ತಮಿಳುನಾಡು :Mi-17V5 ಹೆಲಿಕ್ಯಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಹೆಲಿಕ್ಯಾಪ್ಟರ್ ಪತನವಾಗಿದೆ. ಸೇನಾ ಹೆಲಿಕ್ಯಾಪ್ಟರ್ ನಲ್ಲಿ ವಾಯುದಳ, ನೌಕಾದಳ, ಭೂಸೇನೆಯ ಮುಖ್ಯಸ್ಥರಾದ ಬಿಪಿನ್ ರಾವತ್ ರವರು ಕೊಯಂಬತ್ತೂರಿನ ವೆಲ್ಲಿಂಗ್ಟನ್ ನಲ್ಲಿರುವ ಸೇನಾ ಕಾಲೇಜಿನಲ್ಲಿ ಸೆಮಿನಾರ್ ಉಪನ್ಯಾಸ ಕೊಡಲು 6 ಅಧಿಕಾರಿಗಳು ಹಾಗೂ ಕುಟುಂಬದ ಜೊತೆ ತೆರಳುತ್ತಿದ್ದಾಗ ಹೆಲಿಕ್ಯಾಪ್ಟರ್ ಪತನವಾಗಿದೆ. ಹೆಲಿಕ್ಯಾಪ್ಟರ್ ನಲ್ಲಿ ಹದಿನಾಲ್ಕು ಜನ ತೆರಳುತ್ತಿದ್ದರು. ಇನ್ನು ಪತನವಾದ ಸ್ಥಳದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಉಳಿದವರ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ, ಹಾಗೂ ಮೂರು ಜನರನ್ನು ರಕ್ಷಣೆ ಮಾಡಿದ್ದು ಅದರಲ್ಲಿ ಬಿಪಿನ್ ರಾವತ್ ಅವರು ಸಹ ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಜನಾಥ್ ಸಿಂಗ್ ರವರು ಪ್ರಧಾನಮಂತ್ರಿ ಮೋದಿಯವರಿಗೆ ಮಾಹಿತಿಯನ್ನು ತಿಳಿಸಿದ್ದು ರಕ್ಷಣ ಸಚಿವ ರಾಜನಾಥ್ ಸಿಂಗ್ ರವರು ಲೋಕಸಭೆಯಲ್ಲಿ ಮಾಹಿತಿ ನೀಡಲಿದ್ದಾರೆ. ಇನ್ನು ಹೇಗೆ ಹೆಲಿಕ್ಯಾಪ್ಟರ್ ಪತನವಾಯಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹೆಲಿಕ್ಯಾಪ್ಟರ್ ಪತನವಾದ ಸ್ಥಳದಲ್ಲಿ ವೆಂಜಾಬ್ ಮೋಹನ್ ಎಂಬ ಅನುಮಾನಸ್ಪದ ವ್ಯಕ್ತಿಯನ್ನು ಕೋಬ್ರಾ ಪಡೆಯಿಂದ crpf ವಶಕ್ಕೆ ಪಡೆದಿದ್ದಾರೆ.

