Sunday, December 22, 2024

Latest Posts

LPG ಸಿಲಿಂಡರ್ ಬೆಲೆಯಲ್ಲಿ 91.5 ರೂ ಇಳಿಕೆ..!

- Advertisement -

ಕೇಂದ್ರ ಸರ್ಕಾರ  2022-23ರ  ಕೇಂದ್ರ ಬಜೆಟ್ ಅನ್ನು  ಮಂಡಿಸಿದ್ದು, ಅದಕ್ಕೂ ಮುನ್ನ LPG ಸಿಲಿಂಡರ್ ಬೆಲೆಯಲ್ಲಿ 91.5 ರೂ ಇಳಿಕೆ ಮಾಡಿದೆ. ಬೆಲೆ ಕಡಿತದ ನಂತರ  ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 1907 ರೂ ಆಗಿದೆ.  ಕೋಲ್ಕತ್ತಾದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 89 ರೂಪಾಯಿ ಇಳಿಕೆಯಾಗಿ 1987 ರೂಪಾಯಿಗೆ ತಲುಪಿದೆ. ಮುಂಬೈನಲ್ಲಿ ವಾಣಿಜ್ಯ ಅನಿಲದ ಬೆಲೆ 1857 ರೂ ಗೆ ಏರಿದೆ. ಚೆನ್ನೈನಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2080.5 ರೂ ಗೆ ಏರಿದೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 899.50 ರೂ. ಕೋಲ್ಕತ್ತಾದಲ್ಲಿ LPG ಸಿಲಿಂಡರ್ ಬೆಲೆ 926 ರೂ., ಮುಂಬೈನಲ್ಲಿ 899.50 ರೂ. ಇನ್ನು ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 915.50 ರೂ.  ಇದೆ. ಇನ್ನೂ ಬೆಂಗಳೂರಿನಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 902.50 ರೂ ಇದೆ. LPG ಸಿಲಿಂಡರ್ ಬೆಲೆಯನ್ನು ಪರಿಶೀಲಿಸಲು, ನೀವು ಸರ್ಕಾರಿ ಸ್ವಾಮ್ಯದ ತೈಲ ಕಂಪನಿ IOC ಯ ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು. ಇಲ್ಲಿ ಕಂಪನಿಗಳು ಪ್ರತಿ ತಿಂಗಳು ಹೊಸ ಬೆಲೆಗಳನ್ನು ನೀಡುತ್ತವೆ. IndianOil ನ ಲಿಂಕ್ https://iocl.com/Products/IndaneGas.aspx ಕ್ಲಿಕ್ ಮಾಡುವ ಮೂಲಕ ನಿಮ್ಮ ನಗರದಲ್ಲಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ನೀವು ಪರಿಶೀಲಿಸಬಹುದು.

- Advertisement -

Latest Posts

Don't Miss