National News: ಅಕ್ಟೋಬರ್ 7ರಂದು ಗಾಜಾ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ್ದು, ಇಸ್ರೇಲ್ ಮತ್ತು ಪ್ಯಾಲೇಸ್ತೇನಿಗರ ಯುದ್ಧ ಕಾದಾಟ ಈಗಲೂ ಮುಂದುವರಿದಿದೆ. ಗಾಜಾದಲ್ಲಿ 50 ಸಾವಿರ ನಿರಾಶ್ರಿತರಿದ್ದು, ಅವರ ಸ್ಥಿತಿ ನಾವು ಯಾರೂ ಊಹಿಸಲಾರದಷ್ಟು ಚಿಂತಾಜನಕವಾಗಿದೆ. ಆ 50 ಸಾವಿರ ಮಂದಿ ಬರೀ 4 ಟಾಯ್ಲೇಟ್ ಬಳಸಬೇಕು. ಮತ್ತು ಅವರಿಗೆ ಬರೀ 4 ತಾಸಷ್ಟೇ ನೀರು ಕೊಡಲಾಗುತ್ತಿದೆ.
ಗಾಜಾದ ಆಸ್ಪತ್ರೆಯ ನರ್ಸ್ ಈ ಬಗ್ಗೆ ಮಾತನಾಡಿದ್ದು, ಗಾಜಾದ ಚಿಂತಾಜನಕ ಪರಿಸ್ಥಿತಿಯನ್ನು ವಿವರಸಿದ್ದಾರೆ. ಈ ನರ್ಸ್ ಸೇವೆ ಸಲ್ಲಿಸುವ ಶಿಬಿರದಲ್ಲಿ 50 ಸಾವಿರ ನಿರಾಶ್ರಿತರಿದ್ದಾರಂತೆ. ಅವರಿಗೆ 4 ಟಾಯ್ಲೇಟ್, 4 ತಾಸಷ್ಟೇ ನೀರು ಕೊಡಲಾಗುತ್ತಿದೆ. ಅವರು ನಮ್ಮ ಬಳಿ ತಮ್ಮ ಕಷ್ಟವನ್ನು ಹೇಳಿ, ಸಹಾಯ ಕೇಳುತ್ತಾರೆ. ಆದರೆ ಅವರಿಗಾಗಿ ಚಿಕಿತ್ಸೆ ಬಿಟ್ಟು, ನಾವು ಮತ್ತೇನೂ ಮಾಡಲಾಗುತ್ತಿಲ್ಲ. ಅಷ್ಟು ಅಸಹಾಯಕರಾಗಿದ್ದೇವೆ ಎಂದು ನರ್ಸ್ ತಿಳಿಸಿದ್ದಾರೆ.
ಇಷ್ಟೇ ಅಲ್ಲದೇ, ಗಾಜಾ ಪಟ್ಟಿಯಲ್ಲಿರುವ ನರ್ಸ್ ಮತ್ತು ವೈದ್ಯರುಗಳು ತಾವು ಸಾಯುತ್ತೇವೆ ಎಂದು ತಿಳಿದಿದ್ದರೂ ಕೂಡ, ಹೆದರಿಕೊಂಡೇ ಚಿಕಿತ್ಸೆ ನೀಡಿ ಬದುಕುತ್ತಿದ್ದಾರೆ. ಗಾಜಾದಲ್ಲಿ ನಮ್ಮನ್ನು ರಕ್ಷಿಸಲು 26 ದಿನದಲ್ಲಿ ನಮ್ಮನ್ನು 5 ಬಾರಿ ಸ್ಥಳಾಂತರಿಸಲಾಗಿದೆ. ಏಕೆಂದರೆ ಗಾಜಾದಲ್ಲಿ ಅಡಗಿ ಕುಳಿತು ಬದುಕಲು, ಯಾವುದೇ ಸುರಕ್ಷಿತ ಜಾಗವಿಲ್ಲ ಎಂದು ನರ್ಸ್ ವಿವರಿಸಿದ್ದಾರೆ.
ಇದು ಜನರ ಪರಿಸ್ಥಿತಿಯಾದರೆ, ಯುದ್ಧದಲ್ಲಿ ಗಾಯಗೊಂಡು, ಆಸ್ಪತ್ರೆ ಸೇರಿದವರ ಪರಿಸ್ಥಿತಿಯೇ ಬೇರೆ. ಆಸ್ಪತ್ರೆಗೆ ಬರುವವರ ಸಂಖ್ಯೆ ಸಾವಿರ ಸಾವಿರವಾದ ಕಾರಣ, ಚಿಕಿತ್ಸೆ ನೀಡುತ್ತಿದ್ದಂತೆ, ಅವರನ್ನು ಡಿಸ್ಚಾರ್ಜ್ ಮಾಡಿ, ಕಳಿಸಲಾಗುತ್ತಿದೆ ಎಂದು ನರ್ಸ್ ಮಾತನಾಡಿದ್ದಾರೆ. ಇದರೊಂದಿಗೆ ಖುಷಿಯ ವಿಚಾರ ಅಂದ್ರೆ, ಈ ನರ್ಸ್ ಈಗ ಕುಟುಂಬದೊಂದಿಗೆ ತನ್ನ ತವರನ್ನು ಸೇರಿದ್ದಾರಂತೆ. ಹಾಗಾಗಿ ಸುರಕ್ಷಿತ ಸ್ಥಳದಲ್ಲಿ ಇದ್ದೇನೆ ಎಂಬ ಭಾವನೆ ಬಂದಿದೆ ಎಂದಿದ್ದಾರೆ. ಆದರೆ ನಾನೊಬ್ಬಳೆ ಸುರಕ್ಷಿತವಾಗಿದ್ದೇನೆ. ನನ್ನ ಸಹೋದ್ಯೋಗಿಗಳು ಮತ್ತು ಗಾಜಾದ ಜನ ಇನ್ನೂ ಅಸುರಕ್ಷತೆಯಿಂದ ಇದ್ದಾರೆ ಎನ್ನುವ ದುಃಖವೂ ನನಗಿದೆ ಎಂಬುದು ನರ್ಸ್ ಮನದಾಳದ ಮಾತು.
ಗಾಜಾವನ್ನು ಆಳಲು ಪ್ರಯತ್ನಿಸಬೇಡಿ ಎಂದು ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ
ಇಸ್ರೇಲ್- ಹಮಾಸ್ ಯುದ್ಧ: ಹಿಂಸೆ ನಿಲ್ಲಿಸಿ, ಶಾಂತಿ ಮಾತುಕತೆ ಪ್ರಾರಂಭಿಸಿ ಎಂದು ಸಲಹೆ ನೀಡಿದ ಭಾರತ