Thursday, October 16, 2025

Latest Posts

ನೀರು ಕುಡಿಯುವಾಗ ಈ ತಪ್ಪುಗಳನ್ನು ಮಾಡಲೇಬೇಡಿ..

- Advertisement -

ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಯಾವ ನೀರನ್ನ ಕುಡಿಯಬೇಕು..? ತಣ್ಣೀರೋ, ಬಿಸಿ ನೀರೋ..? ಅಥವಾ ಕಾಯಿಸಿ, ತಣಿಸಿದ ನೀರೋ..? ಹೇಗೆ ಕುಡಿಯಬೇಕು..? ಯಾವಾಗ ಕುಡಿಯಬೇಕು..? ಎಷ್ಟು ಕುಡಿಯಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹಲವರಿಗೆ ಗೊತ್ತಿರರುವುದಿಲ್ಲ. ಹಾಗಾಗಿ ಇಂದು ಸರಿಯಾದ ಮಾಹಿತಿ ತಿಳಿಯೋಣ ಬನ್ನಿ.

ಯಾವಾಗಲೂ ಕಾಯಿಸಿ, ತಣಿಸಿದ ನೀರನ್ನೇ ಕುಡಿಯಬೇಕು. ಅತೀ ಬಿಸಿಯಾದ ನೀರು ಮತ್ತು ಅತೀ ತಣ್ಣಗಿನ ನೀರು ಕುಡಿಯೋದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಫ್ರಿಜ್‌ನಲ್ಲಿರಿಸಿದ ನೀರು ಕುಡಿಯುವುದರಿಂದ ಶೀತವಾಗುವ, ಗಂಟಲು ಬೇನೆ ಬರುವ ಸಾಧ್ಯತೆ ಇರುತ್ತದೆ. ಇನ್ನು ಅತಿಯಾದ ಬಿಸಿ ನೀರು ಕುಡಿಯುವುದರಿಂದಲೂ ಚರ್ಮಕ್ಕೆ ಮತ್ತು ಗಂಟಲಿಗೆ ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ ಅತೀ ಬಿಸಿಯಾದ ಮತ್ತು ಅತೀ ತಣ್ಣಗಿನ ನೀರು ಕುಡಿಯಬಾರದು. ಕಾಯಿಸಿ, ತಣಿಸಿದ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

ಇನ್ನು ನೀರು ಹೇಗೆ ಕುಡಿಯಬೇಕು ಅನ್ನೋ ಪ್ರಶ್ನೆಗೆ ಉತ್ತರ, ನೀರನ್ನು ಕುಡಿಯಬಾರದು, ಬದಲಾಗಿ ತಿನ್ನಬೇಕು. ಹೌದು, ಇದು ಓರ್ವ ವಿಜ್ಞಾನಿ, ಆಹಾರ ಜ್ಞಾನವುಳ್ಳ ವ್ಯಕ್ತಿ ಹೇಳಿದ ಮಾತು. ನೀರನ್ನು ಗಟ ಗಟ ಕುಡಿಯುವುದಾಗಲಿ, ನಿಧಾನಕ್ಕೆ ಕುಡಿಯುವುದಾಗಲಿ ಮಾಡುವುದು, ನೀರು ಕುಡಿಯುವ ತಪ್ಪು ವಿಧಾನ. ಬದಲಾಗಿ ಕುಳಿತುಕೊಂಡು, ನೀರನ್ನು ಬಾಯಲ್ಲಿ ಎರಡು ಸೆಕೆಂಡ್ ಮುಕ್ಕಳಿಸಿ, ನಂತರ ನುಂಗಬೇಕು. ಇದು ನೀರು ಕುಡಿಯುವ ಸರಿಯಾದ ವಿಧಾನ. ಯಾಕಂದ್ರೆ ನೀರಿನೊಟ್ಟಿಗೆ ಲಾಲಾರಸವೂ ನಮ್ಮ ದೇಹ ಸೇರಿ, ನಮ್ಮನ್ನು ಅನಾರೋಗ್ಯಕ್ಕೀಡಾಗದಂತೆ ತಡೆಯುತ್ತದೆ. ನೀವು ನಿಂತು ನೀರು ಕುಡಿಯುವುದರಿಂದ, ಅಥವಾ ಗಟ ಗಟ ಕುಡಿಯುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

ನೀರಿನ ವಿಷಯದಲ್ಲಿ ಕೆಲವರು ಮಾಡುವ ಇನ್ನೊಂದು ತಪ್ಪಂದ್ರೆ, ಊಟದ ಜೊತೆ ನೀರು ಕುಡಿಯುವುದು. ಊಟಕ್ಕೂ ಮುನ್ನ ನೀರು, ಕುಡಿಯುವುದು ಮತ್ತು ಊಟವಾದ ತಕ್ಷಣ ನೀರು ಕುಡಿಯುವುದು. ಇದೆಲ್ಲವೂ ತಪ್ಪೇ. ಯಾಕಂದ್ರೆ ನಮ್ಮ ದೇಹದಲ್ಲಿರುವ ಜಠರ ಅಗ್ನಿ ಸರಿಯಾಗಿ ಕೆಲಸ ಮಾಡಿದ್ದಲ್ಲಿ ಮಾತ್ರ, ನಾವು ತಿಂದ ಆಹಾರ ಜೀರ್ಣವಾಗುತ್ತದೆ. ಜಠರ ಅಗ್ನಿ ಸರಿಯಾಗಿ ಕೆಲಸ ಮಾಡಬೇಕೆಂದರೆ, ನಾವು ಈ ಕೆಲಸವನ್ನ ಮಾಡಬಾರದು. ಊಟಕ್ಕೂ ಒಂದದು ಗಂಟೆ ಮೊದಲು ಮತ್ತು ಊಟವಾದ ಒಂದು ಗಂಟೆ ಬಳಿಕ ನೀರು ಕುಡಿಯಬೇಕು. ಇದರಿಂದ ನಮ್ಮ ಜೀರ್ಣಶಕ್ತಿ ಉತ್ತಮವಾಗಿರುತ್ತದೆ.

ಇನ್ನು ಎಷ್ಟು ನೀರು ಕುಡಿಯಬೇಕು ಅನ್ನೋ ಪ್ರಶ್ನೆಗೆ ಉತ್ತರ, ನಿಮ್ಮ ದೇಹ ಎಷ್ಟು ನೀರು ಕೇಳುತ್ತದೆಯೋ ಅಷ್ಟು. ನೀವು ನಿಮ್ಮ ದೇಹದಲ್ಲಿ ನೀರಿನ ಕೊರತೆ ಇದೆಯೋ ಇಲ್ಲವೋ ಅನ್ನೋದನ್ನ ನಿಮ್ಮ ಮೂತ್ರದ ಮೂಲಕ ಚೆಕ್ ಮಾಡಿಕೊಳ್ಳಬಹುದು. ಗಾಢ ಹಳದಿ ಬಣ್ಣದ ಮೂತ್ರವಿದ್ದರೆ, ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ತುಂಬಾ ಕಡಿಮೆ ಇದೆ ಎಂದರ್ಥ. ತಿಳಿ ಹಳದಿ ಬಣ್ಣವಿದ್ದರೆ, ನೀರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು ಎಂದರ್ಥ. ಮೂತ್ರದ ಬಣ್ಣ ಬಿಳಿ ಇದ್ದಲ್ಲಿ, ನೀವು ಕುಡಿಯುತ್ತಿರುವ ನೀರಿನ ಪ್ರಮಾಣ, ಸರಿಯಾಗಿದೆ ಎಂದರ್ಥ.

- Advertisement -

Latest Posts

Don't Miss