Hassan News: ಹಾಸನ: ಖಾಲಿ ಜಾಗದಲ್ಲಿ ಬೆಳೆದಿದ್ದ ಮುಳ್ಳಿನ ಬೇಲಿಗೆ ಹಚ್ಚಿದ್ದ ಬೆಂಕಿ, ಪಕ್ಕದ ರೈತನ ಜಮೀನಿಗೆ ವ್ಯಾಪಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ಆನಗಳಲೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನರ್ಸರಿಯಲ್ಲಿದ್ದ ಕಾಫಿ, ಅಡಿಕೆ ಗಿಡಗಳು, ನರ್ಸರಿಗೆ ಹಾಕಿದ್ದ ಗ್ರೀನ್ ಮ್ಯಾಟ್, ಪ್ಲಾಸ್ಟಿಕ್ ಪೈಪ್‌ಗಳು ಸುಟ್ಟು ಕರಕಲಾಗಿದೆ. ಗುರು ಎಂಬುವವರಿಗೆ ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಅನೂಪ್, ಆಕಾಶ್ ಎಂಬುವವರು, ಖಾಲಿ ಜಾಗದಲ್ಲಿದ್ದ ಬೇಲಿಗೆ ಬೆಂಕಿ ಹಾಕಿ ತೆರಳಿದ್ದಾರೆ. ಈ ಬೆಂಕಿ ಪಕ್ಕದಲ್ಲೇ ಇದ್ದ ಗುರು ಎಂಬುವವರ ಜಮೀನಿಗೆ ಹತ್ತಿಕೊಂಡಿದೆ. ಸ್ಥಳಕ್ಕೆ ಭೇಟಿ ಕೊಟ್ಟ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿನ ನಂದಿಸಿದ್ದಾರೆ. ಗುರು ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್

