Friday, July 4, 2025

Latest Posts

Pulwamaದಲ್ಲಿ ಹುತಾತ್ಮರಾದ ಯೋಧರಿಗೆ ಮಾಜಿ ಯೋಧರಿಂದ ವೀರ ನಮನ..!

- Advertisement -

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Dodda Bullapur) ನಗರದ ಡಾ.ರಾಜ್ ಕುಮಾರ್ ಕಲಾ ಭವನದಲ್ಲಿ (Dr. Raj Kumar Kala Bhavan) ಪುಲ್ಮಾಮದಲ್ಲಿ ಹುತಾತ್ಮರಾದ ಯೋಧರಿಗೆ ಅರೆಸೇನಾಪಡೆಯ ಮಾಜಿ ಯೋಧರಿಂದ ವೀರ ನಮನ ಕಾರ್ಯಕ್ರಮ ನಡೆಸಲಾಯಿತು. 2019 ರಲ್ಲಿ ಜಮ್ಮಕಾಶ್ಮೀರದ ಪುಲ್ಮಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಕೇಂದ್ರೀಯ ಅರೆಸೇನಾಪಡೆ ಮಾಜಿ ಸೈನಿಕ ಸಂಘದ ವತಿಯಿಂದ ಯೋಧರಿಗೆ ವೀರ ನಮನ ಸಲ್ಲಿಸಲಾಯಿತು. ನಂತರ ಮಾದ್ಯಮ ಪತ್ರಿಕಾ ಗೋಷ್ಠಿ (Medium press conference) ನಡೆಸಿ ಅರೆಸೇನಾಪಡೆಯ ಮಾಜಿ ಯೋದ ಸಂಘದ ರಾಜ್ಯಾಧ್ಯಕ್ಷ ಹನುಮಂತರಾಜು  ಮಾಧ್ಯಮದೊಂದಿಗೆ ಮಾತನಾಡಿ ವರ್ಷ ವರ್ಷಗಳಿಂದ ಸರ್ಕಾರದ ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ, ಕೇಂದ್ರೀಯ ಅರೆಸೇನಾಪಡೆಯ ಮಾಜಿ ಯೋಧರಿಗೆ  ಸೌಲಭ್ಯ ಒದಗಿಸುವಲ್ಲಿ ಸರ್ಕಾರ  ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಯೋಧ ಸಂಘದ ರಾಜ್ಯಾಧ್ಯಕ್ಷ ಹನುಮಂತರಾಜು (Hanumantaraju) ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಯೋಧಸಂಘದ ಎಲ್ಲಾ ಪದಾಧಿಕಾರಿಗಳು ಮಾಜಿ ಯೋಧರು ಉಪಸ್ಥಿತರಿದ್ದರು.

                                                                                                    ಅಭಿಜಿತ್ ಕರ್ನಾಟಕ ಟಿವಿ ದೊಡ್ಡಬಳ್ಳಾಪುರ.

- Advertisement -

Latest Posts

Don't Miss