Friday, December 27, 2024

Latest Posts

ಕಾಂಗ್ರೇಸ್ ಮಾಡಿರುವ ಎರಡನೇ ದೊಡ್ಡ ತಪ್ಪು.ಬಿ ಎಲ್ ಸಂತೋಷ್

- Advertisement -

ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬಿಗೆ ತೆರಳಿದ್ದ ವೇಳೆ ಭದ್ರತೆಯಲ್ಲಿ ಲೋಪ ಉಂಟಾಗಿದೆ. ಪಂಜಾಬಿನ ಫಿರೋಜಪುರಾ ಕ್ಕೆ ಇಂದು ನರೇಂದ್ರ ಮೋದಿಯವರು ಪಕ್ಷದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಹೋಗಿರುತ್ತಾರೆ, ಜೊತೆಗೆ ಅನೇಕ ಕಾಮಗಾರಿಗಳ ಶಂಕುಸ್ಥಾಪನೆಗೆ ಹೋಗಿರುತ್ತಾರೆ, ಈ ವೇಳೆ ಕಾರ್ಯಕ್ರಮ ಮುಗಿಸಿ ದೆಹಲಿಗೆ ಹೋಗುವಾಗ ಭದ್ರತೆಯಲ್ಲಿ ಮೋದಿಯವರಿಗೆ ಲೋಪ ಉಂಟಾಗಿರುವುದರ ಪರಿಣಾಮ ಈ ವೇಳೆ ಪಂಜಾಬ್ ಸರ್ಕಾರ ಸರಿಯಾದ ರೀತಿಯಲ್ಲಿ ನರೇಂದ್ರ ಮೋದಿಯವರಿಗೆ ಭದ್ರತೆ ಒದಗಿಸದ ಪರಿಣಾಮ ಬಿ ಎಲ್ ಸಂತೋಷ್ ರವರು ಆಕ್ರೋಶಗೊಂಡು ಟ್ವೀಟ್ ಮಾಡಿದ್ದಾರೆ.
ಇದು ಕಾಂಗ್ರೇಸ್ ಮಾಡಿರುವ ಎರಡನೇ ದೊಡ್ಡ ತಪ್ಪು ಒಮ್ಮೆ ತುರ್ತು ಪರಿಸ್ಥಿತಿಯನ್ನು ಮಾಡಿ ದೊಡ್ಡ ತಪ್ಪನ್ನು ಮಾಡಿತ್ತು, ಇದೀಗ ಎರಡನೆಯ ದೊಡ್ಡ ತಪ್ಪನ್ನು ಮಾಡಿದೆ. ಇದು ಪಂಜಾಬ್ ಸರ್ಕಾರದ ನಿರ್ಲಕ್ಷತನ ಎದ್ದು ಕಾಣುತ್ತಿದೆ. ಪಂಜಾಬ್ ನಲ್ಲಿ ಪೊಲೀಸರ ಕೆಲಸ ಎಷ್ಟು ಬೇಜವಬ್ದಾರಿ ಎಂದು ಟ್ವೀಟ್ ಮಾಡುವುದರ ಮುಖಾಂತರ ಕಿಡಿಕಾರಿದ್ದಾರೆ.

- Advertisement -

Latest Posts

Don't Miss