Thursday, August 21, 2025

Latest Posts

ಮತಾಂತರವೇ ನಾಲ್ಕು ಜನರ ಆತ್ಮಹತ್ಯೆಗೆ ಕಾರಣ..!

- Advertisement -

ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ನಾಲ್ವರ ಆತ್ಮಹತ್ಯೆ ಕೇಸ್ ಗೆ ಮತಾಂತರ ಯತ್ನವೇ ಕಾರಣ ಎಂಬುದು ಮಂಗಳೂರು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಮೃತ ವಿಜಯಲಕ್ಷ್ಮಿಯನ್ನ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ನೂರ್ ಜಹಾನ್ ಎಂಬ ಮಹಿಳೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಮಂಗಳೂರಿನ ಮಾರ್ಗನ್ಸ್ ಗೇಟ್ ನಲ್ಲಿ ನಾಲ್ವರು ಆತ್ಮಹತ್ಯೆ ಕೇಸ್ ನಲ್ಲಿ ಮತಾಂತರ ಆರೋಪ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿದ್ದು, ವಿಜಯಲಕ್ಷ್ಮೀ ತಮ್ಮ ಇಬ್ಬರು ಮಕ್ಕಳ ಜತೆ ಜಹಾನ್ ಮನೆಯಲ್ಲಿ ಇದ್ದಳು. ಜಹಾನ್, ನಾಗೇಶ್ ಜತೆ ಸಾಕಷ್ಟು ಬಾರಿ ಗಲಾಟೆ ಮಾಡಿದ್ದಳು. ನಾಗೇಶ್, ನೂರ್ ಜಹಾನ್ ಮನೆಗೆ ಹೋಗಿ ನನ್ನ ಪತ್ನಿ, ಮಕ್ಕಳನ್ನ ಕಳುಹಿಸಿ ಎಂದು ಕೇಳಿಕೊಳ್ಳುತ್ತಿದ್ದರು. ನಾಗೇಶ್ ತನ್ನ ಮಕ್ಕಳು, ಪತ್ನಿ ನಾಪತ್ತೆ ಎಂದು ದೂರು ನೀಡಿದ್ದ. ಆದರೆ ಗಂಡ ನನಗೆ ಹಿಂಸೆ ನೀಡುತ್ತಾರೆ ಎಂದು ಪತ್ನಿ ಪ್ರತಿದೂರು ನೀಡಿದ್ದಳು. ಮೂವರನ್ನ ಕೊಲೆ ಮಾಡಿ ನಾಗೇಶ್ ನೇಣು ಹಾಕಿಕೊಂಡಿದ್ದಾನೆ ಎಂದು ಆಯುಕ್ತ ಶಶಿಕುಮಾರ್ ವಿವರಿಸಿದ್ದಾರೆ.

ನೂರ್ ಜಹಾನ್ ಮತ್ತೊಂದು ಮದುವೆ ಮಾಡುವ ಭರವಸೆ ನೀಡಿದ್ದಳು. ನಾಗೇಶ್​ಗೆ ಕುಡಿಯುವ ಚಟ ಇತ್ತು. ಡಿಸೆಂಬರ್ 7ರ ರಾತ್ರಿ ಮೊದಲು ತಲೆದಿಂಬಿನಿಂದ ಉಸಿರುಗಟ್ಟಿಸಿ ಪತ್ನಿ ವಿಜಯಲಕ್ಷ್ಮೀಯನ್ನ ನಾಗೇಶ್ ಕೊಂದಿದ್ದ. ನಂತರ ತನ್ನ ಮಗಳಾದ ಸಪ್ನಳನ್ನ ಮೂಗು ಬಾಯಿ ಮುಚ್ಚಿ ಸಾಯಿಸಿದ್ದಾನೆ. ಮಗ ಸಮರ್ಥ್‌ನನ್ನ ಕುತ್ತಿಗೆ ಹಿಸುಕಿ ನಾಗೇಶ್ ಕೊಲೆ ಮಾಡಿದ್ದಾನೆ. ನಾಗೇಶ್ ಡಿಸೆಂಬರ್‌ 7 ರ ರಾತ್ರಿ ಮೂರು ಶವಗಳ ಮಧ್ಯೆಯೇ ನಿದ್ದೆ ಮಾಡಿದ್ದ. ಡಿಸೆಂಬರ್ 8ರ ಬೆಳಗ್ಗೆ ಎಎಸ್‌ಐ ಚಂದ್ರಶೇಖರ್‌ಗೆ ವಾಯ್ಸ್ ಸಂದೇಶ್ ಕಳುಹಿಸಿದ್ದ. ಜೊತೆಗೆ ಆರೋಪಿ ನೂರ್ ಜಹಾನ್ ಪೋಟೋ ಸಹ ಕಳುಹಿಸಿದ್ದ. ಘಟನಾವಳಿಗಳ ಬಗ್ಗೆಯೂ ನಾಗೇಶ್ ಸಂಪೂರ್ಣ ಮಾಹಿತಿಯನ್ನ ಕೊಟ್ಟಿದ್ದ ಎಂದು ಆಯುಕ್ತ ಶಶಿಕುಮಾರ್ ವಿವರವಾಗಿ ತಿಳಿಸಿದ್ದಾರೆ.

- Advertisement -

Latest Posts

Don't Miss