Sandalwood News: ನಿನ್ನೆ ತಾನೇ UI ಸಿನಿಮಾ ವಾರ್ನರ್ ರಿಲೀಸ್ ಮಾಡಿರುವ ಉಪೇಂದ್ರ, ಇಂದು ಮಂಗಳೂರಿನ ಪ್ರಸಿದ್ಧ ಪುಣ್ಯಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಆಶೀರ್ವಾದ ಪಡೆದಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಅದಕ್ಕೂ ಮುನ್ನ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಉಪೇಂದ್ರ ಅವರೊಂದಿಗೆ ಅವರ ಸಿನಿಮಾ ತಂಡ ಸಾಥ್ ಕೊಟ್ಟಿದೆ.
ಇದಾದ ಬಳಿಕ ಎಲ್ಲರೂ ಸೇರಿ ಕುತ್ತಾರಿನ ಕೊರಗಜ್ಜನ ಸನ್ನಿಧಿಗೆ ಹೋಗಿ, ಅಜ್ಜನ ದರ್ಶನ ಮಾಡಿ, ಆಶೀರ್ವಾದ ಮಾಡಿದ್ದಾರೆ. ಬಳಿಕ ಮಂಗಳೂರಿನಲ್ಲಿ ಯುಐ ಸಿನಿಮಾ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಿನಿಮಾ ಇದೇ ತಿಂಗಳು 20ನೇ ತಾರೀಖಿನಂದು ರಿಲೀಸ್ ಆಗಲಿದ್ದು, ಸಿನಿಮಾ ವಾರ್ನರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ಹಸಿವಿನಿಂದ ಒದ್ದಾಡುವ ಜನರ ಮಧ್ಯೆ ಗನ್ ಹಿಡಿದು ಪೋಸ್ ಕೊಡುವ ಉಪೇಂದ್ರ 2040ರಲ್ಲಿ ಜಗತ್ತು ಹೇಗಿರಲಿದೆ ಎಂದು ತೋರಿಸಲು ಬರುತ್ತಿದ್ದಾರೆ. ಆಗ ಧಿಕ್ಕಾರಕ್ಕಿಂತ, ಅಧಿಕಾರಕ್ಕೆ ಬೆಲೆ ಎಂದು ಉಪೇಂದ್ರ ಡೈಲಾಗ್ ಹೊಡೆದಿದ್ದು, ಈ ಡೈಲಾಗ್ ಫೇಮಸ್ ಆಗಿದೆ.