ಕಾಡಾನೆಯಿಂದ ತಪ್ಪಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿ ಓಡಿದ ಕೂಲಿ ಕಾರ್ಮಿಕರು..

ಹಾಸನ : ಹಾಸನ ಜಿಲ್ಲೆಯಲ್ಲಿ ಗಜ ಗಲಾಟೆ ಮುಂದುವರೆದಿದ್ದು, ಒಂಟಿ ಸಲಗವೊಂದು, ರೈಲ್ವೆ ಹಳಿ ದಾಟಿ ಬಂದಿದೆ. ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆನೆ ರಸ್ತೆಯಲ್ಲಿ ನಡೆದು ಬಂದು ರೈಲ್ವೆ ಹಳಿ ದಾಟಿ ಕಾಫಿ ತೋಟದೊಳಗೆ ಹೋಗಿದೆ.

ಎಂಇಎಸ್ ಪುಂಡಾಟಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕರವೇ ಪ್ರತಿಭಟನೆ..

ಇನ್ನೊಂದೆಡೆ ಇನ್ನೊಂದು ಒಂಟಿ ಸಲಗ ಜಾನುವಾರುಗಳನ್ನು ಅಟ್ಟಾಡಿಸಿದ್ದು, ಒಂಟಿಸಲಗ ಬರುತ್ತಿದ್ದಂತೆ ಕಾರ್ಮಿಕರು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಈ ಘಟನೆ ಸಕಲೇಶಪುರ ತಾಲೂಕಿನ, ಬಾಳ್ಳುಪೇಟೆ ಹೋಬಳಿ, ನಿಡನೂರು ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ ಕೆಲವು ಪುರುಷರು ಮತ್ತು ಮಹಿಳೆಯರು ಕೆಲಸ ಮಾಡುತ್ತಿದ್ದು. ಕಾಡಾನೆ ಕಂಡ ಕೂಡಲೇ ಕೆಲಸ ಬಿಟ್ಟು ಚೆಲ್ಲಾಪಿಲ್ಲಿಯಾಗಿ ಓಡಿ, ಪ್ರಾಣ ಉಳಿಸಿಕೊಂಡಿದ್ದಾರೆ.

‘ಹೋರಾಟದಲ್ಲಿ ಪಕ್ಷ, ರಾಜಕೀಯ ಬೆರೆಸುವುದಕ್ಕೆ ನಾಚಿಕೆ ಆಗಲ್ವಾ..?’

ಜನರು ಕಿರುಚಾಡುತ್ತಿದ್ದಂತೆ, ಜಾನುವಾರುಗಳ ಬಳಿ ಒಂಟಿ ಸಲಗ ನುಗ್ಗಿದೆ. ಸೋಲಾರ್ ತಂತಿ ಬೇಲಿ ಹಾಕಿದ್ದ ಕಾರಣ ಎಲ್ಲೂ ಹೋಗಲಾಗದೆ ಗೀಳಿಡುತ್ತಾ ಜಾನುವಾರುಗಳನ್ನು ಅಟ್ಟಾಡಿಸಿದೆ. ಇತ್ತೀಚಿಗೆ ಹೆಚ್ಚಾಗಿ ಜನವಸತಿ ಪ್ರದೇಶ, ಹೆದ್ದಾರೆ, ರಸ್ತೆಗಳಿಗೆ ಕಾಡಾನೆಗಳು ನುಗ್ಗುತ್ತಿದ್ದು, ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.

About The Author