Gadag News: ಗದಗ: ಹಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಬರಲಿ ಎಂದು, ತರಹೇವಾರಿ ರೀತಿಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ನಿನ್ನೆ ವಿಜಯಪುರದಲ್ಲಿ ಸ್ಮಶಾನದ ಗೋರಿಗಳನ್ನು ಅಗೆದು ನೀರು ಹಾಕಿದ್ದರು. ಇನ್ನೊಂದೆಡೆ ಕತ್ತೆಗಳ ಮದುವೆ ಮಾಡಿಸಿದ್ದರು. ಇಂದು ಗದಗದಲ್ಲಿ ಮಳೆ ಬರಲಿ ಎಂದು ಗೊಂಬೆಗಳ ಮದುವೆ ಮಾಡಲಾಗಿದೆ.
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮೈಸೂರು ಮಠದಲ್ಲಿ ಮದುವೆ ಕಾರ್ಯ ನಡೆದಿದ್ದು, ರೈತರೆಲ್ಲ ಸೇರಿ ಸಂಪ್ರದಾಯಬದ್ಧವಾಗಿ ಗೊಂಬೆಗಳ ಮದುವೆ ಕಾರ್ಯ ಮಾಡಿದ್ದಾರೆ.
ಸಂಪ್ರದಾಯ ಬದ್ದವಾಗಿ ಗೊಂಬೆಗಳ ಮದುವೆ ಕಾರ್ಯ ನಡೆದಿದ್ದು, ಗಂಡು ಗೊಂಬೆಗೆ ಹೊಸ ಪಂಚೆ ಟಬಲ್ ಬಾಸಿಂಗ್ ಕೊರಳಿಗೆ ಹಾರ, ಹೆಣ್ಣು ಗೊಂಬೆಗೆ ಸೀರೆ ಅರಿಸಿಣ ಹಚ್ಚಿ ಸುರಗಿ ಶಾಸ್ತ್ರ ಎಲ್ಲವನ್ನೂ ಮಾಡಿ, ಊರು ತುಂಬ ಮೆರವಣಿಗೆಯೂ ಮಾಡಿ, ಮದುವೆ ಮಾಡಲಾಯಿತು. ಈ ಮೂಲಕ ರೈತರು ಮಳೆಗಾಗಿ ವರುಣನಲ್ಲಿ ಪ್ರಾರ್ಥನೆ ಮಾಡಿದರು.
‘ವಿದ್ಯುತ್ ದರ ಹೆಚ್ಚಿಸಿ ಇತರರಿಗೆ ತೊಂದರೆ ತಂದೊಡ್ಡುತ್ತಿರುವುದು ಸರಿಯಾದ ಕ್ರಮವಲ್ಲ’