Political News: ಅಯೋಧ್ಯೆ ಕಾರ್ಯಕ್ರಮಕ್ಕೆ ಆಹ್ವಾನ ಸ್ವೀಕರಿಸಿದವರಲ್ಲಿ ಹಲವು ಗಣ್ಯರು ಅಯೋಧ್ಯೆಗೆ ಪಯಣ ಬೆಳೆಸಿದ್ದಾರೆ. ಕೆಲವರು ಈಗಾಗಲೇ ಅಯೋಧ್ಯೆಗೆ ಹೋಗಿ ಮುಟ್ಟಿದ್ದಾರೆ. ಇನ್ನು ಕೆಲವರು ಇದೀಗ ಹೊರಡುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಅವರ ಕುಟುಂಬಸ್ಥರು ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಹೋಗುತ್ತೇವೆ ಎಂದು ನಿನ್ನೆ ತಾನೇ ಹೆಚ್ಡಿಡಿ ಮಾಧ್ಯಮದವರೊಂದಿಗೆ ಮಾತನಾಡುವಾಗ ಹೇಳಿದ್ದರು.
ಅದರಂತೆ ಇದು ಹೆಚ್.ಡಿ.ದೇವೇಗೌಡರು, ಪತ್ನಿ ಚೆನ್ನಮ್ಮ, ಪುತ್ರ ಹೆಚ್.ಡಿ.ಕುಮಾರಸ್ವಾಮಿ, ಮೊಮ್ಮಗ ನಿಖಿಲ್ ಕುಮಾರ್ ಜೊತೆ ವಿಶೇಷ ವಿಮಾನದಲ್ಲಿ ಇಂದು ಸಂಜೆ ಅಯೋಧ್ಯೆಗೆ ತೆರಳಿದ್ದಾರೆ. ನಾಳೆ ನಿಖಿಲ್ ಹುಟ್ಟುಹಬ್ಬವಿದ್ದು, ಇದೇ ದಿನ ಅಯೋಧ್ಯಾ ರಮಮಂದಿರ ಉದ್ಘಾಟನೆ ಕೂಡ ಇರುವುದು ಅವರ ಹುಟ್ಟುಹಬ್ಬದ ಖುಷಿಯನ್ನು ದುಪ್ಪಟ್ಟು ಮಾಡಿದೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿರುವ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಜಿ ಪ್ರಧಾನಿಗಳು, ನನ್ನ ಪೂಜ್ಯ ತಂದೆಯವರಾದ ಶ್ರೀ ಹೆಚ್.ಡಿ.ದೇವೇಗೌಡ ಅವರು, ಮಾತೃಶ್ರೀ ಶ್ರೀಮತಿ ಚನ್ನಮ್ಮ ಅಮ್ಮನವರು ಹಾಗೂ ನನ್ನ ಪುತ್ರ, ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರ್ ಅವರೊಂದಿಗೆ ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಸಂದರ್ಭ ಎಂದು ಬರೆದುಕೊಂಡಿದ್ದಾರೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿರುವ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಜಿ ಪ್ರಧಾನಿಗಳು, ನನ್ನ ಪೂಜ್ಯ ತಂದೆಯವರಾದ ಶ್ರೀ @H_D_Devegowda ಅವರು, ಮಾತೃಶ್ರೀ ಶ್ರೀಮತಿ ಚನ್ನಮ್ಮ ಅಮ್ಮನವರು ಹಾಗೂ ನನ್ನ ಪುತ್ರ, ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ @Nikhil_Kumar_k ಅವರೊಂದಿಗೆ ಅಯೋಧ್ಯೆಗೆ ಪ್ರಯಾಣ… pic.twitter.com/iNBLRWa5Kr
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 21, 2024
‘ರಾಮ ಕನಸಲ್ಲಿ ಬಂದು ಎಲ್ಲರೂ ಖುಷಿಯಿಂದ ಇದ್ದಾರೆ, ನೀವು ಯಾಕೆ ಹುಚ್ಚರಂತೆ ಮಾಡುತ್ತಿದ್ದೀರಿ ಎಂದು ಕೇಳಿರಬೇಕು’
ಚೆನ್ನೈನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅರ್ಜುನ್ ಸರ್ಜಾ