Friday, December 5, 2025

Latest Posts

Weavers ಸರ್ಕಾರ ಈ ಕೂಡಲೇ ವೈಜ್ಞಾನಿಕ ಬೆಲೆಯನ್ನು ನೀಡುವಂತೆ ಒತ್ತಾಯ..!

- Advertisement -

ದೊಡ್ಡಬಳ್ಳಾಪುರ ; ಮೇಕೆದಾಟು ಯೋಜನೆಗೆ 1000 ಕೋಟಿ ನಾಮಕಾವಸ್ತೆಗಷ್ಟೆ,ಅಗತ್ಯವಾದ ಹಣವನ್ನು ಬಿಡುಗಡೆ ಮಾಡಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ಕರುನಾಡ ವಿಜಯಸೇನೆ ಸಂಘಟನೆಯ ವತಿಯಿಂದ ನಿನ್ನೆ ಪತ್ರಿಕಾಗೋಷ್ಠಿ ನಡೆಸಿಲಾಯಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರುನಾಡ ವಿಜಯಸೇನೆ ಸಂಘಟನೆಯ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ರಾಮ್ ಪ್ರಸಾದ್ ಗೌಡ ದೊಡ್ಡಬಳ್ಳಾಪುರ ತಾಲ್ಲೂಕಿನ ನೇಕಾರರಿಗೆ ಸರ್ಕಾರ ಈ ಕೂಡಲೇ ವೈಜ್ಞಾನಿಕ ಬೆಲೆಯನ್ನು ನೀಡಬೇಕು ಹಾಗೂ ಕರುನಾಡ ವಿಜಯಸೇನೆ ಸಂಘಟನೆಯು ರೈತರ ರಕ್ಷ ಕವಚವಾಗಿರುತ್ತದೆ ಎಂದು ಕರುನಾಡ ವಿಜಯಸೇನೆ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ರಾಮ್ ಪ್ರಸಾದ್‌ ಗೌಡ ಮಾತನಾಡಿದರು. ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ರಾಮ್ ಪ್ರಸಾದ್ ಗೌಡ ಮೇಕೆದಾಟು ಯೋಜನೆಗೆ ಒಂದು ಸಾವಿರ ಕೋಟಿಯನ್ನು ನಾಮಕಾವಸ್ತೆಗೆ ಮಾತ್ರ ಹಣ ಬಿಡುಗಡೆ ಮಾಡುದ್ದಾರೆ, ಅಗತ್ಯವಾದ ಹಣವನ್ನು ಘೋಷಣೆ ಮಾಡಬೇಕು ಎಂದು ರಾಜ್ಯ ಕರ್ಮಿಕ ಘಟಕದ ಅದ್ಯಕ್ಷ ರಾಮ್ ಪ್ರಸಾದ್ ಮಾತನಾಡಿದರು. ಕರುನಾಡ ವಿಜಯಸೇನೆ ಸಂಘಟನೆಯ ಕಸಬಾ ಹಾಗೂ ತೂಬಗೆರೆ ಹೋಬಳಿ ಮಟ್ಟದ ಪತ್ರಿಕಾ ಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಕ್ಷ ಸುಚೀಂದ್ರ ಜಿಲ್ಲಾ ಯುವಘಟಕದ ಅಧ್ಯಕ್ಷ ದೀಪುಗೌಡ ,ರಾಜ್ಯ ಕಾರ್ಯದರ್ಶಿ ಎ.ನಂಜಪ್ಪ, ತಾಲೂಕು ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕವಿತಮ್ಮ,ಜಿಲ್ಲಾ ಪ್ರದಾನ ಕಾರ್ಯದರ್ಶಿ ಕೋದಂಡ ಹಾಗೂ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಉಪಸ್ಥಿತರಿದ್ದರು.

ಅಭಿಜಿತ್, ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ.

- Advertisement -

Latest Posts

Don't Miss