Tuesday, September 16, 2025

Latest Posts

ಮುಂದಿನ ಎರಡು ಮೂರು ದಿನಗಳಲ್ಲಿ ಟಿಕೆಟ್ ಫೈನಲ್ ಆಗಬಹುದು : ಪ್ರಹ್ಲಾದ್ ಜೋಶಿ

- Advertisement -

Hubli News: ಲೋಕಸಭಾ ಟಿಕೆಟ್ ವಿಚಾರವಾಗಿ ಊಹಾಪೋಹಗಳಿಗೆ ನಾನು‌ ಉತ್ತರ ಕೊಡಲ್ಲ. 8 ಸಲ ಗೆದ್ದವರಿಗೆ ಟಿಕೆಟ್ ಕೊಡಲಾಗಿದೆ. ಎರಡು ಸಲ ಗೆದ್ದವರಿಗೆ ಟಿಕೆಟ್ ಕೊಡಲಾಗಿದೆ. ಇದಕ್ಕೆ ನಾನು ಮೊನ್ನೆ ಹೇಳಿದ್ದೇನೆ. ಊಹಾಪೋಹಗಳಿಗೆ ನಾನು ಉತ್ತರಿಸಲ್ಲ ಎಂದರು.

ನಗರದ ಗೋಕುಲ್ ರೋಡ್ ನ ರಾಧಾಕೃಷ್ಣ ನಗರದಲ್ಲಿ 32 ಎಲ್.ಇ. ಡಿ ಬಿಜೆಪಿ ಪ್ರಣಾಳಿಕೆ ಅಭಿಪ್ರಾಯ ಸಂಗ್ರಹದ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಟಿಕೆಟ್ ಕೈ ತಪ್ಪುವದು ಊಹಾಪೋಹ. ವಿರೇಂದ್ರ ಕುಮಾರ್ ಎಂಟನೇ ಸಾರಿ ಟಿಕೆಟ್ ಸಿಕ್ಕಿಲ್ವಾ ಎಂದು ಪ್ರಶ್ನಿಸಿದ ಅವರು ಪರೋಕ್ಷವಾಗಿ ತಮಗೆ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ಬಿಸಿ ಪಾಟೀಲ್ ಗೆ ಟಿಕೆಟ್ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,ಇದನ್ನು ನಮ್ಮ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಎಲ್ಲರ ಜೊತೆ ಮಾತಾಡ್ತಾರೆ. ನಮ್ಮ ರಾಷ್ಟ್ರೀಯ ನಾಯಕರು ಟಿಕೆಟ್ ತೀರ್ಮಾನ ಆದ ಮೇಲೆ ಸಮಾಧಾನ ಮಾಡ್ತಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ಟಿಕೆಟ್ ಫೈನಲ್ ಆಗಬಹುದು. ಯಡಿಯೂರಪ್ಪ ನಾವು ದೆಹಲಿಗೆ ಹೋಗಬೇಕಿತ್ತು. ಇಲೆಕ್ಷನ್ ಕಮೀಟಿ ಮೀಟಿಂಗ್ ಮುಂದಕ್ಕೆ ಹೋಗಿದೆ ಎಂದರು.

ಆಂಧ್ರಪ್ರದೇಶ ಲೋಕಸಭೆ ಚುನಾವಣೆಗೆ ಬಿಜೆಪಿ, ಟಿಡಿಪಿ,ಜೆಎಸ್‌ಪಿ ಮೈತ್ರಿ ಸ್ಪರ್ಧೆ

ಜಪಾನ್‌ನಲ್ಲಿ ಅಮೀರ್ ಖಾನ್ ಮಗ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ಪಾರ್ಟಿ..

ನಿವೃತ್ತಿ ಬಗ್ಗೆ ಮಾತನಾಡಿದ ಕ್ರಿಕೇಟಿಗ ರೋಹಿತ್ ಶರ್ಮಾ..

- Advertisement -

Latest Posts

Don't Miss