ಕನ್ನಡದ ಪ್ರತಿಷ್ಠಿತ ಸುದ್ದಿವಾಹಿನಿಯಾಗಿ ಬೆಳೆದುನಿಂತಿರುವ ಪಬ್ಲಿಕ್ ಟಿವಿಗೆ ಇಂದಿಗೆ ಹತ್ತು ವರ್ಷಗಳ ಸಂಭ್ರಮ. ಪತ್ರಿಕಾ ಮಾಧ್ಯಮದ ಹಿರಿಯ ವರದಿಗಾರರಾಗಿದ್ದ ಹೆಚ್.ಆರ್ ರಂಗನಾಥ್ ಒಬ್ಬ ಸಾಮಾನ್ಯನಾಗಿ ಹೊಸ ಉದ್ಯಮವನ್ನು ಕಟ್ಟಿ ಬೆಳೆಸಿದ ಪರಿ ಒಂದು ಪ್ರೇರಣಾದಾಯಿ ಕಥೆ. ಸುವರ್ಣನ್ಯೂಸ್‌ನಲ್ಲಿ ಮುಖ್ಯಸ್ಥರಾಗಿ ೨೦೧೦ರವರೆಗೂ ಕೆಲಸ ಮಾಡಿದ ಹೆಚ್.ಆರ್ ರಂಗನಾಥ್ ಇದ್ದದ್ದನ್ನು ಇದ್ದಂತೆ ಹೇಳೋ ನೇರವಾದಿ. ಈ ಕಾರಣದಿಂದಲೇ ಅವರು ರಾಜ್ಯದ ಜನತೆಗೆ ಇಷ್ವಾಗಿದ್ದೂ ಕೂಡ.
ಪ್ರತೀದಿನ ರಾತ್ರಿ 9 ಗಂಟೆಗೆ ಪಬ್ಲಿಕ್ ಟಿವಿಯಲ್ಲಿ ಹೆಚ್‌ಆರ್ ರಂಗನಾಥ್ ನಡೆಸಿಕೊಡೋ ಬಿಗ್‌ಬುಲೆಟಿನ್ ನೋಡೋ ದೊಡ್ಡ ವರ್ಗವೇ ರಾಜ್ಯದಲ್ಲಿದೆ. ಇದಕ್ಕೆ ಕಾರಣ ರಂಗನಾಥ್ ಅವರ ಖಡಕ್ ಮಾತು, ರಾಜಕಾರಣಿಗಳಿಗೆ ಯಾವುದೇ ಮುಲಾಜಿಗೆ ಒಳಗಾಗದೇ ಚಾಟಿ ಬೀಸೋ ರೆಬೆಲ್ ಶೈಲಿ. ಪಬ್ಲಿಕ್ ಟಿವಿ ನಂತರ ಪಬ್ಲಿಕ್ ಮ್ಯೂಸಿಕ್ ಆರಂಭಿಸಿದ ಜನರ ಪ್ರೀತಿಯ ರಂಗಣ್ಣ ಪಬ್ಲಿಕ್ ಮೂವೀಸ್ ಕೂಡ ಆರಂಭಿಸಿ ಯಶಸ್ಸು ಕಂಡರು.
ಮಾಧ್ಯಮರಂಗದಲ್ಲಿ ಮಹಾಶಕ್ತಿಯಾಗಿ ಬೆಳೆಯುತ್ತಿರೋ ರೈಟ್‌ಮನ್ ಮೀಡಿಯಾ ಸಂಸ್ಥೆಯ ಮೂಲಕ ನೂರಾರು ಯುವಪ್ರತಿಭೆಗಳಿಗೆ ಅವಕಾಶ ಕೊಟ್ಟು ಉತ್ತಮ ಜರ್ನಲಿಸ್ಟ್ಗಳನ್ನಾಗಿ ರೂಪಿಸ್ತಿರೋ ರಂಗನಾಥ್ ಹೆಚ್.ಆರ್. ಈ ಸಂಭ್ರಮದಲ್ಲಿ ನಾವೂ ಭಾಗಿಯಾಗುತ್ತಿದ್ದೇವೆ, ಪಬ್ಲಿಕ್ ಬಳಗಕ್ಕೆ ಕರ್ನಾಟಕ ಟಿವಿ ಕಡೆಯಿಂದ ಅಭಿನಂದನೆಗಳು ಮತ್ತು ಶುಭಾಶಯಗಳು



