Saturday, July 27, 2024

Latest Posts

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ ಸರ್ಕಾರ

- Advertisement -

ಕಳೆದ ಬಾರಿ ಮೈಮರೆತು ಸರ್ಕಾರ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅಂತೇನು ಮಾರ್ಗಸೂಚಿಯನ್ನು ಹೊರಡಿಸಿರಲಿಲ್ಲ ಈಗಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರು ಹೋಂ ಕ್ವಾರಂಟೈನ್ ಆಗದೆ ಎಲ್ಲೆಂದರಲ್ಲಿ ಓಡಾಡಿ ಕೊರೊನಾ ಹರಡಿತ್ತು. ಈ ಬಾರಿ ಎಚ್ಚೆತ್ತು ಸರ್ಕಾರ ತೀರ್ಮಾನಕ್ಕೆ ಬಂದಿದೆ .
ಕೇಂದ್ರದ ನಿಯಮಗಳ ಪ್ರಕಾರ ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರು ಜನವರಿ 11 ಮಂಗಳವಾರದಿoದ ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ಗೆ ಒಳಗಾಗಬೇಕಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಸ್ಟ್ಯಾಂಡರ್ಡ್ಆ ಪರೇಟಿಂಗ್ ಪ್ರೊಸೀಜರ್( S O P ) ಯನ್ನು ಬಿಡುಗಡೆ ಮಾಡಿದೆ. ಇದು ಜನವರಿ 11 ರಿಂದ ವಿಮಾನ ನಿಲ್ದಾಣಗಳು,ಬಂದರುಗಳು ಮತ್ತು ಭೂ ಗಡಿಯಿಂದ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನ್ವಯವಾಗುತ್ತದೆ.
ಜೊತೆಗೆ ಎಲ್ಲಾ ಪ್ರಯಾಣಿಕರು ಕಳೆದ 14 ದಿನಗಳ ಪ್ರಯಾಣದ ವಿವರಗಳನ್ನು ಒಳಗೊಂಡoತೆ ನಿಗದಿತ ಪ್ರಯಾಣದ ಮೊದಲು ಆನ್‌ಲೈನ್ಏ ರ್ ಟ್ರಾವೆಲ್ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ರೂಪದಲ್ಲಿ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಬೇಕು. ಪ್ರಯಾಣದ ಮೊದಲು 72 ಗಂಟೆಗಳ ಒಳಗೆ ನಡೆಸಿದ ನಕರಾತ್ಮಕ ಆರ್-ಟಿ ಪಿ ಸಿ ಆರ್ ವರದಿಯನ್ನು ಅಪ್‌ಲೋಡ್ ಮಾಡಬೇಕು. ವರದಿಯ ದೃಢೀಕರಣಕ್ಕೆ ಸಂಭoದಿಸಿದoತೆ ಘೋಷಣೆಯನ್ನು ಸಲ್ಲಿಸಬೇಕು ಇಲ್ಲವಾದರೆ ಕ್ರಿಮಿನಲ್ ಮೊಕದ್ದಮೆಗೆ ಹೊಣೆಗಾರನಾಗಿರುತ್ತಾನೆ. ಅದೇ ರೀತಿ ಅಪಾಯದಲ್ಲಿರುವ ದೇಶ ಎಂದು ಗುರುತಿಸಲಾದ ದೇಶಗಳ ಪ್ರಯಾಣಿಕರಿಗೆ ಪ್ರೋಟೋಕಾಲ್‌ಗಳು ಮುಂದುವರಿಯುತ್ತವೆ. ಆಗಮನದ ಪರೀಕ್ಷೆಗೆ ಅಗತ್ಯವಿರುವ ಎಲ್ಲರೂ ಸಕಾಲಿಕ ಪರೀಕ್ಷೆಯನ್ನು ಸುಲಭಗೊಳಿಸಲು ಏರ್ ಸುವಿಧಾ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆಯನ್ನು ಮೊದಲು ಬುಕ್ ಮಾಡಬೇಕು. ಈಗೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರ ಸರ್ಕಾರವು ಮಾರ್ಗಸೂಚಿ ಹೊರಡಿಸಿದೆ.

- Advertisement -

Latest Posts

Don't Miss