Tuesday, March 11, 2025

Latest Posts

ಟ್ರಂಪ್‌-ಝುಲೆನ್ಸ್ಕಿ ಕಿತ್ತಾಟಕ್ಕೆ ಬಿಚ್ಚಿಬಿದ್ದ ಜಗತ್ತು..! ಉಕ್ರೇನ್‌ ಅಧ್ಯಕ್ಷನಿಗೆ ಬೈದು ಹೊರಹಾಕಿದ ಟ್ರಂಪ್..‌

- Advertisement -

International News: ಅಮೆರಿಕ ಹಾಗೂ ಉಕ್ರೇನ್ ನಡುವಿನ ಉನ್ನತ ಮಟ್ಟದ ಮಾತುಕತೆ ನಡೆಯುತ್ತಿರುವ ವೇಳೆ ವೈಟ್‌ ಹೌಸ್‌ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಗಲಾಟೆ ನಡೆದಿದೆ. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್‌ ನಡುವೆ ಖನಿಜ ಒಪ್ಪಂದಗಳ ಕುರಿತು ಮಾತುಕತೆ ನಡೆದಿತ್ತು. ಈ ವೇಳೆ ರಷ್ಯಾ ಹಾಗೂ ಉಕ್ರೇನ್‌ ನಡುವಿನ ಕದನ ವಿರಾಮ ಹಾಗೂ ಭದ್ರತಾ ವಿಚಾರಗಳ ಮೇಲಿನ ಚರ್ಚೆಯೂ ಆಗಿತ್ತು. ಇನ್ನೂ ಇದೇ ವಿಚಾರಕ್ಕೆ ಜಾಗತಿಕ ಮಟ್ಟದ ಮಾಧ್ಯಮಗಳೆದುರೆ ಉಭಯ ನಾಯಕರು ಪರಸ್ಪರ ಕಿತ್ತಾಡಿಕೊಂಡಿರುವುದ್ದಕ್ಕೆ ಇಡೀ ಜಗತ್ತೇ ಬೆಚ್ಚಿಬಿದ್ದಿದೆ.

ಟ್ರಂಪ್‌-ಝುಲೆನ್ಸ್ಕಿ ಕಿತ್ತಾಟಕ್ಕೆ ಬಿಚ್ಚಿಬಿದ್ದ ಜಗತ್ತು..!

3ನೇ ಮಹಾಯುದ್ಧಕ್ಕೆ ನೀವೇ ಕಾರಣರಾಗ್ತೀರಿ ಎಂದ ಯುಎಸ್‌ ಅಧ್ಯಕ್ಷ..

ಭದ್ರತಾ ವಿಚಾರಗಳ ಬಗ್ಗೆ ಮಾತನಾಡಲು ಉಕ್ರೇನ್‌ ಅಧ್ಯಕ್ಷರು ಮುಂದಾದಾಗ ಟ್ರಂಪ್‌ ನಾನು ಇದರ ಕುರಿತು ಮಾತನಾಡುವುದಿಲ್ಲ, ಅದರೆ ಖನಿಜ ಒಪ್ಪಂದಗಳ ಬಗ್ಗೆ ಚರ್ಚೆ ಮಾಡಲು ಇಚ್ಚಿಸುತ್ತೇನೆ ಎಂದರು. ಹೀಗೆ ಮುಂದುವರೆದ ನಾಯಕರ ಕಿತ್ತಾಟವು ಉದ್ವಿಗ್ನತೆ ಪಡೆದು ಕೊನೆಗೆ ಟ್ರಂಪ್‌ ಝಲೆನ್ಸ್ಕಿಗೆ ಶ್ವೇತ ಭವನದಿಂದ ಎದ್ದು ಹೋಗುವಂತೆ ತಿಳಿಸುತ್ತಾರೆ.

ಉಕ್ರೇನ್‌ ಅಧ್ಯಕ್ಷನಿಗೆ ಬೈದು ಹೊರಹಾಕಿದ ಟ್ರಂಪ್..‌

ಮಾಧ್ಯಮಗಳೆದುರೆ ಹೀಗೆ ಮಾಡಿದ್ದ ಗೌರವ ತರುವುದಿಲ್ಲ..

ಅಮೆರಿಕ ಅಧ್ಯಕ್ಷರ ಮೇಲೆ ಝಲೆನ್ಸ್ಕಿ ಆಕ್ರೋಶ..!

ಆದರೆ ಮತ್ತೆ ಝೆಲೆನ್ಸ್ಕಿ ಉಕ್ರೇನ್‌ಗೆ ಅಮೆರಿಕ ಬೆಂಬಲವನ್ನು ನೀಡಬೇಕೆಂದು ಮನವಿ ಮಾಡುತ್ತಾರೆ. ಝೆಲೆನ್ಸ್ಕಿ ಅಮೆರಿಕದ ಬೆಂಬಲಕ್ಕೆ ಕೃತಜ್ಞತೆ ತೋರಿಸದಿರುವುದು ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಾಜತಾಂತ್ರಿಕ ನಿಲುವನ್ನು ಚರ್ಚಿಸಲು ಪ್ರಯತ್ನಿಸಿದ್ದಕ್ಕೆ ಟ್ರಂಪ್ ಮತ್ತು ಅಮೆರಿಕ ಉಪಾಧ್ಯಕ್ಷ‌ ಜೆ ಡಿ ವ್ಯಾನ್ಸ್ ತೀವ್ರವಾಗಿ ಟೀಕಾ ಪ್ರಹಾರ ನಡೆಸಿದ್ದರು. ಅಲ್ಲದೆ ನೀವು ಇದೇ ರೀತಿ ನಡೆದುಕೊಂಡರೆ, ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಆದರೆ ಈ ಭೇಟಿಯಲ್ಲಿ ಯಾವುದೇ ಒಪ್ಪಂದಕ್ಕೆ ಎರಡೂ ನಾಯಕರು ಸಹಿ ಹಾಕಲಿಲ್ಲ ಜೊತೆಗೆ ತಮ್ಮ ವಾಕ್ಸ್‌ಮರದಲ್ಲಿಯೇ ಜಂಟಿ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿದರು.

ಮೂರನೇ ಮಹಾಯುದ್ದಕ್ಕೆ ನೀವೇ ಕಾರಣವಾಗುತ್ತೀರಿ..

ಝುಲೆನ್ಸ್ಕಿ ಹಾಗೂ ಟ್ರಂಪ್‌ ಮಾತುಕತೆಯ ವೇಳೆಯಲ್ಲಿ ಟ್ರಂಪ್‌, ನೀವು ಲಕ್ಷಾಂತರ ಜನರ ಜೀವಗಳೊಂದಿಗೆ ಆಟವಾಡುತ್ತಿದ್ದೀರಿ, 3ನೇ ಮಹಾಯುದ್ಧದಂತೆ ಜೂಜಾಡುತ್ತಿದ್ದೀರಿ, ನಿಮ್ಮಿಂದಲೇ ಯುದ್ಧ ನಡೆಯಬಹುದು. ನೀವು ಹೀಗೆ ನಡೆದುಕೊಳ್ಳುತ್ತಿರುವುದು ಈ ದೇಶಕ್ಕೆ ತುಂಬಾ ಅಗೌರವವಾಗಿದೆ ಎಂದು ನೇರ ವಾಗ್ದಾಳಿ ನಡೆಸಿದರು. ಅಲ್ಲದೆ ನೀವು ಧೈರ್ಯವಂತರಿರಬಹುದು, ಆದ್ರೂ ಖನಿಜ ಒಪ್ಪಂದಕ್ಕೆ ಸಹಿ ಹಾಕಲೇಬೇಕು. ಇಲ್ಲದಿದ್ದರೆ ನಾವು ನಿಮಗೆ ಸಹಾಯ ಮಾಡುವುದಿಲ್ಲ. ನಾವು ಸಹಾಯ ಮಾಡದಿದ್ದರೆ, ನೀವು ಯುದ್ಧ ಮುಂದುವರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ತೀರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಈ ವೇಳೆ ಝಲೆನ್ಸ್ಕಿ.. ಜಾಗತಿಕ ಮಟ್ಟದ ಪತ್ರಕರ್ತರ ಎದುರು ನೀವು ಈ ರೀತಿ ಮಾತನಾಡುವುದು ಗೌರವ ತರುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಕೆರಳಿ ಕೆಂಡವಾದ ಟ್ರಂಪ್‌ ನಿಮ್ಮ ನಡೆಯಿಂದ 3ನೇ ಮಹಾಯುದ್ಧ ಸಂಭವಿಸಬಹುದು. ಇದು ಇಡೀ ಜಗತ್ತನ್ನು ಸಮಸ್ಯೆಗೆ ಸಿಲುಕಿಸಬಹುದು ಎಂದು ಗುಡುಗಿದರು.

ಇನ್ನೂಈಗಾಗಲೇ ಉಕ್ರೇನ್‌ ದೇಶಕ್ಕೆ ಫ್ರಾನ್ಸ್‌, ಬ್ರಿಟನ್‌ ಹಾಗೂ ಇತರ ದೇಶಗಳು ಭದ್ರತೆ ಒದಗಿಸುತ್ತಿವೆ ಎಂದು ನನಗೆ ತಿಳಿದಿದೆ. ಆದ್ರೆ ನಾವು ಯುದ್ಧವನ್ನು ಮುಂದುವರಿಸಲು ಸಿದ್ಧರಿಲ್ಲ. ಈ ಸಮಸ್ಯೆಯನ್ನುಕೊನೆಗೊಳಿಸಲು ಎದುರುನೋಡುತ್ತಿದ್ದೇವೆ. ಅಲ್ಲದೆ ನಾವು ಉಕ್ರೇನ್‌ಗೆ ಬೇರೊಂದು ರೀತಿಯಲ್ಲಿ ಭದ್ರತೆ ನೀಡುತ್ತೇವೆ. ನಮ್ಮ ಕಾರ್ಮಿಕರು ಅಲ್ಲಿಯೇ ಇದ್ದು ಖನಿಜ ಸಂಪತ್ತನ್ನು ಹೊರ ತೆಗೆಯುತ್ತಾರೆ. ನಾವು ನಿಮ್ಮ ದೇಶದಲ್ಲಿ ಉತ್ತಮ ಉತ್ಪನ್ನಗಳನ್ನು ತಯಾರಿಸುತ್ತೇವೆ ಎಂದು ಟ್ರಂಪ್‌ ಉಕ್ರೇನ್‌ನ್ನು ಆರ್ಥಿಕವಾಗಿ ಸುಧಾರಿಸುವ ಭರವಸೆ ನೀಡಿದರು.

ಈ ಮಾತಿಗೆ ಉತ್ತರಿಸಿದ ಝಲೆನ್ಸ್ಕಿ, ಟ್ರಂಪ್‌ ಈ ಯುದ್ಧ ನಿಲ್ಲಿಸುವ ಉದ್ದೇಶ ಹೊಂದಿರಬಹುದು. ಆದ್ರೆ ಅದಕ್ಕೆ ನಮ್ಮ ಬಳಿಯೂ ಬಲವಾದ ಸೈನ್ಯ ಇರಬೇಕು. ನಾವು ಬಲಿಷ್ಠವಾಗಿದ್ದರೆ ಮಾತ್ರ ರಷ್ಯಾದ ಪುಟಿನ್‌ ಸೈನ್ಯವು ನಮಗೆ ಹೆದರುತ್ತದೆ. ನಮ್ಮ ಸೈನ್ಯವು ಬಲಹೀನವಾದರೆ, ಪುಟಿನ್‌ ಸೇನೆ ನಮ್ಮ ಮೇಲೆ ಸವಾರಿ ಮಾಡುತ್ತದೆ. ಆಗ ನಮ್ಮನ್ನೂ ನಾವು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಝಲೆನ್ಸ್ಕಿ ಆತಂಕ ವ್ಯಕ್ತಪಡಿಸಿದರು.

- Advertisement -

Latest Posts

Don't Miss