Friday, December 5, 2025

Latest Posts

Tech News: Deepavali: ದೀಪಾವಳಿಗೆ ಈ ಲೈಟ್ ಬಳಸಿ ಮನೆಯ ಅಂದ ಹೆಚ್ಚಿಸಿ

- Advertisement -

Tech News: ಪ್ರತೀವರ್ಷ ದೀಪಾವಳಿಗೆ ಎಣ್ಣೆ, ಬತ್ತಿ, ಹಣತೆ ಹಚ್ಚಿ ಮನೆಗೆ ಅಲಂಕಾರ ಮಾಡೋದು ಹಿಂದೂಗಳ ವಾಡಿಕೆ. ಈ ಪದ್ಧತಿ ಎಂದಿಗೂ ನಿಲ್ಲಬಾರದು. ಆದರೆ ನೀವು ಇದರ ಜತೆ, ಮಾಡರ್ನ್ ಲೈಟ್ ಬಳಸಿ, ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಬಹುದು.

ಫೌಂಟೇನ್ ಸೋಲಾರ್ ಲೈಟ್: ಫೌಂಟೇನ್ ಸೋಲಾರ್ ಲೈಟ್ ಅಂದ್ರೆ, ಗಿಡದಂತೆ ಕಾಣುವ ಚಂದದ ಲೈಟ್. ಗಿಡ ನೆಡುವ ರೀತಿ ಇದನ್ನು ನೀವು ನಿಲ್ಲಿಸಬಹುದು. ಇದಕ್ಕೆ ವಿದ್ಯುತ್ ಅವಶ್ಯಕತೆ ಇಲ್ಲ. ಬದಲಾಗಿ ನೀವು ಇದನ್ನು ಬಿಸಿಲಿನಲ್ಲಿರಿಸಬೇಕು. ಸೂರ್ಯನ ಬೆಳಕಿನಿಂದ ಇದು ಚಾರ್ಜ್ ಆಗುತ್ತದೆ. ಬಳಿಕ ರಾತ್ರಿ ವೇಳೆ ಆನ್ ಮಾಡಿದ್ರೆ, 8 ಗಂಟೆಗಳ ಕಾಲ ಇದು ಕಲರ್ ಕಲರ್ ಬೆಳಕು ನೀಡುತ್ತದೆ. ಮನೆಯ ಅಂದವನ್ನು ಹೆಚ್ಚಿಸುತ್ತದೆ.

ನೆಟ್ ಲೈಟ್ಸ್: ಹಿಂದೆಲ್ಲಾ ಉದ್ದೂದ್ದವಾಗಿರುವ ಮಿಂಚಿನ ಲೈಟ್‌ಗಳಿಂದ ಮನೆಯನ್ನು ಅಲಂಕರಿಸುತ್ತಿದ್ದರು. ಆದರೆ ಈಗ ನೀವು ಸುಲಭವಾಗಿ ಮನೆಗೆ ಲೈಟ್ ಅಲಂಕಾರ ಮಾಡಬಹುದು. ನೆಟ್ ಲೈಟ್ ಬಳಸಿ, ಸುಲಭವಾಗಿ ದೀಪಾವಳಿ ಅಲಂಕಾರ ಮಾಡಬಹುದು. ನೆಟ್ ಲೈಟ್ ಅಂದ್ರೆ ಬಲೆಯ ರೀತಿಯೇ ಲೈಟ್ ಇರುತ್ತದೆ. ಇದನ್ನು ಸುಲಭವಾಗಿ ಮನೆ, ಸಾಲು ಸಾಲು ಗಿಡಗಳ ಮೇಲೆ ಹರಡಿದರೆ ಆಯಿತು. ಕರೆಂಟ್ ಕನೆಕ್ಟ್ ಮಾಡಿ, ಲೈಟ್ ಆನ್ ಮಾಡಿದೆ, ಝಗಮಗ ಝಗಮಗ .

ಡೆಕ್ ಲೈಟ್ಸ್: ಡೆಕ್ ಲೈಟ್ ಅಂದ್ರೆ ಚೌಕಾಕಾರದ ಮೆಟ್ಟಿಲಿಗೆ ಅಟ್ಯಾಚ್ ಮಾಡಬಹುದಾದ ಲೈಟ್. ಇದನ್ನು ನೀವು ಅಂಟಿಸಬಹುದು ಅಥವಾ ಸ್ಕ್ರೂ ಹಾಕಬಹುದು. ಇದು ಸೂರ್ಯನ ಬೆಳಕಿನಿಂದ ಚಾರ್ಜ್ ಆಗಿ ಬೆಳಕು ನೀಡುತ್ತದೆ.

ಆಟೋಮೆಟಿಕ್ ಲೈಟ್: ಇದು ದೀಪಾವಳಿಗೆ ಮಾತ್ರವಲ್ಲ. ಬದಲಾಗಿ ಯಾವಾಗ ಬೇಕಾದ್ರೂ ಬಳಸಬಹುದು. ಮನೆಯಲ್ಲಿ ಹಿರಿಯರಿದ್ದು, ಮಕ್ಕಳಿದ್ದು, ಮೆಟ್ಟಿಲು ಏರುವಾಗ ಕತ್ತಲಲ್ಲಿ ಕಾಣುವುದಿಲ್ಲವೆಂದಲ್ಲಿ ನೀವು ಮೆಟ್ಟಿಲಿಗೆ ಈ ಲೈಟ್ ಹಾಕಬೇಕು. ನಾವು ನಡೆದಾಡುತ್ತಿದ್ದಂತೆ, ಲೈಟ್ ತಾನಾಗಿಯೇ ಆನ್ ಆಗುತ್ತದೆ. ನಾವು ಹೋಗಿ ಕೆಲ ಸಮಯದ ಬಳಿ ಮತ್ತೆ ಆಫ್ ಆಗುತ್ತದೆ. ಇದಕ್ಕೆ ಚಾರ್ಜರ್ ಕೂಡ ಇರುತ್ತದೆ.

- Advertisement -

Latest Posts

Don't Miss