Tuesday, June 3, 2025

Latest Posts

ಮನುಷ್ಯ ಯಶಸ್ವಿಯಾಗದಿರಲು ಈ 10 ವಿಷಯಗಳೇ ಕಾರಣ.. ಭಾಗ 1

- Advertisement -

Business Tips: ಹುಟ್ಟಿದ ಪ್ರತೀ ಮನುಷ್ಯನಿಗೂ ಒಂದಲ್ಲ ಒಂದು ಗುರಿ ಇರುತ್ತದೆ. ಆ ಗುರಿಯನ್ನು ನಾನು ತಲುಪಲೇಬೇಕು. ಯಶಸ್ಸು ಸಾಧಿಸಲೇಬೇಕು ಎಂಬ ಛಲವಿರುತ್ತದೆ. ಕೆಲವರು ಯಶಸ್ವಿಯಾಗುತ್ತಾರೆ. ಮತ್ತೆ ಕೆಲವರು ಆಗುವುದಿಲ್ಲ. ಹಾಗಾದ್ರೆ ಮನುಷ್ಯ ಯಶಸ್ವಿಯಾಗದಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಕಾರಣ, ನೀವು ತುಂಬಾ ಸ್ಲೋವಾಗಿದ್ದೀರಿ. ಇಂದಿನ ಕಾಲದಲ್ಲಿ ಪ್ರಪಂಚ ಭಾರೀ ಸ್ಪೀಡಾಗಿದೆ. ಅದಕ್ಕೆ ತಕ್ಕ ಹಾಗೆ ನಾವು ಕೂಡ ಸ್ಪೀಡಾಗಿದ್ದರೆ, ಅಪ್ಡೇಟೆಡ್ ಆಗಿದ್ದರೆ ಒಳ್ಳೆಯದು. ಇದರಿಂದ ನಮಗೆ ಯಶಸ್ಸಿನ ಜೊತೆಗೆ, ಕೆಲವೊಂದು ತಿಳುವಳಿಕೆಗಳು ಕೂಡ ಸಿಗುತ್ತದೆ.

ಎರಡನೇಯ ಕಾರಣ, ಕೆಲಸಕ್ಕಿಳಿಯಲು ನೀವು ಹಿಂಜರಿಯುತ್ತಿರಬಹುದು. ನಿಮಗೆ ಹಲವು ವಿಷಯಗಳ ಬಗ್ಗೆ ತಿಳುವಳಿಕೆ ಇರಬಹುದು. ಹಲವು ಕೆಲಸಗಳನ್ನು ಮಾಡಬೇಕು ಎನ್ನುವ ಹಂಬಲ ಇರಬಹುದು. ಆದರೆ ಆ ಕೆಲಸವನ್ನು ಮಾಡಲು ನೀವು ಹಿಂಜರಿಯುತ್ತಿರಬಹುದು.

ಮೂರನೇಯ ಕಾರಣ, ನೀವಷ್ಟೇ ಯಶಸ್ವಿಯಾಗಲು ಬಯಸುತ್ತಿದ್ದೀರಿ. ಆದರೆ ನೀವೊಂದು ಟೀಂ ಕಟ್ಟಿ, ಅವರೊಂದಿಗೆ ನೀವಂದುಕೊಂಡ ಕೆಲಸ ಆರಂಭಿಸಿದರೆ, ನೀವು ಅದಷ್ಟು ಬೇಗ ಯಶಸ್ಸು ಕಾಣುತ್ತೀರಿ. ಆದರೆ ನಾನೊಬ್ಬನೇ ಗೆಲ್ಲುತ್ತೇನೆ. ನಾನೊಬ್ಬನೇ ಹಣ ಮಾಡುತ್ತೇನೆ ಎಂದು ಹೊರಟರೆ, ನೀವು ಯಶಸ್ವಿಯಾಗಲು ಸಾಧ್ಯವಿಲ್ಲ.

ನಾಲ್ಕನೇಯ ಕಾರಣ, ನಿಮಗೆ ಸಹಾಯ ಕೇಳಲು ಹೆದರಿಕೆ ಇರಬಹುದು. ಕೆಲವರು ಉದ್ಯಮಕ್ಕಾಗಿ ಬಂಡವಾಳ ಕೇಳಲು, ಅಥವಾ ಇನ್ನಿತರೇ ಸಹಾಯ ಕೇಳಲು ಹೆದರುತ್ತಾರೆ. ಇದು ಕೂಡ ನೀವು ಯಶಸ್ವಿಯಾಗದಿರಲು ಕಾರಣವಾಗಬಹುದು. ಹಾಗಾಗಿ ನಿಮಗೆ ಬೇಕಾದ ಸಹಾಯವನ್ನು ನೀವು ಕೇಳಿ, ನಿಮ್ಮ ಕೆಲಸವಾದ ಬಳಿಕ, ಆ ಸಹಾಯವನ್ನು ಹಿಂದಿರುಗಿಸುವುದನ್ನು ಮರೆಯಬೇಡಿ.

ಐದನೇಯ ಕಾರಣ, ನೀವು ಯಶಸ್ವಿಯಾಗಲು ಹೆದರುತ್ತಿರಬಹುದು. ಕೆಲವರು ಸಫಲತೆಗೆ ಹೆದರುತ್ತಾರೆ. ಏಕೆಂದರೆ, ಸಫಲರಾದರೆ, ಜವಾಬ್ದಾರಿ ಹೆಚ್ಚಾಗುತ್ತದೆ. ಅಲ್ಲದೇ, ಸಫಲನಾಗಿ ಹೆಚ್ಚು ಹಣ ಬಂದರೆ, ಅದನ್ನು ನಾನೇನು ಮಾಡಲಿ ಎಂಬ ವಿಚಿತ್ರ ಯೋಚನೆಯೂ ಹಲವರಿಗೆ ಬರುತ್ತದೆ. ಹಾಗಾಗಿಯೂ ಕೆಲವರು ಯಶಸ್ಸಿಗಾಗಿ ಹೆದರುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

ಶ್ರೀಮಂತಿಕೆಗಾಗಿ ಚಾಣಕ್ಯನ 3 ರೂಲ್ಸ್ ತಿಳಿದುಕೊಳ್ಳಿ..

ತನ್ನ 29ನೇ ವಯಸ್ಸಿನಲ್ಲೇ ಕೋಟಿ ಕೋಟಿ ರೂಪಾಯಿ ಗಳಿಸಿದ ಹುಡುಗಿ.. ಹೇಗೆ..?

ಆಫರ್, ಡಿಸ್ಕೌಂಟ್ ಇಲ್ಲದೇ ಗ್ರಾಹಕರು ನಿಮ್ಮ ಬಳಿ ಬರಬೇಕೇ..? ಹೀಗೆ ಮಾಡಿ..

- Advertisement -

Latest Posts

Don't Miss