Tuesday, February 4, 2025

Latest Posts

ಟ್ಯಾಕ್ಸ್ ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ: 12 ಲಕ್ಷ ಸಂಬಳದವರೆಗೆ ಟ್ಯಾಕ್ಸ್ ಇಲ್ಲ

- Advertisement -

Budget News: ಇಂದು 2025ರ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದಾರೆ. ಟ್ಯಾಕ್ಸ್ ಕಟ್ಟುವ ಜನರಿಗೆ ನಿರ್ಮಲಾ ಸೀತಾರಾಮನ್ ಸ್ವಲ್ಪ ಮಟ್ಟಿಗಿನ ತಲೆಬಿಸಿ ಕಡಿಮೆ ಮಾಡಿದ್ದು, 12 ಲಕ್ಷ ಸಂಬಳ ಇರುವವರು ಟ್ಯಾಾಕ್ಸ್ ಕಟ್ಟುವ ಅಗತ್ಯವಿಲ್ಲ. ಮತ್ತು ಯಾರಿಗೆ ವಾರ್ಷಿಕ ಆದಾಯ 12 ಲಕ್ಷಕ್ಕೂ ಮೀರಿ ಇದೆಯೋ, ಅಂಥವರು ಟ್ಯಾಕ್ಸ್ ಕಟ್ಟಬೇಕು ಎಂದು ಬಜೆಟ್‌ ಮಂಡಿಸಲಾಗಿದೆ.

ಎರಡು ವರ್ಷದ ಹಿಂದೆ ವರ್ಷಕ್ಕೆ 3 ಲಕ್ಷ ರೂಪಾಯಿ ಸಂಬಳವಿದ್ದರೆ, ತೆರಿಗೆ ಕಟ್ಟುವ ಅಗತ್ಯವಿಲ್ಲ ಎಂದಿತ್ತು. ಬಳಿಕ 5 ಲಕ್ಷದವರೆಗೆ ಸಂಬಳವಿದ್ದರಿಗೆ ಟ್ಯಾಕ್ಸ್ ಫ್ರೀ ಎಂದಾಗಿತ್ತು. ಕಳೆದ ವರ್ಷ 5ಲಕ್ಷದಿಂದ 7 ಲಕ್ಷದವರೆಗೆ ಸಂಬಳ ಪಡೆಯುವವರಿಗೆ ಟ್ಯಾಕ್ಸ್ ಕಟ್ಟಬೇಕಿಲ್ಲವೆಂದು ಬಜೆಟ್ ಮಂಡಿಸಲಾಗಿತ್ತು. ಇದೀಗ 12 ಲಕ್ಷದವರೆಗೆ ಅಂದ್ರೆ ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳವಿದ್ದರೂ, ಅಂಥವರು ಟ್ಯಾಕ್ಸ್ ಕಟ್ಟುವ ಅಗತ್ಯವಿಲ್ಲವೆಂದು ಬಜೆಟ್ ಮಂಡಿಸಲಾಗಿದೆ.

ಎಲ್ಲ ರೀತಿಯಲ್ಲೂ ಟ್ಯಾಕ್ಸ್ ಹೇರುವ ಸರ್ಕಾರದ ನೀತಿಯನ್ನು ಹಲವರು ಖಂಡಿಸಿದ್ದರು. ಅಲ್ಲದೇ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನಿರ್ಮಲಾ ಸೀತಾರಾಮನ್‌ರನ್ನು, ಟ್ಯಾಕ್ಸ್ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಇದೀಗ 12 ಲಕ್ಷ ವಾರ್ಷಿಕ ಆದಾಯ ಇರುವವರಿಗೆ ಟ್ಯಾಕ್ಸ್ ಕಟ್ಟುವ ಕಷ್ಟವಿಲ್ಲ. ಮುಂದಿನ ವಾಾರ ಹೊಸ ಆದಾಯ ಮಂಡನೆ ಮಾಡಲಿದ್ದು, ಆಗ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗಲಿದೆ.

- Advertisement -

Latest Posts

Don't Miss