Sunday, September 8, 2024

Latest Posts

ಸ್ವಚ್ಚತಾ ಸಿಬ್ಬಂದಿಯ ಕಣ್ಣೀರ ಕಹಾನಿ: ಸಾಕ್ಷ್ಯಚಿತ್ರ ಸಾಕ್ಷಿಕರಿಸಿದ ಪೌರಕಾರ್ಮಿಕರ ನೋವು..!

- Advertisement -

Hubballi News: ಹುಬ್ಬಳ್ಳಿ: ಅವಳಿನಗರದಲ್ಲಿ ತ್ಯಾಜ್ಯ ನಿರ್ವಹಣೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಾರ್ವಜನಿಕರು ಹಸಿ ಕಸ ಹಾಗೂ ಒಣಕಸವನ್ನು ಒಟ್ಟೊಟ್ಟಿಗೆ ಸೇರಿಸಿ ಕೊಡುವುದರಿಂದ ನಿಜಕ್ಕೂ ತ್ಯಾಜ್ಯ ನಿರ್ವಹಣೆ ಹಾಗೂ ತ್ಯಾಜ್ಯ ವಿಂಗಡಣೆ ಸಾಕಷ್ಟು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರ ಹಾಗೂ ಸ್ವಚ್ಚತಾ ಸಿಬ್ಬಂದಿಯ ಕಾರ್ಯದ ಕುರಿತು ಪ್ರಸಾರಗೊಂಡಿರುವ ಸಾಕ್ಷ್ಯಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ.

ಹೌದು.. ಪೌರಕಾರ್ಮಿಕರ ಬದುಕಿನ ಭವಣೆಯನ್ನು ಪರಿಚಯಿಸುವ ಸಾಕ್ಷ್ಯಚಿತ್ರ ಸ್ವಚ್ಚತಾ ಸಿಬ್ಬಂದಿಯ ಮೇಲೆ ಬೀರಬಹುದಾದ ಮಾನಸಿಕ ಹಾಗೂ ಆರೋಗ್ಯ ಸಮಸ್ಯೆ ಕುರಿತು ಬಿತ್ತರಿಸಿರುವ ಸಾಕ್ಷ್ಯಚಿತ್ರ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಈಗಾಗಲೇ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಕೂಡ ಇಂತಹ ಅದೆಷ್ಟೋ ಸಮಸ್ಯೆಗಳನ್ನು ಪೌರಕಾರ್ಮಿಕರು ಹಾಗೂ ಸ್ವಚ್ಚತಾ ಸಿಬ್ಬಂದಿ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರು ಜಾಗೃತರಾಗಿ ಹಸಿ ಕಸ ಹಾಗೂ ಒಣ ಕಸವನ್ನು ಮನೆಯಿಂದಲೇ ಬೇರ್ಪಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿಯೂ ಕೂಡ ಇಂತಹದೊಂದು ಅಭಿಯಾನ ಆರಂಭಗೊಂಡು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವಳಿನಗರವನ್ನು ಸ್ವಚ್ಛ ನಗರವನ್ನಾಗಿ ಮಾಡಿ ಆರೋಗ್ಯಯುತ ನಗರವನ್ನಾಗಿ ಮಾಡಬೇಕಿದೆ.

ರೈತರು ಬಿತ್ತುವ ಬಿತ್ತನೆ ಬೀಜಗಳ ದರ ಹೆಚ್ಚಳ ಮಾಡಿದ ಸರ್ಕಾರ, ರೈತ ಕಂಗಾಲು

‘ಬಿಜೆಪಿ ಜತೆ ಮೈತ್ರಿಯಾಗಿದೆ ಎಂದರೆ ಅಲ್ಪಸಂಖ್ಯಾತರಿಗೆ ಭಯ ಬೇಡ’

ಪರಿಸರ ಜಾಗೃತಿಗಾಗಿ ಪಾದಯಾತ್ರೆ: ಮಾದರಿಯಾದ ಅಯೋಧ್ಯೆಯ ಯುವಕ

- Advertisement -

Latest Posts

Don't Miss