Chikkodi News: ಚಿಕ್ಕೋಡಿ: ಕನ್ನಡ ಧ್ವಜ ಅಳವಡಿಸಿದ್ದಕ್ಕೆ, ಕನ್ನಡಿಗ ಯುವಕನಿಗೆ ಕೆಲ ಮರಾಠಿ ಪುಂಡರು ಥಳಿಸಿದ್ದು, ಕರ್ನಾಟಕದಲ್ಲೇ ಕನ್ನಡಿಗನ ಮೇಲೆ ದೌರ್ಜನ್ಯ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಬಳಿಯ ಅಳವಡಿಸಿದ್ದ ಕನ್ನಡ ಧ್ವಜ ತೆರುವು ಮಾಡುವ ವಿಚಾರಕ್ಕೆ ಗಲಾಟೆ ನಡೆದಿದೆ.
ಈ ವೇಳೆ ಕೆಲ ಮರಾಠಾ ಸಮುದಾಯದ ಕಿಡೀಗೇಡಿಗಳು ಕನ್ನಡಿಗನ ಮೇಲೆ ದಾಳಿ ಮಾಡಿದ್ದು, 5 ಜನರ ವಿರುದ್ಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಓರ್ವನನ್ನು ಪೊಲೀಸರು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.
ಬಿಲ್ ಪಾಸ್ ಮಾಡಲು ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು
ಧನಕರ್‌ಗೆ ಕರೆ ಮಾಡಿ ನಾನೂ 20 ವರ್ಷಗಳಿಂದ ಅವಮಾನ ಅನುಭವಿಸಿದ್ದೇನೆ, ಬೇಸರಿಸಬೇಡಿ ಎಂದ ಮೋದಿ
ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನನು ಭೇಟಿಯಾಗಿ ಪರಿಹಾರಕ್ಕಾಗಿ ಮನವಿ ಮಾಡಿದ ಸಿಎಂ ಸಿದ್ದರಾಮಯ್ಯ