Hyderabad News: ಮಹಿಳಾ ಉದ್ಯಮಿಯೊಬ್ಬಳ ಮದುವೆ ಪ್ರಪೋಸಲ್ ನಿರಾಕರಿಸಿದ್ದಕ್ಕೆ, ನಿರೂಪಕನನ್ನೇ ಅಪಹರಿಸಿದ್ದು, ಇದೀಗ ಉದ್ಯಮಿ ಜೈಲು ಪಾಲಾಗಿದ್ದಾಳೆ.
ಭೋಗಿರೆಡ್ಡಿ ತ್ರಿಶಾ ಎಂಬುವವರು 5 ಕಂಪನಿಯ ವಾರಸ್ದಾರೆಯಾಗಿದ್ದಾಳೆ. ಆದರೆ ಈಕೆಗೆ ಮದುವೆಯಾಗಿರಲಿಲ್ಲ. ಹಾಗಾಗಿ ಮದುವೆ ಆ್ಯಪ್‌ನಲ್ಲಿ ತನ್ನ ಪ್ರೊಫೈಲ್ ರಿಜಿಸ್ಟರ್ ಮಾಡಿಸಿದ್ದಳು. ಅಲ್ಲಿಯೇ ಪ್ರಣವ್ ಎಂಬ ಆ್ಯಂಕರ್ ಪ್ರೊಫೈಲ್ ಕಂಡು, ಅವನಿಗೆ ರಿಕ್ವೆಸ್ಟ್ ಕಳಿಸಿ, ಚಾಟಿಂಗ್ ಕೂಡ ಮಾಡುತ್ತಿದ್ದಳು. ಪ್ರಪೋಸ್ ಕೂಡ ಮಾಡಿದ್ದು, ಪ್ರಣವ್ ಆ ಪ್ರಪೋಸಲ್‌ಗೆ ಒಪ್ಪಿಗೆ ಸೂಚಿಸಿದ್ದ. ಆದರೆ ಕೆಲ ತಿಂಗಳ ಬಳಿಕ ಅದು ಪ್ರಣವ್ ಹೆಸರಿನಲ್ಲಿರುವ ಫೇಕ್ ಪ್ರೊಫೈಲ್ ಎಂದು ಗೊತ್ತಾಗಿದೆ.
ಬಳಿಕ ಪ್ರಣವ್ ಅವರ ನಂಬರ್ ಪಡೆದು ಎಲ್ಲಾ ವಿಷಯ ಹೇಳಿ, ಪ್ರಪೋಸ್ ಮಾಡಿದ್ದಾಳೆ ತ್ರಿಶಾ. ಆದರೆ ಪ್ರಣವ್ ಈ ಪ್ರಪೋಸಲ್‌ನ್ನು ನಿರಾಕರಿಸಿದ್ದಾನೆ. ಆಗ ಸ್ನೇಹಿತರ ಸಹಾಯ ಪಡೆದು ತ್ರಿಶಾ, ಪ್ರಣವ್‌ನನ್ನ ಕಿಡ್ನ್ಯಾಪ್ ಮಾಡಿದ್ದಾಳೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡ ಬಂದ ಪ್ರಣವ್, ಪೊಲೀಸ್ ಠಾಣೆಯಲ್ಲಿ ತ್ರಿಶಾ ವಿರುದ್ಧ ದೂರು ದಾಖಲಿಸಿದ್ದಾನೆ. ಇದೀಗ ತ್ರಿಶಾ ಪೊಲೀಸರ ಅತಿಥಿಯಾಗಿದ್ದಾಳೆ.
ಇಬ್ಬರು ರಾಷ್ಟ್ರಮಟ್ಟದ ನಾಯಕರಿಗೆ ಸಾವಿನ ಕಂಟಕ ಕಾದಿದೆ..! ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ
ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಅರವಿಂದ ಬೆಲ್ಲದ್
ಬೈಕ್ ರೈಡ್ ಮೂಲಕ ಕಾಶ್ಮೀರಕ್ಕೆ ಸೊಲೋ ಟ್ರಿಪ್: ಹೊಸ ದಾಖಲೆ ಬರೆದ ಧಾರವಾಡ ಯುವತಿ