Friday, July 4, 2025

Latest Posts

‘ಅಹಂಕಾರದ ಪರಮಾವಧಿ! ಕಾಂಗ್ರೆಸ್ ಸರಕಾರಕ್ಕೆ ಕೇಸರಿ ಎಂದರೆ ದ್ವೇಷ, ಶತ್ರುಭಾವ!’

- Advertisement -

Political News: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಮಾಜಿ ಸಿಎಂಗಳ ಭಾವಚಿತ್ರವನ್ನು ವಿಧಾನಸೌಧದ ಕೊಠಡಿಯಿಂದ ತೆರವುಗೊಳಿಸಲಾಗಿದೆ. ಜೊತೆಗೆ, ನಡೆದಾಡುವ ಶ್ರೀ, ಸಿದ್ದಗಂಗಾ ಸ್ವಾಮೀಜಿಯವರ ಭಾವಚಿತ್ರವನ್ನ ಕೂಡ, ಕೊಠಡಿಯಿಂದ ಹೊರಗಿಡಲಾಗಿದೆ. ಈ ಕಾರಣಕ್ಕೆ ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿದೆ. ಅಲ್ಲದೇ, ಸಿಎಂ ಸಿದ್ದರಾಮಯ್ಯ ನವರು ರಾಜ್ಯದ ಜನರಲ್ಲಿ ಕ್ಷಮೆ ಕೋರಿ, ಪುನಃ ಪೂಜ್ಯ ಸ್ವಾಮೀಜಿಗಳ ಭಾವಚಿತ್ರವನ್ನ ಪುನಃ ಲಗತ್ತಿಸಬೇಕೆಂದು ಆಗ್ರಹಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಅಹಂಕಾರದ ಪರಮಾವಧಿ! ಕಾಂಗ್ರೆಸ್ ಸರಕಾರಕ್ಕೆ ಕೇಸರಿ ಎಂದರೆ ದ್ವೇಷ, ಶತ್ರುಭಾವ! ಇಂದು ನಡೆದಾಡುವ ದೇವರು, ಕಾಯಕಯೋಗಿ, ತ್ರಿವಿಧದಾಸೋಹಿ ಪರಮ ಪೂಜನೀಯ ಡಾ।। ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಭಾವಚಿತ್ರವನ್ನು ವಿಧಾನಸೌಧದ ಕೊಠಡಿಯಿಂದ ತೆರವುಗೊಳಿಸಿ ಪಡಸಾಲೆಯಲ್ಲಿ ಉರುಳಾಡುವಂತೆ ಮಾಡಿ ಅಪಮಾನಿಸಿರುವುದು ಅಕ್ಷಮ್ಯ ಅಪರಾಧ! ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ಕೂಡಲೆ ರಾಜ್ಯದ ಜನತೆಯ ಕ್ಷಮೆ ಕೋರಿ ಪೂಜ್ಯ ಸ್ವಾಮೀಜಿಯವರ ಭಾವಚಿತ್ರವನ್ನು ಸಕಲ ಗೌರವಗಳೊಂದಿಗೆ ಪುನಃ ಲಗತ್ತಿಸಲು ಆಗ್ರಹಿಸುತ್ತೇವೆ ಎಂದು ಬರೆದುಕೊಂಡಿದೆ.

World Milk Day: ಕನಕಪುರದ ಕ್ಷೀರ ಕ್ರಾಂತಿಯ ಝಲಕ್ ತೋರಿಸಿದ ಡಿಕೆಶಿ..

ಭಾರೀ ಗಾಳಿ ಮಳೆಗೆ ಕುಸಿದ ಮನೆಗಳು: ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ಪರಿಶೀಲನೆ.

ಬಿಬಿಎಂಪಿ ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ

- Advertisement -

Latest Posts

Don't Miss