Sunday, October 27, 2024

Latest Posts

ಮನುಷ್ಯ ಯಶಸ್ವಿಯಾಗದಿರಲು ಈ 10 ವಿಷಯಗಳೇ ಕಾರಣ.. ಭಾಗ 2

- Advertisement -

Business Tips: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಕಳೆದ ಭಾಗದಲ್ಲ 5 ವಿಷಯಗಳ ಬಗ್ಗೆ ತಿಳುವಳಿಕೆ ನೀಡಿದ್ದೆವು. ಇದೀಗ ಮುಂದುವರಿದ ಭಾಗದಲ್ಲಿ, ಇನ್ನುಳಿದ 6 ವಿಷಯಗಳ ಬಗ್ಗೆ ತಿಳಿಯೋಣ..

ಅಸಫಲತೆಗೆ 6ನೇ ಕಾರಣವೆಂದರೆ, ನೀವು ಉತ್ತಮ ಪುಸ್ತಕಗಳನ್ನು ಓದುವುದಿಲ್ಲ ಅಥವಾ ಯಾರದ್ದಾದರೂ ಬಯೋಗ್ರಫಿ ಬಗ್ಗೆ ಕೇಳಿರುವುದಿಲ್ಲ. ಇವನ್ನೆಲ್ಲ ಯಾಕೆ ಕೇಳಬೇಕು ಎಂದರೆ, ಇದು ನೀವು ಯಶಸ್ಸು ಸಾಧಿಸಲು ಅನುಕೂಲ ಮಾಡಿಕೊಡುತ್ತದೆ. ಇದರಲ್ಲಿ ಸಫಲರಾದವರು, ತಮ್ಮ ಜೀವನ ಗಾಥೆಯನ್ನು ಬರೆದಿರುತ್ತಾರೆ. ತಮಗೆ ಬಂದ ಅಡೆತಡೆಗಳನ್ನು ತಾವು ಹೇಗೆ ದಾಟಿ ಬಂದೆವು ಎಂದು ಹೇಳುತ್ತಾರೆ. ಹಾಗಾಗಿ ಉತ್ತಮ ಪುಸ್ತಕ, ಬಯೋಗ್ರಫಿಗಳನ್ನು ಓದಬೇಕು, ಕೇಳಬೇಕು. ಇದರಿಂದ ನೀವು ಪ್ರೇರೆಪಿತರಾಗುತ್ತೀರಿ.

ಏಳನೇಯ ಕಾರಣ, ನೀವು ನಿಮ್ಮನ್ನು ಮೂಲೆಗುಂಪಾಗಿಸುತ್ತೀರಿ. ಕೆಲವರಲ್ಲಿ ಎಂಥೆಂಥ ಟೈಲೆಂಟ್ ಇರುತ್ತದೆ, ಅಂದರೆ, ಆ ಟ್ಯಾಲೆಂಟ್ ಅವರ ಜೀವನವನ್ನ ಎತ್ತರಕ್ಕೆ ಕೊಂಡೊಯ್ಯಬಹುದು. ಆ ಕಲೆಯಿಂದಲೇ, ಅವರ ಜೀವನ ನಡೆಯಬಹುದು. ಆದರೆ ಕೆಲವರು ತಮ್ಮ ಕಲೆಯನ್ನು ಕಡೆಗಣಿಸಿ, ತಮ್ಮನ್ನು ತಾವೇ ಮೂಲೆಗೆ ಸೇರಿಸಿಕೊಳ್ಳುತ್ತಾರೆ. ಈಗಲೂ ಹಲವು ಹೆಣ್ಣು ಮಕ್ಕಳು ತಮ್ಮ ಕಲೆಯನ್ನು ಬದಿಗಿರಿಸಿ, ಗಂಡ, ಮಕ್ಕಳು, ಮನೆ ಎಂದು ಮನೆಯಲ್ಲೇ ಉಳಿದಿದ್ದಾರೆ.

ಎಂಟನೇಯ ಕಾರಣ, ಕಷ್ಟ ತೆಗೆದುಕೊಳ್ಳಲು ನೀವು ಮುಂದೆ ಬರುತ್ತಿಲ್ಲ. ಹಲವರಿಗೆ ಯಶಸ್ಸು ಸಾಧಿಸಬೇಕು ಎನ್ನುವ ಗುರಿಯಿರುತ್ತದೆ. ಅವರಿಗೆ ಎಲ್ಲ ರೀತಿಯ ಸೌಲಭ್ಯವಿರುತ್ತದೆ. ಆದರೆ ಅವರು ಕಷ್ಟಪಡಲು, ಜವಾಬ್ದಾರಿ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಮತ್ತು ಯಾರು ಜವಾಬ್ದಾರಿ ತೆಗೆದುಕೊಳ್ಳಲು, ಕಷ್ಟಪಡಲು, ಅಪಾಯ ಎದುರಿಸಲು ಹಿಂಜರಿಯುತ್ತಾರೋ, ಅಂಥವರು ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ.

ಒಂಭತ್ತನೇಯ ಕಾರಣ, ನಿಮ್ಮ ಯಶಸ್ಸಿಗೆ ಬೇಕಾದ ಲೆಕ್ಕಾಚಾರಗಳನ್ನೆಲ್ಲ ನೀವು ಮಾಡಿಕೊಳ್ಳಬೇಕು. ಉದಾಹರಣೆಗೆ ನೀವೊಂದು ಉದ್ಯಮ ಮಾಡುತ್ತಿದ್ದೀರಿ. ಅದರಲ್ಲಿ ನಿಮಗೆ ಪ್ರತೀ ತಿಂಗಳು 2 ಲಕ್ಷ ರೂಪಾಯಿ ಲಾಭ ಮಾಡಬೇಕು ಎನ್ನುವ ಆಸೆ ಇದ್ದರೆ, ನೀವು ಪ್ರತೀ ತಿಂಗಳ ಲಾಭವನ್ನು ಲೆಕ್ಕಾಚಾರ ಹಾಕಬೇಕು. ಎಲ್ಲಿಯತನಕ ನಿಮ್ಮ ತಿಂಗಳ ಲಾಭ 2 ಲಕ್ಷವಾಗುವುದಿಲ್ಲವೋ, ಅಲ್ಲಿಯವರೆಗೆ ನೀವು ಪ್ರತೀ ತಿಂಗಳು ಕಷ್ಟ ಪಟ್ಟು, ಲೆಕ್ಕ ಹಾಕಿ, ಲಾಭ ಪಡೆಯಲು ಕಷ್ಟ ಪಡಬೇಕು.

ಹತ್ತನೇಯ ಕಾರಣ, ನಿರ್ಲಕ್ಷ್ಯ ಮಾಡುವುದು. ನೀವು ಉದ್ಯಮ ಮಾಡುತ್ತಿದ್ದೀರಿ. ಉತ್ತಮ ಲಾಭ ಗಳಿಸುತ್ತಿದ್ದೀರಿ. ಆದರೆ ಹೇಗೂ ಲಾಭ ಬರುತ್ತಿದೆ ಅಂತಾ ಉದ್ಯಮದ ಕಡೆ ಗಮನ ಕೊಡದೇ, ನಿರ್ಲಕ್ಷ್ಯದಿಂದಿರುವುದು ತಪ್ಪು. ಹೀಗೆ ಮಾಡುವುದೇ ಉದ್ಯಮಿಯ ಅವನತಿಗೆ ಕಾರಣವಾಗುತ್ತದೆ.

ಶ್ರೀಮಂತಿಕೆಗಾಗಿ ಚಾಣಕ್ಯನ 3 ರೂಲ್ಸ್ ತಿಳಿದುಕೊಳ್ಳಿ..

ತನ್ನ 29ನೇ ವಯಸ್ಸಿನಲ್ಲೇ ಕೋಟಿ ಕೋಟಿ ರೂಪಾಯಿ ಗಳಿಸಿದ ಹುಡುಗಿ.. ಹೇಗೆ..?

ಆಫರ್, ಡಿಸ್ಕೌಂಟ್ ಇಲ್ಲದೇ ಗ್ರಾಹಕರು ನಿಮ್ಮ ಬಳಿ ಬರಬೇಕೇ..? ಹೀಗೆ ಮಾಡಿ..

- Advertisement -

Latest Posts

Don't Miss