www.karnatakatv.net : ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಕುರಿತಂತೆ ಬೇಜವಾಬ್ದಾರಿಯುತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಗೃಹಸಚಿವ ಅರಗ ಜ್ಞಾನೇಂದ್ರ ಇದೀಗ ಕ್ಷಮೆ ಕೇಳಿದ್ದಾರೆ. ನಾನು ಆ ಮಾತನ್ನು ಹಿಂಪಡೆಯುತ್ತೇನೆ ಮನನೊಂದು ಹೇಳಿಕೆ ವಾಪಸ್ ಪಡೆಯುತ್ತಿದ್ದೇನೆ. ನಮಗೆ ಹೆಣ್ಮು ಮಕ್ಕಳ ಮೇಲೆ ಗೌರವವವಿದೆ.
ಅವರ ಮಾನ- ಪ್ರಾಣ ಕಾಪಾಡುವ ಬದ್ಧತೆ ಇದೆ. ಅಲ್ಲದೆ ಸಂತ್ರಸ್ತೆಯನ್ನ ನನ್ನ ಮಗಳ ಸ್ಥಾನದಲ್ಲಿ ನೋಡುವೆ ಅಂತ ಹೇಳೋ ಮೂಲಕ ಗೃಹ ಸಚಿವ ಅರಗ ಜ್ಞಾನೇಂದ್ರ ಕ್ಷಮೆ ಕೋರಿದ್ದಾರೆ.
ಇನ್ನು ಇಂದು ಬೆಳಗ್ಗೆ ಘಟನೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಅರಗ ಜ್ಞಾನೇಂದ್ರ, ರಾತ್ರಿ 7.30ಕ್ಕೆ ಅವರು ಅಲ್ಲಿಗೆ ಹೋಗಿದ್ದಾರೆ. ಮೊದಲನೇದಾಗಿ ಆ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು ಅಂತ ಹೇಳೋ ಮೂಲಕ ಅರಗ ಜ್ಞಾನೇಂದ್ರ ನಾಲಗೆ ಹರಿಬಿಟ್ಟು ರಾಜ್ಯಾದ್ಯಂತ ಟೀಕೆಗೆ ಗುರಿಯಾಗಿದ್ರು. ಅಷ್ಟೇ ಅಲ್ಲದೆ ಘಟನೆ ಕುರಿತಂತೆ ಟೀಕಿಸಿದ್ದ ಕಾಂಗ್ರೆಸ್ ಗೆ ಟಾಂಗ್ ನೀಡೋ ಭರದಲ್ಲಿ ಹೋಮ್ ಮಿನಿಸ್ಟರ್ ಅರಗ ಜ್ಞಾನೇಂದ್ರ, ರೇಪ್ ನಡೆದಿರೋದು ಅಲ್ಲಿ. ಆದ್ರೆ ಇಲ್ಲಿ ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ ಮಾಡ್ತಿದ್ದಾರೆ ಅಂತ ಹೇಳೋ ಮೂಲಕ ತೀವ್ರ ಟೀಕೆಗೆ ಒಳಗಾಗಿದ್ರು