Wednesday, December 25, 2024

Latest Posts

ಸಿಟಿ ರವಿ‌ ಪ್ರಕರಣ ಸಿಐಡಿಗೆ ವಹಿಸಿರೋದು ರಾಜ್ಯ ಸರ್ಕಾರದ ವ್ಯಾಪ್ತಿ. ಅದು ನಮ್ಮ ವ್ಯಾಪ್ತಿಗೆ ಬರಲ್ಲ: ಹೊರಟ್ಟಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಭಾಪತಿ ಬಸವರಾಜ್ ಹೊರಟ್ಟಿ ಸಿಟಿ ರವಿ‌ ಪ್ರಕರಣ ಸಿಐಡಿಗೆ ವಹಿಸಿರೋದು ರಾಜ್ಯ ಸರ್ಕಾರದ ವ್ಯಾಪ್ತಿ. ಅದು ನಮ್ಮ ವ್ಯಾಪ್ತಿಗೆ ಬರಲ್ಲ ಎಂದರು.

ಅಲ್ಲದೇ, ನಮ್ಮನ್ನು ಏನೂ ಕೇಳೋಕೆ ಬರಲ್ಲ. ಸದನ‌‌ ಮುಂದೆ ಹಾಕಿರೋವಾಗ ಆಗಿರೋ ಘಟನೆ ಅದು‌. ಸಿಐಡಿಗೆ ಕೊಟ್ಟಿರೋದಾಗಿ ಹೋಂ ಮಿನಿಸ್ಟರ್ ಇವಾಗ ಹೇಳಿದ್ರು. ಸ್ಥಳ ಮಹಜರು ವಿಚಾರವಾಗಿ ನಾವು ಚರ್ಚೆ ಮಾಡ್ತೀವಿ. ಆ ತರಹದ ವಾತಾವರಣ ನಿರ್ಮಾಣ ಆದ್ರೆ ಅವಕಾಶ ಕೊಡಬೇಕಾಗುತ್ತೆ. ನಮ್ಮ ಸೆಕ್ರೇಟರಿ,ಕಾನೂನು ಪಂಡಿತರು ಚರ್ಚೆ ಮಾಡ್ತಿದಾರೆ. ಎರಡು ದೂರು ನಾವು ಪೊಲೀಸರಿಗೆ ಕೊಟ್ಟಿದ್ವಿ. ಸಿಐಡಿ ನಮ್ಮ ವ್ಯಾಪ್ತಿಯಲ್ಲಿ ಬರಲ್ಲ‌. ನಮ್ಮ ಕಾನೂನು ವ್ಯಾಪ್ತಿ ಬಿಟ್ಡು ನಾವು ಏನೂ ಮಾಡಲ್ಲ ಎಂದು ಹೊರಟ್ಟಿ ಹೇಳಿದರು.

ಅಡ್ವೋಕೆಟ್ ಜನರಲ್ ಮಾತಾಡಿದ್ದಾರೆ. ನಮ್ಮ ಅಧಿಕಾರಿಗಳನ್ನ ಕಳಸಿ ಮಹಜರಿಗೆ ಅವಕಾಶ ಕೊಡಬೇಕಾಗುತ್ತೆ. ಲಕ್ಷ್ಮೀ ಹೆಬ್ಬಾಳಕರ್ ನನಗೆ ಮತ್ತೊಂದು ದೂರು ಕೊಟ್ಡಿಲ್ಲ. ಕೊಟ್ರೆ ನಾವು ಕನ್ಸಿಡರ್ ಮಾಡ್ತೀವಿ. ಒಳಗೆ ಆಗಿರೋ‌ ಘಟನೆ ನನಗೆ ಮಾಹಿತಿ ಇಲ್ಲ. ಎರಡು ಕಡೆ ಯೋಚನೆ ‌ಮಾಡಬೇಕು. ಲಕ್ಷ್ಮೀ ಹೆಬ್ಬಾಳಕರ್ ಒಬ್ಬ ಮಂತ್ರಿ ಅಲ್ಲ,ಮಹಿಳೆಯಾಗಿ ನಾವು ನೋಡಬೇಕು. ಅದಲ್ಲದೇ ಸಿಟಿ ರವಿ ಅವರನ್ನು ಅಮಾನುಷವಾಗಿ ತಗೆದುಕೊಂಡು ಹೋಗಿದ್ದು ತಪ್ಪು. ಅವರು ಸದನದ ಸದಸ್ಯರಾಗಿ ಕೊಟ್ರು ನಾವು ತಗೋತಿವಿ‌ ಎಂದು ಹೊರಟ್ಟಿ ಹೇಳಿದರು.

ಮತ್ತೆ ಅವರನ್ನು ಕರೀತಿವಿ. ಮುಗಿದು ಹೋದ ಅಧ್ಯಾಯ ಅಂದ್ರೆ ನಾವು ತೀರ್ಮಾನ ಮಾಡಿದ್ದು. ಸಿಐಡಿಗೆ ವರ್ಗಾವಣೆ ಮಾಡಿರೋದು ನನ್ನ ಕೇಳೊಕೆ ಆಗಲ್ಲ. ಸೆಕ್ರಟಿರಿಯನ್ನ ಕೇಳ್ತಾರೆ. ಸಿಐಡಿ ರೆಫರೆನ್ಸ್ ಕೊಡೋವಾಗ ವಿಧಾನ ಪರಿಷತ್ ಅಂತಾ ಬರೆದಿದ್ದು ತಪ್ಪು. ಹೀಗೆ ಪೊಲೀಸರು ಹಾಕಬಾರದಿತ್ತು. ನಾವು ರೂಲಿಂಗ್ ಕೊಟ್ಟು ಕ್ಲೋಸ್ ಮಾಡಿದ್ವಿ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಂದು ಕೇಸ್ ಕೊಟ್ಟಿದ್ದಾರೆ ಅದರ ಮೇಲೆ ಕೇಸ್ ಆಗಿದೆ ಎಂದು ಹೊರಟ್ಟಿ ಹೇಳಿದರು.

ಕಲಾಪ ಮುಂದೂಡಿದ್ರೂ ಅದು ವಿಧಾನ‌ಪರಿಷತ್ ಆಗಿರುತ್ತೆ. ಅಲ್ಲಿ ಏನೇ ಆದರೂ ನಮ್ಮ ಅನುಮತಿ ಪಡೆಯಬೇಕು. ಅದು ನಮ್ಮ ಕಸ್ಡಡಿಯೊಳಗೆ. ನಾನು ಸೆಕ್ರೆಟರಿ ಗೆ ಡೈರೆಕ್ಷನ್ ಮಾಡಿದೀನಿ. ಸರ್ಕಾರದ ನಿಯಮ ಬೇರೆ, ನಮ್ಮ ನಿಯಮ ಬೇರೆ. ನಾನು ಬಹಳ ಪ್ರಯತ್ನ ಮಾಡಿದೀನಿ. ಇಬ್ಬರನ್ನು ಕರೆದು ಹೊಂದಾಣಿಕೆ ಮಾಡಬೇಕು ಅಂತಾ ಪ್ರಯತ್ನ ಮಾಡಿದ್ದೇವೆ. ವಿಧಾನ ಪರಿಷತ್ ನಲ್ಲಿ ನಡೆದ ಕೇಸ್ ಕುರಿತು ಸಿಐಡಿಗೆ ಹೋಗಿಲ್ಲ. ರೆಫರೆನ್ಸ್ ಹಾಕಿದ್ದು ಕೂಡಾ ತಪ್ಪು,ಅದನ್ನ ಹಾಕಬಾರದಿತ್ತು. ನಾವು ಹೊರಗಡೆ ಆಗಿದ್ದರ ಬಗ್ಗೆ ವೆರಿಫೈ ಮಾಡತಿದೀವಿ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಘಟನೆಯಾದ ಬಳಿಕ ಹೆಬ್ಬಾಳಕರ್ ದೌರ್ಜನ್ಯ ಆಗಿದೆ ಎಂದು ದೂರು ಕೊಟ್ಟಿದ್ದಾರೆ. ಅದರ ಮೇಲೆ ಹೋಗುತ್ತಿದೆ. ನಾನು ಕೂಡಾ ಕಾನೂನು ಪಂಡಿತರ ಜೊತೆ ಚರ್ಚೆ ಮಾಡ್ತಿದಿನಿ. ಹೆಬ್ಬಾಳಕರ್ ಹೆಣ್ಮಗಳು,ಅವರ ಮನಸ್ಸಿಗೆ ನೋವಾಗಿದೆ. ಅದೇ ರೀತಿ ಸಿಟಿ ರವಿ ನಡೆಸಿಕೊಂಡಿದ್ದು ತಪ್ಪು. ನನ್ನ ಮೇಲೆ ಯಾರ ಒತ್ತಡ ಹಾಕೋಕೆ ಸಾಧ್ಯ ಇಲ್ಲ. ಗವರ್ನರ್ ಮಾಹಿತಿ ಕೇಳಿದ್ರು,ಮಾಹಿತಿ ಕೊಟ್ಟಿದ್ದೇನೆ. ನಾನು ಕಾನೂನು ಬಿಟ್ಟು ಏನೂ ಮಾಡಲ್ಲ. ಇಬ್ಬರ ನೋವು ಅರ್ಥವಾಗಿದೆ. ಕರ್ನಾಟಕ ವಿಧಾನಪರಿಷತ್ ನಲ್ಲಿ ಇದು ಮೊದಲ ಘಟನೆ ಎಂದು ಹೊರಟ್ಟಿ ಹೇಳಿದ್ದಾರೆ.

- Advertisement -

Latest Posts

Don't Miss