ಕಾಂಗ್ರೆಸ್ ಪಕ್ಷದಲ್ಲಿ‌ಯಾವುದೇ ಬಣಗಳಿಲ್ಲ ಪಕ್ಷ ಒಂದು ಕುಟುಂಬ ಇದ್ದ ಹಾಗೆ: ವಿನೋದ್ ಅಸೂಟಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಮಾತನಾಡಿದ್ದು,  ನಿನ್ನೆಯಿಂದ ಪಕ್ಷದ ಎಲ್ಲರ ಅಭಿಪ್ರಾಯ ಪಡೆದು ಪ್ರಚಾರ ಆರಂಭಿಸಿದ್ದೇನೆ. ನಾನು ಯಾವುದೇ ಹರಕೆಯ ಕುರಿಯಲ್ಲ. ಪಕ್ಷ ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ನೀಡಿದೆ. ಪಕ್ಷದ ನಾಯಕರು ನೀಡಿರುವ ಈ ಅವಕಾಶ ಸದುಪಯೋಗ ಪಡೆಯುವ ಮೂಲಕ‌ ಕಾಂಗ್ರೆಸ್ ಬಾವುಟ ಹಾರಿಸಲಿದ್ದೇವೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ‌ಯಾವುದೇ ಬಣಗಳಿಲ್ಲ ಪಕ್ಷ ಒಂದು ಕುಟುಂಬ ಇದ್ದ ಹಾಗೆ. ಎಲ್ಲರೂ ಜೊತೆಗೂಡಿ‌ ಚುನಾವಣೆ ಎದುರಿಸಲಿದ್ದೇವೆ. ಪಕ್ಷದಲ್ಲಿ‌ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಲ್ಲರೂ ಒಟ್ಟಾಗಿ ಕೆಲಸ ಮಾಡಲಿದ್ದೇವೆ. ರಾಜ್ಯದ ಜನತೆಗೆ ನೀಡಿರುವ ಗ್ಯಾರಂಟಿ‌ ಯೋಜನೆಗಳ‌ ವಿಶ್ವಾಸದಿಂದ ಚುನಾವಣೆ ಎದುರಿಸಲಿದ್ದೇವೆ. ದೇಶದಾದ್ಯಂತ ಕಾಂಗ್ರೆಸ್ ಅಲೆ ಇದೆ ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿನೋದ್ ಅಸೂಟಿ ಹೇಳಿದ್ದಾರೆ.

ಬಾಲಿವುಡ್‌ ಬೆಡಗಿ ಕಂಗನಾಗೆ ಬಿಜೆಪಿ ಟಿಕೇಟ್ ಘೋಷಣೆ: ಮಂಡಿ ಕ್ಷೇತ್ರದಿಂದ ಸ್ಪರ್ಧೆ..

ಗಾಲಿ ಜನಾರ್ಧನ ರೆಡ್ಡಿ ಮರಳಿ ಬಿಜೆಪಿಗೆ ಬಂದಿದ್ದು, ಬಾಹುಬಲಿ ರೀತಿಯಲ್ಲಿ ದೊಡ್ಡ ಶಕ್ತಿ ಬಂದಿದೆ: ಶ್ರೀರಾಮುಲು

ಉಜ್ಜಯನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಅಗ್ನಿ ಅವಘಡ: ಹಲವರಿಗೆ ಗಾಯ

About The Author