Saturday, October 25, 2025

Latest Posts

ತನಗೆ ಬಿಸಿಯೂಟ ತೆಗೆದಿಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ ಶಿಕ್ಷಕಿ..

- Advertisement -

Dharwad News: ಇತ್ತೀಚೆಗೆ ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ ಅನ್ನೋ ಬರಹವನ್ನು ಬದಲಿಸಿ, ಧೈರ್ಯವಾಗಿ ಪ್ರಶ್ನಿಸು ಎಂಬ ಬರಹ ಹಾಕಬೇಕು ಎಂದು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.

ಆದರೆ ಧಾರವಾಡದ ಶಾಲೆಯಲ್ಲಿ ಶಿಕ್ಷಕಿಯೊಬ್ಬಳು ಬಿಸಿಯೂಟದ ವಿಷಯವಾಗಿ ರಾಕ್ಷಸಿಯಂತೆ ವರ್ತಿಸಿದ್ದಾಳೆ. ಈಕೆಯ ವರ್ತನೆಯನ್ನು ಧೈರ್ಯವಾಗಿ ಪ್ರಶ್ನಿಸುವವರಿಗೆ ಯಾರು ರಕ್ಷಣೆ ನೀಡುತ್ತಾರೆಂಬುದೇ ಪ್ರಶ್ನೆಯಾಗಿದೆ.

ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜುಂಜನಬೈಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಣ್ಣ ವಿಷಯಕ್ಕೆ ಶಿಕ್ಷಕಿ ಮಕ್ಕಳಿಗೆ ಮನಬಂದಂತೆ ಥಳಿಸಿದ ಘಟನೆ ನಡೆದಿದೆ. ತನಗೆ ಬಿಸಿಯೂಟ ತೆಗೆದಿಟ್ಟಿಲ್ಲವೆಂಬ ಕಾರಣಕ್ಕೆ, ಶಿಕ್ಷಕಿ ವಿದ್ಯಾರ್ಥಿಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಕೋಲಿನಿಂದ ಮನಬಂದಂತೆ ಥಳಿಸಿದ್ದಾಳೆ.

ಪೆಟ್ಟಿನ ನೋವು ತಾಳಲಾರದೇ, ವಿದ್ಯಾರ್ಥಿಗಳು ಕ್ಲಾಸಿನಿಂದ ಹೊರಗೆ ಬಂದಿದ್ದಾರೆ. ಹೀಗೆ ಹೊರಬಂದು ಓಡುವಾಗ, ಕೆಲ ವಿದ್ಯಾರ್ಥಿಗಳು ಓಡಿ ಪೆಟ್ಟು ಮಾಡಿಕೊಂಡಿದ್ದಾರೆ. ಆ ವಿದ್ಯಾರ್ಥಿನಿಯರಿಗೆ ಗಾಯಗಳಾಗಿದೆ. ಮಕ್ಕಳ ಚೀರಾಟ ಗಮನಿಸಿದ ಜನರು ಮತ್ತು ಶಾಲಾ ಸಿಬ್ಬಂದಿ ಶಿಕ್ಷಕಿಯನ್ನು ತಡೆದಿದ್ದಾರೆ. ಇನ್ನು ಈ ಕಾರಣಕ್ಕಾಗಿ ಶಾಲೆಯ ಎದುರು ಮಕ್ಕಳ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಇಷ್ಟು ಚಿಕ್ಕ ವಿಷಯಕ್ಕೆ ಮಕ್ಕಳಿಗೆ ಗಾಯವಾಗುವ ರೀತಿ ಥಳಿಸುವ ಶಿಕ್ಷಕಿಯರಿಗೆ ಕಠಿಣ ಶಿಕ್ಷೆ ವಿಧಿಸಲೇಬೇಕು. ನಮ್ಮ ಮಕ್ಕಳನ್ನು ರಕ್ಷಿಸಬೇಕು. ಶಾಲೆಗೆ ಕಳುಹಿಸುವುದಕ್ಕೆ ನಮಗೆ ಭಯವಾಗುತ್ತಿದೆ ಎಂದು ವಿದ್ಯಾರ್ಥಿಗಳ ಪಾಲಕರು ದೂರಿದ್ದಾರೆ.

ಯುಗಾದಿ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ-ಮಳೆ, ಧಾರ್ಮಿಕ ಮುಖಂಡನ ಸಾವಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ

ವಿದ್ಯಾರ್ಥಿನಿಯರ ರೀಲ್ಸ್‌ಗೆ ಕಾಮೆಂಟ್ ಮಾಡಿ ಅಚ್ಚರಿ ಮೂಡಿಸಿದ ನಟ ವಿಜಯ್ ದೇವರಕೊಂಡ

ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿ ರಿವಾಬಾಗೆ ಅರ್ಪಿಸಿದ ರವೀಂದ್ರ ಜಡೇಜಾ..

- Advertisement -

Latest Posts

Don't Miss