ಸರ್ಕಾರ ಕೊರೊನಾಕ್ಕೆ ಕಡಿವಾಣ ಹಾಕಲು ನಾನಾ ಕಸರತ್ತುಗಳನ್ನು ಮಾಡುತ್ತಿದೆ, ಇತ್ತ ವಿಪಕ್ಷ ನಾಯಕರು ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟು 2 ನೇ ದಿನದ ಪಾದಯಾತ್ರೆಯಲ್ಲಿ ತೊಡಗಿದ್ದಾರೆ. ಇದರ ಜೊತೆಗೆ ಸಾರ್ವಜನಿಕರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ, ನಾವು ಕೊರೊನ ನಿಯಮವನ್ನು ಉಲ್ಲಂಘಿಸಿದರೆ ದಂಡವನ್ನು ವಿಧಿಸುತ್ತೀರಿ, ಸಾವಿರಾರು ಜನರನ್ನು ಸೇರಿಸಿಕೊಂಡು ಮಾಡುತ್ತಿರುವಪಾದಯಾತ್ರೆಗೆ ನೀವೇಕೆ ಕಡಿವಾಣ ಹಾಕುತ್ತಿಲ್ಲ ಎಂದು ಸರ್ಕಾರಕ್ಕೆ ಜನರು ನೇರ ಸವಾಲನ್ನು ಹಾಕಿದ್ದಾರೆ.
ಅತ್ತ ಡಿ ಕೆ ಶಿವಕುಮಾರ್ ಸರ್ಕಾರಕ್ಕೆ ನೀವು ತಾಕತ್ತಿದ್ರೆ ನಮ್ಮನ್ನ ಬಂಧಿಸಿ ಎಂದು ನೇರ ಸವಾಲು ಹಾಕಿದ್ದಾರೆ. ಒಂದನೇ ಪಾದಯಾತ್ರೆಯ ಬಳಿಕ ಡಿಕೆಶಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದ್ದಾರೆ. ಮತ್ತು ಸರ್ಕಾರ ಪಾದಯಾತ್ರೆಯನ್ನು ನಿಲ್ಲಿಸಲು ಹುನ್ನಾರ ಹಾಕುತ್ತಿದೆ. ಮತ್ತು ಕೊವಿಡ್ ತಪ್ಪು ಸಂಖ್ಯೆಯನ್ನು ನೀಡುತ್ತಿದೆ.ಈಗಾಗಿ ಸರ್ಕಾರದ ವಿರುದ್ಧ ನ್ಯಾಯಾಂಗ ತನಿಕೆಯಾಗಲಿ ಎಂದು ಕಿಡಿಕಾರಿದ್ದಾರೆ.