Hubballi News: ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್‌ನ ಚಿಲ್ಲರೆತನಕ್ಕೆ ಬಾಲಿಶತನಕ್ಕೆ ಒಂದು ಮಿತಿ ಇರಬೇಕು. ನಾನೂ ಮೂವತ್ತು ವರ್ಷಗಳಿಂದ ಪರಿಶುದ್ಧ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಸುರ್ಜೇವಾಲ ಹೇಳಿಕೆ ಅತ್ಯಂತ ಬಾಲಿಶ ಮತ್ತು ಚೈಲ್ಡಿಶ್ ಹೇಳಿಕೆ. ಅವರು ಈ ಬಗ್ಗೆ ದಾಖಲೆಗಳನ್ನು ಕೊಡಬೇಕು ಇಲ್ಲವಾದ್ರೆ ನಾನೂ ಕಾನೂನಿನ ಮುಖಾಂತರ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ರೇಲ್ವೆ ಜಾಗದಲ್ಲಿ ಭ್ರಷ್ಟಾಚಾರ ಸುರ್ಜೇವಾಲ ಆರೋಪವನ್ನ ಸಮರ್ಥನೆ ಮಾಡಿಕೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರೇಲ್ವೆ ಜಾಗಕ್ಕೆ ಇಲ್ಲಿಯವರೆಗೂ ಐದು ಬಾರಿ ಟೆಂಡರ್ ಕರೆಯಲಾಗಿದೆ ಯಾರು ಸಹ ಇದರಲ್ಲಿ ಭಾಗಿಯಾಗಿಲ್ಲ. ಈಗ ಮತ್ತೆ ಟೆಂಡರ್ ಕರೆಯಲಾಗಿದೆ ನೀವು ಸಹ ಟೆಂಡರ್‌ನಲ್ಲಿ ಭಾಗಿಯಾಗಬಹುದು. ಕಾಂಗ್ರೆಸ್‌ನವರ ಬಳಿ ಸಾಕಷ್ಟು ಭ್ರಷ್ಟಾಚಾರದ ಹಣ ಇದೆ. ಅದರ ಮುಖಾಂತರ ನೀವು ಟೆಂಡರ್‌ನಲ್ಲಿ ಭಾಗಿಯಾಗಬಹುದು. ನಿಮ್ಮ ಹಾಗೆ ಕಲ್ಲಿದ್ದಲಿನಲ್ಲಿ ಚೀಟಿ ಬರೆದು ಟೆಂಡರ್ ಕರೆದಿಲ್ಲ. ಇದು ಆನ್ಲೈನ್ ಮುಖಾಂತರ ಟೆಂಡರ್ ಕರೆಯಲಾಗಿದೆ ಇದರಲ್ಲಿ ಭ್ರಷ್ಟಾಚಾರ ಇಲ್ಲ. ಭ್ರಷ್ಟಾಚಾರಕ್ಕೆ ನಮ್ಮ ಸರ್ಕಾರ ಅವಕಾಶ ಮಾಡಿಕೊಡುವ ಮಾತೆ ಇಲ್ಲ. ಸುರ್ಜೆವಾಲ ಅವರಿಗೆ ಮೊದಲಿಗೆ ಹರಿಯಾಣವನ್ನ ಸಂಭಾಳಿಸಿ ಬಾ ಅಂತ ಹೇಳಿ ಎಂದು ಜೋಶಿ ಹೇಳಿದ್ದಾರೆ.
ಮೋದಿ ಸರ್ಕಾರ 10 ವರ್ಷದಲ್ಲಿ ಬ್ರಷ್ಟಾಚಾರ ಸಮೀಪ ಬಿಟ್ಟಿಲ್ಲ. ಇವರ ಕಾಲದಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ಆಗಿರೋದು ಪಾರ್ಲಿಮೆಂಟ್ ನಲ್ಲಿ ಹೇಳಿದ್ರು. ರೇಲ್ವೆ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ ಪಾರದರ್ಶಕವಾಗಿ ಕೆಲಸ ಮಾಡ್ತಿದೆ. ಐದು ಸಾರಿ ಬಿಡ್ ಕರೆದರೂ ಯಾರೂ ಟೆಂಡರ್ ಹಾಕಿಲ್ಲ. ಬಾಲಿಶತನಕ್ಕೆ ಹುಚ್ಚತನಕ್ಕೆ ಒಂದು ಮಿತಿ ಇರಬೇಕು. ಸುರ್ಜೇವಾಲಾ ಕಾಂಗ್ರೆಸ್ ಗೆ ಒಂದು ಮಿತಿ ಇರಬೇಕು. ಇದು ನಮಗೆ ಯಾರಿಗೂ ಗೊತ್ತಿಲ್ಲ,ರೇಲ್ವೆ ಮಂತ್ರಿಗಳಿಗೂ ನಾನು ಮಾತಾಡಿದ್ದೇನೆ. ಇದೊಂದು ಸುಳ್ಳು ಸುದ್ದಿ ಎಂದು ಅವರು ಹೇಳಿದ್ರು. 99 ವರ್ಷ ಲೀಸ್ ಕೊಡಲು ಪ್ರಾವಿಸನ್ ಇದೆ ಎಂದು ಜೋಶಿ ಹೇಳಿದ್ದಾರೆ.
ನಿಮ್ಮ ಆಕ್ಷೇಪ ಇದ್ರೆ ಕಂಪ್ಲೇಂಟ್ ಮಾಡಿ. ಕಾಂಗ್ರೆಸ್ ಪಕ್ಷದವರ ಬಳಿ ಸಾಕಷ್ಟು ದುಡ್ಡಿದೆ. ಭ್ರಷ್ಟಾಚಾರ ಮಾಡಿರೋ ದುಡ್ಡು ಸಾಕಷ್ಟಿದೆ. ನೀವು ಟೆಂಡರ್ ಹಾಕಿ ಯಾರ ಬೇಡ ಅಂದರೂ ಇದು ಮೋದಿ ಸರ್ಕಾರ,ಭ್ರಷ್ಟಾಚಾರ ಮಾಡಿಲ್ಲ. ಯಾವ ಆರೋಪವೂ ಇಲ್ಲ. ಒಂದೇ ಒಂದು ಬ್ರಷ್ಟಾಚಾರ ಇಲ್ಲದೆ ಸರ್ಕಾರ ನಡೆದಿದ. ಆ ಜಮೀನು ಮೇಲೆ ಕಾಂಗ್ರೆಸ್ ನವರ ಕಣ್ಣು ಇರಬೇಕು. ಅಕ್ರಮಸಕ್ರಮ ಲೇಔಟ್ ನಲ್ಲಿ ಕಾಂಗ್ರೆಸ್ ಪಾಲಿದೆ. ಆ ಜಮೀನಿನ ಮೇಲೆ ಕಾಂಗ್ರೆಸ್ ನವರ ಕಣ್ಣಿದೆ. ಹರಿಯಾಣದಲ್ಲಿ ಬಡಿದಾಟ ಸಾಯ್ತಿದಾರೆ. ಸುರ್ಜೇವಾಲಾ ಅದನ್ನು ಸಂಬಳಿಸಿಕೊಂಡು ಬರಲಿ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.
ಸುರ್ಜೇವಾಲಾ, ಉಗ್ರಪ್ಪ ವಿರುದ್ದ ಕಾನೂನು ಹೋರಾಟ ಮಾಡುವೆ. 58 ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ಇದೊಂದು ಬಾಲಿಶ ಆರೋಪ. ಸ್ವಲ್ಪ ಏನೇ ಮಾತಾಡಿದ್ರು ಗಂಭೀರತೆ ಇರಬೇಕು. ನಾನು ಪರಿಶುದ್ದ ರಾಜಕಾರಣ ಮಾಡಿದ್ದೇನೆ. ಚುನಾವಣೆ ಇದೆ ಹಾಗಾಗಿ ಸುಳ್ಳು ಆರೋಪ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಅರ್ಥ ಇಲ್ಲ. 1300 ಕೋಟಿ ಅಲ್ಲ 200 ಕೋಟಿ ಕೊಟ್ಟು ತಗೊಂಡು ಹೋಗ್ರೀ. 1300 ಕೋಟಿ ಅಂದ್ರೆ ಒಂದು ಎಕರೆಗೆ 100 ಕೋಟಿ ಆಯ್ತು. ಹುಬ್ಬಳ್ಳಿಯಲ್ಲಿ ಅಲ್ಲ,ಬಾಂಬೆ ಬೆಂಗಳೂರು ಅಲ್ಲೂ ಒಂದು ಎಕರೆಗೆ 100 ಕೋಟಿ ಇಲ್ಲ. ಮೂರ್ಖತನಕ್ಕೆ ಮಿತಿ ಇರಬೇಕು. ಇದೊಂದು ಫೂಲಿಶ್ ಕಡೆಗಣನೆ ಮಾಡೋಕೇಸ್ ಇದು. ಸುರ್ಜೇವಾಲಾ ಹೇಳಿಕೆ ಅತ್ಯಂತ ಇಮ್ಮೆಚುರಿಟಿ ಎಂದು ಜೋಶಿ ಆಕ್ರೋಶ ಹೊರಹಾಕಿದ್ದಾರೆ.
ಮುನೇನಕೊಪ್ಪ ಬಿಜೆಪಿಯಿಂದ ಅಂತರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಮಾಜಿ ಸಚಿವ ಮುನೇನಕೊಪ್ಪ ಜನವರಿ 31 ರ ವರೆಗೂ ಬರಲ್ಲ ಅಂದಿದ್ದಾರೆ. ಜನವರಿ 31 ರ ನಂತರ ನನ್ನ ಜೊತೆ ಮಾತಾಡ್ತಾರೆ ಎಂದು ಹೇಳಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿ ಬ್ಯಾನರ್ ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ಪಾಲಿಕೆ ಮಾಡಿರೋದು ಸರಿ ಅಲ್ಲ. ನಾನು ಅಧಿಕಾರಿಗಳನ್ನ ಕರೆದು ವಾರ್ನ್ ಮಾಡ್ತೀನಿ. ಕೇಳಿಲ್ಲ ಅಂದ್ರೆ ಮತ್ತೆ ಹೋರಾಟ ಮಾಡ್ತೀನಿ. ನಮಗೆ ಹೋರಾಟಕ್ಕೆ ಅವರ ವಿಷಯ ಕೊಡ್ತಿದಾರೆ ಎಂದು ಜೋಶಿ ಎಚ್ಚರಿಕೆ ನೀಡಿದ್ದಾರೆ.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ಬಹಳ ಸೀರಿಯಸ್ ವಿಚಾರ. ನೈತಿಕ ಪೊಲೀಸ್‌ಗಿರಿ ಮಾಡಿದವರು PFI ಕಾರ್ಯಕರ್ತರೆಂದು ತಿಳಿದು ಬಂದಿದೆ. ಸರ್ಕಾರದ ಕ್ರಮ ಕಣ್ಣೊರೆಸೋ ತಂತ್ರ ಆಗಿದೆ. SIT ಮಾಡಲು ನಮ್ಮ ಹೋರಾಟ ಇದೆ. ಹೀಗಾಗಿ ಇವತ್ತು ನಮ್ಮ ವಿರೋಧ ಪಕ್ಷದ ನಾಯಕರು ಹೋರಾಟ ಮಾಡುತ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ದೇಶದ್ಯಾಂತ ರಾಮಮಂದಿರ ಉದ್ಘಾಟನೆಯ ಉತ್ಸಾಹ ಇದೆ. ಜನ ಭಕ್ತಿ ಭಾವದಿಂದ ತಮ್ಮನ್ನು ತಾವು ತೊಡಗಿಸಿಕೊಳ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ರಾಮನ ದ್ವಜ ತಗೆದುಕೊಂಡಿದ್ದಾರೆ. ಇದೊಂದು ಐತಿಹಾಸಿಕ ಕ್ಷಣ,ಸುಖದ ಅನಭೂತಿ. ಪ್ರಧಾನಿಗಳು ಎಲ್ಲರೂ ರಾಮನ ಧ್ವಜ ಹಾಕಲು ಕರೆ ಕೊಟ್ಟಿದ್ದಾರೆ. 500 ವರ್ಷಗಳ ಕಳಂಕ ತೊಳೆದು ಹಾಕೋ ಸಂದರ್ಭ. ರಾಮರಾಜ್ಯದ ಕನಸಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಲು ಗಂಭೀರ ಹೆಜ್ಜೆ ಎಂದು ಜೋಶಿ ಹೇಳಿದ್ದಾರೆ.
‘ಇದು ಮುಂದುವರಿದರೆ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಈ ನಾಡಿನ ಪ್ರಭುಗಳಿಗೆ ಮೋಸ ಮಾಡಿದಂತಾಗುತ್ತದೆ’
ವೇದಿಕೆಯಲ್ಲೇ ಮಗನಿಗೆ ಗದರಿದ ರೇವಣ್ಣ: ತಂದೆಯ ಆವಾಜ್‌ಗೆ ಪ್ರಜ್ವಲ್ ಸೈಲೆಂಟ್