ್ ಇಂಡಿಯಾದ ಹೊಸ ಬ್ರಾಂಡ್ ಜರ್ಸಿಯನ್ನು ಬುಧವಾರ (ಅಕ್ಟೋಬರ್ 13) ಬಿಡುಗಡೆ ಮಾಡಿದೆ.
ಹೊಸ ಜರ್ಸಿಯನ್ನು ತೊಟ್ಟು ಪೋಸ್ ನೀಡಿರುವ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ,ರೋಹಿತ್ ಶರ್ಮಾ,ಕೆ .ಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ರವರ ಪೋಟೋವನ್ನು ಬಿಸಿಸಿಐ ಪೋಷ್ಟ್ ಮಾಡಿದ್ದು ,ಅಭಿಮಾನಿಗಳ ಬಿಲಿಯನ್ ಚಿಯರ್ಸ್ ನಿಂದ ಸ್ಫೂರ್ತಿಗೊಂಡು “ಬಿಲಿಯನ್ ಚಿಯರ್ಸ್ ಜರ್ಸಿ” ಅನ್ನು ನಾವು ಪ್ರಸ್ತುತ ಪಡಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದೆ .
ಟಿ20 ಗೆ ಬಿಡುಗಡೆಯಗಿರುವ ಜೆರ್ಸಿ ಗಾಢ ನೀಲಿ ಬಣ್ಣದ್ದಾಗಿದ್ದು ಕಳೆದ ವರ್ಷ ಡಿಸೆಂಬರ್ನಲ್ಲಿ ಬಿಡುಗಡೆಯಾಗಿದ್ದ ಕಡು ನೀಲಿ ಕಪ್ಪು ಮಾದರಿ ಬದಲಾಗಿರುವಂತಹ ರೂಪವಾಗಿದೆ . ಈ ಜೆರ್ಸಿಯು 1992 ರ ವಿಶ್ವಕಪ್ ಸಮಯದಲ್ಲಿ ಟೀಮ್ ಇಂಡಿಯಾ ಧರಿಸಿದ್ದ ಜರ್ಸಿಗೆ ಹೊಲುತ್ತದೆ.
ಟೀಮ್ ಇಂಡಿಯಾದ ಅಧಿಕೃತ ಪ್ರಾಯೋಜಕರಾಗಿರುವ ಎಂಪಿಎಲ್ ಸ್ಫೋಟ್ಸ್ ಹೊಸ ಜೆರ್ಸಿಯನ್ನು ಉದ್ಘಾಟಿಸಿದೆ,
ಮತ್ತು ಟೀಮ್ ಇಂಡಿಯಾಗೆ ಪ್ರತಿಕ್ರಿಯಿಸಿರುವ ಎಂಪಿಎಲ್ . ಇದು ಕೇವಲ ಒಂದು ತಂಡ ಮಾತ್ರವಲ್ಲ ,ಭಾರತದ ಹೆಮ್ಮೆ ,ಇದು ಕೆವಲ ಜೆರ್ಸಿ ಮಾತ್ರವಲ್ಲ ಬಿಲಿಯನ್ ಅಭಿಮಾನಿಗಳ ಆಶೀರ್ವಾದ . ಟಿ20 ವಿಶ್ವಕಪ್ ಟೀಮ್ ಇಂಡಿಯವನ್ನು ಹುರಿದುಂಬಿಸಲು ಸಿಧ್ದರಾಗಿ ಎಂದು ಎಂಪಿಎಲ್ ಟ್ವೀಟ್ ಮಾಡಿದೆ .
ಸಂಪತ್ ಶೈವ, ಸ್ಪೋಟ್ಸ್ ಡೆಸ್ಕ್ ,ಕರ್ನಾಟಕ ಟಿವಿ