Doddaballapura : ದುಷ್ಕರ್ಮಿಗಳಿಂದ ಮನೆಯ ಗೋಡಾನ್ ಗೆ ಬೆಂಕಿ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಭುವನೇಶ್ವರಿ ನಗರದ 5 ವಾರ್ಡಿನ ಸಿದ್ದಲಿಂಗಪ್ಪ ಎಂಬುವರರ ಮನೆಯ ಗೋಡಾನ್ ಗೆ  ರಾತ್ರಿ 1 ಗಂಟೆಯ ಸಮಯದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಸಿದ್ದಲಿಂಗಪ್ಪ ಇವರ ಮನೆಯಲ್ಲಿ ಇದ್ದ ಬಾಡಿಗೆದಾರರ   ಒಂದು ಸೈಕಲ್ ಹಾಗೂ 3 ದ್ವಿಚಕ್ರ ವಾಹನಗಳಿಗೆ ಬೆಂಕಿ ತಗುಲಿದ್ದು ಪರಿಣಾಮ ಒಂದು ಸ್ಕೂಟಿ ಹಾಗೂ ಸೈಕಲ್ ಸಂಪೂರ್ಣ ಸುಟ್ಟು ಕರಕಲಾಗಿದೆ‌.

ಅಷ್ಟೆ ಅಲ್ಲದೆ ಮನೆಯ ಮೇಲ್ಚಾವಣಿಯಲ್ಲಿ ಬೆಂಕಿಯ ಹೊಗೆ ಆವರಿಸಿದ್ದು ಬಾಡಿಗೆ ಮನೆಯವರಿಗೆ ಗಾಬರಿ ಉಂಟುಮಾಡಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author