ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ತಾವರೆಕೆರೆ ಜಿಪಂ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದ ನರಸಿಂಹ ಮೂರ್ತಿಯವರ ಈ ವಿಲ್ ಹೆಚ್ಚು ವೈರಲ್ ಆಗ್ತಿದೆ. ನರಸಿಂಹ ಮೂರ್ತಿ ತಾವರೆಕೆರೆ ವ್ಯಾಪ್ತಿಯಲ್ಲಿ ಹತ್ತಾರು ಹಳ್ಳಿಯಲ್ಲಿ ಜನರ ಪ್ರೀತಿಗೆ ಪಾತ್ರರಾಗಿರುವ ವ್ಯಕ್ತಿ. ಕುಟುಂಬ ಸಮೇತವಾಗಿ ಯುರೂಪ್ ಟ್ರಿಪ್‌ಗೆ ಹೋಗುತ್ತಿದ್ದು, ಅಲ್ಲೇನಾದರೂ ಅವಘಡವಾದಲ್ಲಿ, ತನ್ನೆಲ್ಲ ಆಸ್ತಿ, ಬಡ ಬಗ್ಗರಿಗೆ ಸೇರಬೇಕು ಎಂದು ವೀಲ್ ಬರೆದಿಟ್ಟು ಹೋಗಿದ್ದಾರೆ.
ದಿನಾಂಕ 26.5.2023 ರಂದು ನಾನು ಮತ್ತು ನನ್ನ ಕುಟುಂಬ ಅಂದರೆ ನನ್ನ ಧರ್ಮಪತ್ನಿ ಶ್ರೀಮತಿ ಆರ್ ಲೀಲಾವತಿ ಮತ್ತು ನನ್ನ ಮಕ್ಕಳಾದ ಮೊದಲನೆ ಮಗ ಶ್ರೀ ಟಿ ಎನ್ ಕಿಶನ್ ಎರಡನೇ ಮಗನಾದ ಶ್ರೀ ಪವನ ಕುಮಾರ್ ಎಲ್ಲಾರು ಪ್ರವಾಸಕ್ಕಾಗಿ ಯೂರೋಪ್ ದೇಶಗಳಿಗೆ ಭೇಟಿ ನೀಡುತ್ತಿದ್ದೆವೆ ಹಾಗೆ ಕೆಲವು ಬಾರಿ ನಾನು ಮತ್ತು ನನ್ನ ಕುಟುಂಬಕ್ಕೆ ನಮ್ಮ ದೇಶದ ಇತರೆ ಪ್ರಾವಾಸಿ ಸ್ಥಳಗಳಿಗು ಭೇಟಿ ನೀಡುತ್ತಿರುತ್ತೆವೆ ನನಗೆ ಜೀವನದಲ್ಲಿ ಆದ ಕೆಲವು ಅನುಭವಗಳಿಂದ ಮತ್ತು ನಾನು ನೋಡಿ ಕೇಳಿದ ವಿಷಯಗಳಿಂದ ನಾನು ಮತ್ತು ನನ್ನ ಧರ್ಮ ಪತ್ನಿ ಶ್ರೀಮತಿ ಲೀಲಾವತಿ ಅವರು ಇಬ್ಬರೂ ಮಾತಾಡಿ ಒಂದು ವಿಲ್ ರಿಜಿಸ್ಟರ್ ಮಾಡಿಸಲು ನಿರ್ಧಾರ ಮಾಡಿದ್ದೆವೆ.
ಈ ವಿಲ್ ನಾನು ನನ್ನ ಮಕ್ಕಳು ನನ್ನ ಹೆಂಡತಿ ಅವರಿಗೆ ಸಂಬಂದಿಸಿದಂತೆ ನಾವು ಪ್ರವಾಸಕ್ಕಾಗಿ ದೇಶ ವಿದೇಶಗಳಲ್ಲಿ ಪ್ರವಾಸ ಮಾಡುವಾಗ ಏನಾದರೂ ಅವಘಡ ವಾಗಿ ನಾನು ನನ್ನ ಕುಟುಂಬಕ್ಕೆ ಅಪಾಯ ಆದರೆ.ಆಕಸ್ಮಿಕವಾಗಿ ನನ್ನ ಕುಟುಂಬದಲ್ಲಿ ಯಾರು ಜೀವಂತವಾಗಿ ಇಲ್ಲದ್ದಿದ ಸಂಧರ್ಭದಲ್ಲಿ ಮಾತ್ರ (ಇಲ್ಲಿ ನನ್ನ ಕುಟುಂಬ ಎಂದರೆ ನಾನು ನನ್ನ ಹೆಂಡತಿ ಮತ್ತು ನನ್ನ ಮಕ್ಕಳು) ನಾನು ಮತ್ತು ನನ್ನ ಹೆಂಡತಿ ಹೆಸರಿನಲ್ಲಿ ಇರುವ ಅವರ ಸ್ವಯಾರ್ಜಿತ ಆಸ್ತಿ ಗಳು ಮತ್ತು ಅವರ ಬ್ಯಾಂಕ್ ಖಾತೆ ಯಲ್ಲಿ ಇರುವ ಹಣ ಗಳು ಕಟ್ಟಡಗಳು. ಜಮೀನುಗಳು.ಬ್ಯಾಂಕ್ ನಲ್ಲಿ ಇರುವ ಠೇವಣಿ ಹಣ.ಬ್ಯಾಂಕ್ ನ ಖಾತೆಯಲ್ಲಿ ಇರುವ ಹಣ. ಟಿ ಜಿ ನರಸಿಂಹ ಮೂರ್ತಿ ಆದ ನನ್ನ ಹೆಸರಿನಲ್ಲಿ ಇರುವ ನನ್ನ ಸ್ವಯಾರ್ಜಿತವಾಗಿ ಕೊಂಡಿರು ಜಮೀನು ಗಳು ನೀವೆಶನ ಗಳು ನಮ್ಮ ಆಭರಣಗಳು ಎಲ್ಲವೂ ಒಂದು ಉತ್ತಮ ಕಾರ್ಯಕ್ಕೆ ವಿನಿಯೋಗ ಹಾಗಬೇಕು ಎಂದು ನಮ್ಮ ಆಶಯ ಆದ್ದರಿಂದ ಜೀವನದಲ್ಲಿ ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಮತ್ತು ಆಸ್ತಿ ಗಳು.
ನಾವು ಮತ್ತು ನನ್ನ ಮಕ್ಕಳು ಆಕಸ್ಮಿಕವಾಗಿ ಏನಾದರೂ ಎಲ್ಲಾರ ಜೀವಕ್ಕೆ ತೊಂದರೆ ಆದರೆ ನಾನು ನನ್ನ ಹೆಂಡತಿಯ ಹೆಸರಿನಲ್ಲಿ ಇರುವ ಸಮಸ್ತ ಆಸ್ತಿಯನ್ನು ಸಮಜದ ಸೇವೆಗೆ ಬಳಸಬೇಕೆಂದು ನಮ್ಮ ಆಶಯ. (ಇಲ್ಲಿ ಸಮಜ ಅಂದರೆ ನನ್ನ ಜಾತಿ ಅಲ್ಲ ಎಲ್ಲಾ ಜನಾಂಗದ ಎಲ್ಲಾ ಧರ್ಮದ ಬಡವರು ಎಂದು ತಿಳಿಯತಕ್ಕದು) ನಾವು ಈ ಹಿಂದೆ ಪ್ರವಾಸ ಮಾಡುವಾಗ ನಮ್ಮ ಕಣ್ಣಮುಂದೆ ನಡೆದ ಅವಘಡಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಲ್ ಬರೆಯುತ್ತಿದ್ದೆವೆ. ಇದು ನಾನು ನನ್ನ ಹೆಂಡತಿ ಮಕ್ಕಳು ಯಾರು ಜೀವಂತ ವಾಗಿ ಇರದ್ದಿದರೆ ಮಾತ್ರ ಜಾರಿಗೆ ಬರುತ್ತದೆ ಇಲ್ಲಿ ನಮ್ಮ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಜಮೀನುಗಳು ಕಟ್ಟಡಗಳು ನೀವೇಶನ ಗಳು ಇರುವುದರಿಂದ ಇವುಗಳು ಉತ್ತಮ ಕಾರ್ಯಕ್ಕೆ ಬಳಕೆಯಾಗಲಿ ಎಂಬ ಸದ್ದುದೇಶದಿಂದ ಈ ವಿಲ್ ಬರೆಯುತ್ತಿದ್ದೆವೆ.
ನಮ್ಮಿಬ್ಬರ ಹೆಸರಿನಲ್ಲಿ ಇರುವ ಸ್ವಯಾರ್ಜಿತ ವಾದ ಎಲ್ಲಾ ಆಸ್ತಿ ಗಳು ಕಟ್ಟಡಗಳು ಬ್ಯಾಂಕ್ ನಲ್ಲಿ ಇರುವ ಹಣಕಾಸು. ಮತ್ತು ನಾವು ವ್ಯಾಪಾರಕ್ಕಾಗಿ ಮಾಡಿಕೊಂಡ ಮುಂಗಡ ಕರಾರು ಪತ್ರ ದಲ್ಲಿ ತೋರಿಸಿರುವ ಹಣಕಾಸು ಅದರಲ್ಲಿ ಬರುವ ಲಾಭದ ಹಣ ಶ್ರೀ ಗಂಧದ ಕಾವಲಿನಲ್ಲಿ ಇರುವ ಕಟ್ಟಡದ ಬಾಡಿಗೆ ಹಣ ಎಲ್ಲಾ ನಮ್ಮ ಸ್ವಯರ್ಜಿತವಾದ ಸಮಸ್ತ ಆಸ್ತಿ ಆಭರಣ ಹಾಗು ಕಟ್ಟಡಗಳು ಸೇರಿದಂತೆ ಎಲ್ಲಾವು ನಮ್ಮ ಇಚ್ಛೆ ಯಂತೆ. ಸತ್ಕಕಾರ್ಯಕ್ಕೆ ವಿನಿಯೋಗ ಆಗಬೇಕು ಇದರಲ್ಲಿ ನಾವು ಸೂಚಿಸಿದ ವಿಷಯಕ್ಕೆ ಮಾತ್ರ ಈ ಹಣ ಮತ್ತು ನಮ್ಮ ಆಸ್ತಿ ಗಳು ವಿನಿಯೋಗ ಆಗಬೇಕು. ಇದ್ದನು ಶೇಕಡಾವಾರು ಲೆಕ್ಕ ದಲ್ಲಿ ಖರ್ಚು ಮಾಡಬೇಕು.
ನನಗೆ ಹೆಚ್ಚು ಇಷ್ಟವಾಗುವ ಸರ್ಕಾರಿ ಶಾಲೆಗಳಿಗೆ ನಮ್ಮಿಬ್ಬರ ಆಸ್ತಿ ಗಳಲ್ಲಿ ಶೇಕಡಾ 40 ರಷ್ಟು ಹಣವನ್ನು ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಅವರ ಸಮವಸ್ತ್ರ ಶೂ ಕಂಪ್ಯೂಟರ್ ಹೀಗೆ (ಯಾವುದೇ ದೊಡ್ಡ ಖಾಸಗಿ ಶಾಲೆಗೆ ಕಮ್ಮಿ ಇಲ್ಲದಂತೆ )ಶಾಲೆಯನ್ನು ಅಭಿವೃದ್ಧಿ ಪಡಿಸಲು ಬಳಸಬೇಕು ಉಳಿದ ಶೇಕಡಾ 20 ರಷ್ಟು ಹಣವನ್ನು ನಮ್ಮ ಹೆಸರಿನಲ್ಲಿ ಇರುವ ಎಲ್ಲಾ ಜಮೀನುಗಳಲ್ಲಿ ಅರಣ್ಯ ಬೆಳಸಲು ಬಳಸಬೇಕು ಉಳಿದ ಶೇಕಡಾ 20 ಹಣವನ್ನು ದೇಶಕ್ಕಾಗಿ ಪ್ರಾಣ ನೀಡಿದ ಸೈನಿಕರ ಕುಟುಂಬಕ್ಕೆ ಬಳಸಬೇಕು ಶೇಕಡಾ 10 ಹಣವನ್ನು ನನ್ನ ಪ್ರೀತಿಯ ಗ್ರಾಮದೇವತೆ ಮಾರಮ್ಮ ತಾಯಿ ಸನ್ನಿಧಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಬಳಸಬೇಕು ಮತ್ತು ಶೇಕಡಾ10 ರಷ್ಟು ಹಣವನ್ನು ವೃದ್ದಾಶ್ರಾಮಗಳಿಗೆ ಮತ್ತು ಆನಾಥ ಮಕ್ಕಳಿಗೆ ವಿನಿಯೋಗಿಸ ಬೇಕು ಉ ಇದರಲ್ಲಿ ಇಷ್ಟು ನಾವು ಇಬ್ಬರೂ ಸಂತೋಷ ದಿಂದ ಬರೆದಿರುವಾ ವಿಲ್ ಪತ್ರ. ಜೀವನದಲ್ಲಿ ಏನಾದರೂ ಅವಘಡ ನಡೆದರೆ ಈ ವಿಲ್ ಜಾರಿಗೆ ಬರುತ್ತದೆ .
ಉಳಿದಂತೆ ಎಲ್ಲಾ ಮಾಮೂಲು ರೀತಿಯಲ್ಲಿ ಇರುತ್ತದೆ.ತುಂಬಾ ದೊಡ್ಡ ಬೆಲೆ ಬಾಳುವ ಆಸ್ತಿ ಗಳು ಇರುವುದರಿಂದ ಇದರ ನಿರ್ವಹಣೆ ಯನ್ನು ಕರ್ನಾಟಕ ರಾಜ್ಯದ ಮುಖ್ಯ ನ್ಯಾಯಮೂರ್ತಿ ಗಳು ಕರ್ನಾಟಕದ ಲೋಕಾಯುಕ್ತ ಅವರ ಕಣ್ಗಾವಲಿನಲ್ಲಿ ಆಗಬೇಕು ಪ್ರತಿ ವರ್ಷವೂ ಹಣವನ್ನು ನಾವು ಇಚ್ಚಿಸಿದಂತೆ ಬಳಕೆ ಮಾಡಬೇಕು ಅದನ್ನು ಮಾನ್ಯಾ ನ್ಯಾಯಲಯಕ್ಕೆ ವರಿದಿ ನೀಡಿ ಅನೋಮೊದನೆ ಪಡೆಯಬೇಕು .ಸರ್ಕಾರಿ ಶಾಲೆ ನನ್ನ ವ್ಯಾಪ್ತಿಯಲ್ಲಿ ಇರುವ ತಾವರೆಕೆರೆ ಮತ್ತು ಹೊನ್ನಗನಹಟ್ಟಿ ಶಾಲೆಗಳಿಗೆ ಮೊದಲ ಆಧ್ಯತೆ ನೀಡಬೇಕು ಮತ್ತು ನಮ್ಮ ಹೆಸರಿನಲ್ಲಿ ಇರುವ ಕೃಷಿಭೂಮಿಗಳನ್ನು ಅರಣ್ಯ ಬೆಳಸಲು ಬಳಸಬೇಕು ಅವುಗಳನ್ನು ಯಾವುದೇ ಕಾರಣದಿಂದ ಬೇರೆ ಕಾರ್ಯಕ್ಕೆ ಬಳಕೆ ಮಾಡಬಾರದು ಮತ್ತು ನಮ್ಮ ಹೆಸರಿನಲ್ಲಿ ಇರುವ ಎಲ್ಲಾ ಆಸ್ತಿ ಗಳು ನಮ್ಮ ಸ್ವಯರ್ಜಿತವಾದ ಆಸ್ತಿ ಆಗಿರುವುದರಿಂದ ಇದರಲ್ಲಿ ನಮ್ಮ ಇತರೆ ಕುಟುಂಬ ಸದಸ್ಯರಿಗೆ ಯಾವುದೇ ಪ್ರಶ್ನೆ ಮಾಡುವ ಅಧಿಕಾರ ಇರುವುದ್ದಿಲ್ಲ.
ಇದರಲ್ಲಿ ನನ್ನ ತಂದೆ ಅವರಿಂದ ಟಿ ಜಿ ನರಸಿಂಹ ಮೂರ್ತಿ ಅದ ನನಗೆ ಬಂದಿರುವ ದಾನಪತ್ರದ ಆಸ್ತಿ ಗಳು ಈ ವಿಲ್ ನಿಯಮಕ್ಕೆ ಸೇರುತ್ತದೆ ಈ ವಿಲ್ ಉದ್ದೇಶ ಜೀವನದಲ್ಲಿ ಏನು ಘಟನೆ ಗಳು ಬೇಕಾದರೂ ನಡೆಯಬಹುದು ಆದ್ದರಿಂದ ನಮ್ಮ ಕಷ್ಟ ಪಟ್ಟ ಹಣ ಈ ಸಮಾಜದಿಂದ ಬಂದಿದ್ದು. ನಾವು ನಮ್ಮ ಕುಟುಂಬ ಜೀವಂತವಾಗಿ ಇದ್ದರೆ ಸಮಾಜಕ್ಕೆ ಉತ್ತಮ ಸೇವೆ ಮಾಡಿಕೊಂಡು ಹೋಗುತ್ತವೆ.ನಮ್ಮ ಉಪಸ್ಥಿತಿ ಇಲ್ಲದ್ದಿದ್ದರೆ ನಮ್ಮ ಆಶಯದಂತೆ ನಮ್ಮ ಸಂಪತ್ತು ವಿನಿಯೋಗ ಆಗಲಿ ಸಂತೋಷ ದಿಂದ ಬರೆದಿರು ವಿಲ್ ಪತ್ರ. ಇದು ನಾನು ನನ್ನ ಮಡದಿ ಮಕ್ಕಳು ಆಕಸ್ಮಿಕವಾಗಿ ಮರಣ ಹೊಂದಿದರೆ ಮಾತ್ರ ಜಾರಿಗೆ ಬರುವಂತದ್ದು .ನನ್ನ ಮಕ್ಕಳು ಇನ್ನೂ ಮೈನರ್ ಆಗಿರುವುದರಿಂದ ಈ ವಿಲ್ ಪತ್ರ ಬರೆಯುತ್ತಿದ್ದೆವೆ.ಇದು ನಮ್ಮಲ್ಲಿ ಯಾರು ಜೀವಂತವಾಗಿ ಇರದ್ದಿರೆ ಮಾತ್ರ ಜಾರಿಗೆ ಬರುತ್ತದೆ.