Thursday, October 16, 2025

Latest Posts

Tech News: ವಿವೋ ಸಮೀಕ್ಷೆಯಲ್ಲಿ ಮೊಬೈಲ್ ಬಗ್ಗೆ ಶಾಕಿಂಗ್ ಸಂಗತಿ ಬಯಲು

- Advertisement -

Tech News: ಮೊಬೈಲ್ ಬಂದ ಮೇಲೆ ನಮ್ಮೆಲ್ಲರ ಜೀವನವೇ ಚೇಂಜ್ ಆಗಿಹೋಯ್ತು. ಈ ಮೊದಲು ಪತ್ರ ಬರೆದು, ಅದನ್ನು ಕಳುಹಿಸಿ, ಅದರಿಂದ ಉತ್ತರ ಬರುವವರೆಗೂ ಕಾದು, ಬಂದ ಕಾಗದವನ್ನು ಓದಿ, ಜೋಪಾನವಾಗಿ ಮಡಿಚಿಟ್ಟುಕೊಳ್ಳುತ್ತಿದ್ದೆವು. ಆಗೆಲ್ಲ ಸಂಬಂಧ ಅಷ್ಟು ಗಟ್ಟಿಮುಟ್ಟಾಗಿತ್ತು. ಈಗ ಮೊಬೈಲ್ ಬಂದಿದೆ. ಬೇಕಾದಾಗ ಕಾಲ್ ಮಾಡಿ ಮಾತನಾಡಬಹುದು. ಸಂದೇಶ ಕಳುಹಿಸಬಹುದು. ಮನೆಯಲ್ಲೇ ಕೂತು, ಮೊಬೈಲ್‌ ಮೂಲಕ ಕೆಲಸ ಮಾಡಬಹುದು.

ಇದೆಲ್ಲ ಮೊಬೈಲ್ ಬಳಕೆಯಿಂದ ನಮಗಾಗುತ್ತಿರುವ ಲಾಭದ ಮಾತು. ಆದರೆ ಮೊಬೈಲ್ ಬಳಕೆಯಿಂದಲೇ ಅದೆಷ್ಟೋ ಸಂಬಂಧಗಳು ನಾಶವಾಗಿದೆ ಅನ್ನೋದು ಕೂಡ ಅಷ್ಟೇ ಕಹಿಯಾದ ಸತ್ಯ. ಹೌದು ವಿವೋ ನಡೆಸಿದ ಸಮೀಕ್ಷೆಯ ಪ್ರಕಾರ, ಮೊಬೈಲ್ ಬಳಕೆಯಿಂದಾಗಿ ಜಗತ್ತಿನ ನೆಮ್ಮದಿಯೇ ನಾಶವಾಗಿ ಹೋಗಿದೆ.

ಯಾಕಂದ್ರೆ ಈಗ ಎಲ್ಲಿ ಹೋದರೂ ಮೊಬೈಲ್ ಬೇಕು. ಒಂದು ಹೊತ್ತು ಊಟ ಬೇಕಾದ್ರೂ ಬಿಟ್ಟಾರು, ಮೊಬೈಲ್ ಬಿಡರು ಅನ್ನೋ ಪರಿಸ್ಥಿತಿ. ಊಟ ಮಾಡುವಾಗ, ನಿದ್ದೆ ಮಾಡುವ ಮುನ್ನ, ಟಿವಿ ನೋಡುವಾಗ, ವಾಶ್ ರೂಮಿಗೆ ಹೋದಾಗ, ಪ್ರಯಾಣಿಸುವಾಗ ಎಲ್ಲಿ ಹೋದರೂ ಮೊಬೈಲ್ ಬೇಕೇ ಬೇಕು. ಹೀಗಿರುವಾಗ ನಡೆದಿರುವ ಸಮೀಕ್ಷೆ ಹೇಳುವುದೇನೆಂದರೆ, ಮೊಬೈಲ್ ಬಳಕೆಯಿಂದ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆಯಂತೆ.

ಮೊಬೈಲ್ ಬಳಕೆ ಹೆಚ್ಚಾಗಿ, ಪೋಷಕರು, ಸಂಗಾತಿ, ಮತ್ತು ಮಕ್ಕಳೊಂದಿಗಿನ ಸಂಬಂಧಗಳು ನಾಶವಾಗುತ್ತಾ ಬರುತ್ತಿದೆ ಅಂತಾ ಸಮೀಕ್ಷೆ ಬಂದಿದೆ. ಅಲ್ಲದೇ, ಹಲವು ಸಂಬಂಧಗಳು ಮುರಿದು ಬೀಳಲು ಮೊಬೈಲ್ ಕಾರಣವಾಗಿದೆಯಂತೆ. ಅದರಲ್ಲಿ ಬರುವ ಮೆಸೇಜ್, ಕಾಲ್, ಚಾಟಿಂಗ್ ಇವುಗಳಿಂದಲೇ ಸಂಬಂಧಗಳು ಮುರಿದು ಬಿದ್ದಿದೆ.

ಅಲ್ಲದೇ, ಮಕ್ಕಳು ಶಾಲೆಗೆ ಹೋಗಲು ಶುರು ಮಾಡುವಾಗಲೇ, ಕೆಲವು ಪೋಷಕರು ಅವರಿಗೆ ಸಪರೇಟ್ ಆಗಿ ಸ್ಮಾರ್ಟ್ ಫೋನ್ ಕೊಡಿಸಲು ಶುರು ಮಾಡಿದ್ದಾರೆ. ಅದು ಸ್ಮಾರ್ಟ್ ಫೋನ್ ನೋಡಿ ಕಾಲ ಕಳೆದಷ್ಟು, ಅಪ್ಪ ಅಮ್ಮ ಫ್ರೀಯಾಗಿ ಇರಬಹುದು ಎಂಬುದು ಮಾಡರ್ನ್ ಪೋಷಕರ ಉಪಾಯ. ಇದರಿಂದಲೇ ಅರ್ಧದಷ್ಟು ಮಕ್ಕಳ ಆರೋಗ್ಯದ ಜೊತೆಗೆ, ಭವಿಷ್ಯವೂ ಹಾಳಾಗುತ್ತಿದೆ.

ಇನ್ನು ವಾಟ್ಸಪ್‌ ಬಂದ ಮೇಲೆ ನಿಜವಾದ ಸಂಬಂಧ ಹಾಳಾಗಲು ಶುರುವಾಗಿದ್ದು. ಸ್ಟೇಟಸ್ ಹಾಕುವುದು, ಗ್ರೂಪ್‌ ಮಾಡುವುದು ಇವೆಲ್ಲವೂ ಜನರಿಗೆ ಸಂಬಂಧಕ್ಕೂ ಮೀರಿದ್ದು ಎನ್ನಿಸಲು ಶುರುವಾಗಿದೆ. ಮೊಬೈಲೇ ಇಲ್ಲದ ಸಮಯದಲ್ಲಿ ಇದೆಲ್ಲದ ಗೊಜೇ ಇರಲಿಲ್ಲ. ಆದರೆ ಈಗ ಗ್ರೂಪ್‌ನಿಂದ ಲೆಫ್ಟ್ ಆದರೆ, ಗುಣ, ನಡುವಳಿಕೆಯ ಮೇಲೆ ಪ್ರಶ್ನೆ ಎಬ್ಬಿಸುವಷ್ಟು ಜನ ಮುಂದುವರಿದಿದ್ದಾರೆ. ಇನ್ನು ಹುಟ್ಟುಹಬ್ಬ, ಮ್ಯಾರೇಜ್ ಆ್ಯನಿವರ್ಸರಿಗೆ ಸ್ಟೇಟಸ್ ಹಾಕದೇ ಇದ್ದರೆ, ಆತ ಅಪರಾಧ ಮಾಡಿದ ರೇಂಜಿಗೆ ಮಾತಿನಲ್ಲೇ ಶಿಕ್ಷಿಸಲ್ಪಡುತ್ತಾರೆ. ಇದೇ ಕಾರಣಕ್ಕೆ ಸಂಬಂಧಗಳು ಹಾಳಾಗುತ್ತಿರುವುದು.

- Advertisement -

Latest Posts

Don't Miss