Tuesday, May 28, 2024

Latest Posts

ಕೇಂದ್ರ ಕೊಟ್ಟ ಪರಿಹಾರ ಸಾಕಾಗುವುದಿಲ್ಲ: ಶಾಸಕ ಕೋನರಡ್ಡಿ

- Advertisement -

Dharwad News: ಧಾರವಾಡ: ನಾವು ನಮ್ಮ ರಾಜ್ಯಕ್ಕೆ 18,172 ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೆವು. ಆದರೆ, ಕೇಂದ್ರ ಸರ್ಕಾರ ಕೇವಲ 3,454 ಕೋಟಿ ಮಾತ್ರ ಪರಿಹಾರ ನೀಡಿದೆ. ಈ ಪರಿಹಾರ ಸಾಕಾಗುವುದಿಲ್ಲ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಬರಗಾಲ ಎದುರಾದ ತಕ್ಷಣ ಕೇಂದ್ರ ಸರ್ಕಾರ ಪರಿಹಾರ ಕೊಡುವುದು ರೂಢಿ. ಕೇಂದ್ರ ಬರ ಅಧ್ಯಯನ ತಂಡ ಬಂದು ಹೋದ ತಕ್ಷಣ ಪರಿಹಾರ ಬರಬೇಕಿತ್ತು. ಆಗ ಅಮಿತ್ ಶಾ ಅವರು ಮೂರು ದಿನದಲ್ಲಿ ಪರಿಹಾರ ಕೊಡುತ್ತೇವೆ ಎಂದಿದ್ದರು. ಆದರೂ ಪರಿಹಾರ ಬಂದಿರಲಿಲ್ಲ. ಹೀಗಾಗಿ ನಮ್ಮ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗ 3454 ಕೋಟಿ ಪರಿಹಾರ ಕೊಟ್ಟಿದೆ ಎಂದರು.

ಚುನಾವಣಾ ಆಯೋಗವೇ ಈ ಪರಿಹಾರ ಬಿಡುಗಡೆ ಮಾಡಲು ಅನುವು ಮಾಡಿಕೊಟ್ಟಿದೆ. ಹೀಗಾಗಿ ಅಧಿಕಾರಿಗಳೇ ಪರಿಹಾರ ನೀಡಬಹುದು. ಕೇಂದ್ರ ಸರ್ಕಾರ ಉಳಿದ ಪರಿಹಾರವನ್ನೂ ನೀಡಬೇಕು. ಈಗ ಕೊಟ್ಟಿರುವ ಈ ಪರಿಹಾರ ಸಾಕಾಗುವುದಿಲ್ಲ. ಕುಡಿಯುವ ನೀರಿನ ಸಮಸ್ಯೆಗೂ ಸಾಕಷ್ಟು ಅನುದಾನ ಬೇಕಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಎಲ್ಲ ಬರ ಪರಿಹಾರ ಕೊಡಬೇಕು. ಈ ರೀತಿ ನಮ್ಮ ರಾಜ್ಯ ಸರ್ಕಾರ ಕೋರ್ಟ್ ಮೂಲಕ ಪರಿಹಾರ ತಂದಿದ್ದು ಹೊಸ ಮೈಲಿಗಲ್ಲು. ಕೇಂದ್ರ ಸರ್ಕಾರ ಎಲ್ಲ ಪರಿಹಾರ ಕೊಡಬೇಕು. ಇಲ್ಲದೇ ಹೋದರೆ ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆ ಕೇಸ್ ಹಾಕುತ್ತದೆ. ಈಗ ಕೇವಲ ಶೇ.20 ರಷ್ಟು ಮಾತ್ರ ಪರಿಹಾರ ಕೊಟ್ಟಿದೆ. ಊಟ ಬಿಟ್ಟು ಉಪ್ಪಿನಕಾಯಿ ಕೊಟ್ಟಂತಾಗಿದೆ. ಕೇಂದ್ರ ಊಟವನ್ನೂ ಕೊಡಬೇಕಿದೆ ಎಂದರು.

ಕೆಲಸಕ್ಕೆ ರಿಸೈನ್ ಕೊಟ್ಟು, ಬಾಸ್ ಎದುರು ಢೋಲು ಬಾರಿಸಿ, ಡಾನ್ಸ್ ಮಾಡಿದ ಯುವಕ, ವೀಡಿಯೋ ವೈರಲ್

ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬಂದ ಬಾಣಂತಿ, ಮಿಮಿಕ್ರಿ ಆರ್ಟಿಸ್ಟ್ ಇಂದುಶ್ರೀ..

ಮೋದಿ ಶೌಚಾಲಯ ಕಟ್ಟಿಸಿದ್ದಾರೆ. ಕಾಂಗ್ರೆಸ್‌ನವರು ಚೊಂಬು ಹಿಡ್ಕೊಂಡು ಓಡಾಡುತ್ತಿದ್ದಾರೆ: ಜೋಶಿ

- Advertisement -

Latest Posts

Don't Miss