Bihar News: ಬಿಹಾರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದು, ಅವರು ವೇದಿಕೆಗೆ ಬರುತ್ತಿದ್ದ ಹಾಗೆ, ವೇದಿಕೆ ಕುಸಿದು ಬಿದ್ದಿದೆ. ಅವರೊಂದಿಗೆ ಇದ್ದ ಕೆಲ ನಾಯಕರು ಕೂಡ ಒಮ್ಮೆ ಶೇಕ್ ಆದರು. ಅದೃಷ್ಟವಶಾತ್, ಯಾರಿಗೂ ಯಾವ ತೊಂದರೊ ಆಗಿಲ್ಲ.
ಈ ಕಾರ್ಯಕ್ರಮದಲ್ಲಿ ತೇಜಸ್ವಿ ಯಾದವ್ ಸೇರಿ, ಹಲವು ಕಾಂಗ್ರೆಸ್ ನಾಯಕರು, ಸ್ಥಳೀಯ ನಾಯಕರು ಭಾಗಿಯಾಗಿದ್ದರು. ವೇದಿಕೆ ಕುಸಿದು ಬಿದ್ದ ಬಳಿಕ, ಕೆಲ ಸಮಯ ಗೊಂದಲ ಉಂಟಾಗಿ, ಕಾರ್ಯಕ್ರಮ ಶುರುವಾಗುವುದು ತಡವಾಗಿದೆ. ಬಳಿಕ ಸ್ಟೇಜ್ ಸರಿ ಮಾಡಿದ್ದು, ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ.
ಭಾಷಣದ ವೇಳೆ ಮಾತನಾಡಿದ ರಾಹುಲ್, ಈ ಬಾರಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವೇ ಇಲ್ಲ. ಈ ಬಾರಿ ಇಂಡಿಯಾ ಮೈತ್ರಿಕೂಟಕ್ಕೆ ಹೆಚ್ಚಿನ ಬೆಂಬಲ ಸಿಕ್ಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಅಗ್ನಿಪಥ್ ಯೋಜನೆ ರದ್ದುಗೊಳಿಸಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
VIDEO | A portion of the stage set for Rahul Gandhi's rally in Bihar's Paliganj collapsed as the Congress MP arrived with other party leaders. #LSPolls2024WithPTI #LokSabhaElections2024 pic.twitter.com/lDeQjTUnq6
— Press Trust of India (@PTI_News) May 27, 2024
2022ರಲ್ಲಿ ಮೋದಿ ಸರ್ಕಾರ ಅಗ್ನಿಪಥ್ ಯೋಜನೆ ಜಾರಿ ಮಾಡಿದ್ದು, ಇದರಲ್ಲಿ ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ, ಅವರಿಗೆ ನಿವೃತ್ತಿ ನೀಡಿ, ಕಳಿಸಲಾಗುತ್ತದೆ. ಹಾಗಾಗಿ ಈ ಯೋಜನೆಯಿಂದ ಯಾವುದೇ ಲಾಭವಿಲ್ಲ ಎಂದಿರುವ ರಾಹುಲ್, ತಾವು ಅಧಿಕಾರಕ್ಕೆ ಬಂದ್ರೆ, ಈ ಯೋಜನೆ ತೆಗೆದುಹಾಕುವುದಾಗಿ ಹೇಳಿದ್ದಾರೆ.
ಅಲ್ಲದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಎಲ್ಲ ಕೈಗಾರಿಕೆಗಳನ್ನು ತೆರೆದು, ಉದ್ಯೋಗ ಭರ್ತಿಗೆ ಅವವಕಾಶ ಮಾಡಿಕೊಡುತ್ತೇವೆ. ನಿರುದ್ಯೋಗಿಗಳಿಗೆ ತಿಂಗಳಿಗೆ 8ವರೆ ಸಾವಿರ ರೂಪಾಯಿ ನೀಡಲಾಗುತ್ತದೆ. ವರ್ಷಕ್ಕೆ ಒಂದು ಲಕ್ಷ ರೂಪಾಯಿ ನೀಡಲಾಗುತ್ತದೆ. 30 ಲಕ್ಷ ಉದ್ಯೋಗ ಕಲ್ಪಿಸುವ ಗುರಿ ಇದೆ ಎಂದು ರಾಾಹುಲ್ ಗಾಂಧಿ ಹೇಳಿದ್ದಾರೆ.
ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿ, ಎಲ್ಲರಿಗೂ ಮಾದರಿಯಾದ ವ್ಯಕ್ತಿ
21 ದಿನಗಳ ಪೂಜೆಗೆಂದು ಭಕ್ತನಿಂದ ನವರತ್ನ ಉಂಗುರ ಪಡೆದು ಗಿರವಿ ಇಟ್ಟ ಪೂಜಾರಿ