ಭಾರತದ ಮಹಿಳಾ ಕ್ರಿಕೆಟ್ ತಂಡವು ಇಂದಿನಿಂದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿರುದ್ದ ಪಿಂಕ್ ಬಾಲ್ ಟೆಸ್ಟ್ ಆಡಲಿದೆ. ಮಿಥಾಲಿ ರಾಜ್ ಸಾರಥ್ಯದ ಮತ್ತು ಮೆಗ್ ಲ್ಯಾನಿಂಗ್ ನೇತೃತ್ವದ ಅತಿಥೇಯ ಆಸ್ಟ್ರೇಲಿಯಾ ಮಹಿಳೆಯರ ತಂಡಗಳ ನಡುವೆ ಕ್ವೀನ್ಸ್ ಲ್ಯಾಂಡ್‌ನಲ್ಲಿ ಇಂದಿನಿಂದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ನೆಡೆಯಲಿದೆ. 3 ಪಂದ್ಯಗಳ ಏಕದಿನ ಹಾಗೂ ಟಿ-20 ಸರಣಿ ನೆಡೆಯಲಿದ್ದು ಅದರ ಜೊತೆಗೆ ಒಂದು ಟೆಸ್ಟ್ ಪಂದ್ಯ ಆಡಲಿದೆ.
15 ವರ್ಷಗಳ ಬಳಿಕ ಭಾರತ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯವನ್ನು ಆಡುತ್ತಿರುವ 2 ತಂಡಗಳಿಗೆ ಇದು ಪ್ರಮುಖ ಪಂದ್ಯವಾಗಿದೆ. ಅದರಲ್ಲೂ ಭಾರತ ತಂಡ ವಿಶೇಷವಾಗಿ ಹಗಲು –ರಾತ್ರಿ ಪಂದ್ಯಗಳನ್ನು ಆಡುತ್ತಿರುವುದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು. ಆಸ್ಟ್ರೇಲಿಯಾ ತಂಡ ಈಗಾಗಲೇ ಪಿಂಕ್ ಬಾಲ್ ಪಂದ್ಯವನ್ನು ಆಡಿದೆ, ಆಸ್ಟ್ರೇಲಿಯಾ ತಂಡದ ಬೌಲಿಂಗ್ ವಿಭಾಗವು ಸಧೃಡವಾಗದೆ. ಇನ್ನು ಮಿಥಾಲಿ ರಾಜ್ ಹೊರತು ಪಡಿಸಿ ಮತ್ತ್ಯಾವ ಆಟಗಾರರಿಗೂ ಅನುಭವವಿರದ ಕಾರಣ ಭಾರತದ ಬ್ಯಾಟರ್‌ಗಳಿಗೆ ಕಷ್ಟ ಆಗಬಹುದು.
ಮಂಜುನಾಥ್ ದೇವಾಂಗ ಶೆಟ್ಟಿ, ನ್ಯೂಸ್ ಡೆಸ್ಕ್- ಕರ್ನಾಟಕ ಟಿವಿ