Business Tips: ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕು. ಉತ್ತಮ ಲಾಭ ಗಳಿಸಬೇಕು ಅಂದ್ರೆ ಬರೀ ಬಂಡವಾಳ ಹಾಕಿದರಷ್ಟೇ ಸಾಲದು. ಬದಲಾಗಿ ಬುದ್ಧಿವಂತಿಕೆಯಿಂದ ವ್ಯಾಪಾರ ನಡೆಸುವುದನ್ನು ಕಲಿಯಬೇಕು. ಯಾರು ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ, ಬ್ಯುಸಿನೆಸ್ ಮಾಡುತ್ತಾರೋ, ಅಂಥವರು ಲಾಭ ಗಳಿಸುತ್ತಾರೆ. ಅದರಲ್ಲೂ ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದ 4 ರೂಲ್ಸ್ ಯಾರು ಫಾಲೋ ಮಾಡ್ತಾರೋ, ಅಂಥವರು ಬೇಗ ಯಶಸ್ಸು ಕಾಣ್ತಾರೆ. ಹಾಗಾದ್ರೆ ಆ 4 ರೂಲ್ಸ್ ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ರೂಲ್ಸ್. ಬಂಡವಾಳ ಹಾಕಿ ವ್ಯಾಪಾರ ಆರಂಭಿಸಿರುತ್ತೀರಿ. ಮುಂದೆ ಕಷ್ಟ ಬಂದರೆ ಎಂದು ಒಂದಿಷ್ಟು ದುಡ್ಡನ್ನೂ ಇಟ್ಟುಕೊಂಡಿರುತ್ತೀರಿ. ಅಂಥ ದುಡ್ಡನ್ನು ಅನಗತ್ಯವಾಗಿ ಬಳಸಬೇಡಿ. ಕೆಲವರು ಹೇಗೂ ದುಡ್ಡಿದೆಲ್ಲ ಅಂತಾ ಎಲ್ಲ ದುಡ್ಡನ್ನೂ ಹಾಕಿ, ವ್ಯಾಪಾರ ಶುರು ಮಾಡುತ್ತಾರೆ. ಕೊನೆಗೆ ಲಾಸ್ ಆಗಿ, ವ್ಯಾಪಾರ ಮುಚ್ಚುತ್ತಾರೆ. ಆದರೆ ಹಾಗೆ ಆಗಬಾರದು ಅಂದರೆ, ಮುಂದೆ ಕಷ್ಟ ಬಂದಾಗ, ನಷ್ಟವಾದಾಗ ಅದನ್ನು ಸರಿಪಡಿಸಲು ನಿಮ್ಮ ಬಳಿ ಕೊಂಚ ಹಣ ಬೇಕೆ ಬೇಕಾಗುತ್ತದೆ.
ಎರಡನೇಯ ರೂಲ್ಸ್, ಎಲ್ಲಿ, ಯಾವಾಗ, ಹೇಗೆ ಮಾತನಾಡಬೇಕು. ಮತ್ತು ಎಲ್ಲಿ ಮಾತನಾಡಬೇಕು, ಎಲ್ಲಿ ಮಾತನಾಡಬಾರದು ಅನ್ನೋ ಬಗ್ಗೆಯೂ ತಿಳಿದಿರಬೇಕು. ವ್ಯಾಪಾರ ಅಂದರೆ, ಮಾತೇ ಬಂಡವಾಳ. ಮಾತು ಉತ್ತಮವಾಗಿ, ಗ್ರಾಹಕರನ್ನು ಸೆಳೆಯುವ ರೀತಿ ಇದ್ದಲ್ಲಿ, ಜನ ನಿಮ್ಮ ಅಂಗಡಿಗೆ ಹುಡುಕಿಕೊಂಡು ಬರುತ್ತಾರೆ. ಇನ್ನು ನಿಮ್ಮ ಅಂಗಡಿಗೆ ಬಂದ ಗ್ರಾಹಕರು ಹೇಳೋದನ್ನ ನೀವು ಕೇಳಬೇಕು. ನಿಮ್ಮ ಸಮಯ ಬಂದಾಗಷ್ಟೇ ನೀವು ನಿಮ್ಮ ಸಾಮಗ್ರಿಯ ಕ್ವಾಲಿಟಿಯನ್ನು ವಿವರಿಸಬೇಕು. ಅದನ್ನು ಬಿಟ್ಟು ಬರೀ ನಿಮ್ಮದೇ ಹೇಳಿಕೊಂಡಿದ್ದರೆ, ಗ್ರಾಹಕರಿಗೆ ಅದು ಕಿರಿಕಿರಿ ಎನ್ನಿಸಿ, ಅವರು ಇನ್ನೆಂದೂ ನಿಮ್ಮ ಅಂಗಡಿಗೆ ಬರುವುದಿಲ್ಲ.
ಮೂರನೇಯ ರೂಲ್ಸ್. ನೀವು ಮಾರುವ ಸಾಮಗ್ರಿ ಉತ್ತಮ ಕ್ವಾಲಿಟಿಯದ್ದಾಗಿರಲಿ. ಬಟ್ಟೆ ಅಂಗಡಿ, ಪಾತ್ರೆ ಅಂಗಡಿ, ಕಾಸ್ಮೆಟಿಕ್ ಅಂಗಡಿ ಎಲ್ಲ ಕಡೆಯೂ ಕ್ವಾಲಿಟಿ ಉತ್ತಮವಾಗಿದ್ದರೆ, ಜನ ಹುಡುಕಿಕೊಂಡು ಬರುತ್ತಾರೆ. ಜನಜಂಗುಳಿ ಇರುವ ಪ್ರದೇಶದಲ್ಲಿ ನಿಮ್ಮ ಅಂಗಡಿ ಇರಲಿ. ನಿಮ್ಮ ಬಳಿ ಕೆಲಸ ಮಾಡುವವರಿಗೆ ಗ್ರಾಹಕರೊಂದಿಗೆ ಉತ್ತಮವಾಗಿ ವರ್ತಿಸಲು ಹೇಳಿ. ಬೇಗ ಸೆಲೆಕ್ಟ್ ಮಾಡಿ ಖರೀದಿ ಮಾಡದೇ, ಆ ಬಟ್ಟೆ ತೋರಿಸಿ, ಈ ಬಟ್ಟೆ ತೋರಿಸಿ ಎಂದು ಗ್ರಾಹಕರು ಹೇಳಿದಾಗ, ಅದನ್ನು ತಾಳ್ಮೆಯಿಂದ ತೋರಿಸುವ ಗುಣ ನಿಮ್ಮಲ್ಲಿ ಕೆಲಸ ಮಾಡುವವರಿಗಿರಬೇಕು.
ನಾಲ್ಕನೇಯ ರೂಲ್ಸ್. ಕೊನೆಯ ರೂಲ್ಸ್ ಅಂದ್ರೆ, ಲಾಭಕ್ಕಾಗಿ ವ್ಯಾಪಾರ ಮಾಡುವಾಗ, ಆದ ನಷ್ಟವನ್ನು ಹೇಗೆ ಭರಿಸಬೇಕು. ನಷ್ಟವಾದಾಗ ಏನು ಮಾಡಬೇಕು. ವ್ಯಾಪಾರ ನಿಲ್ಲದಿರಲು ಯಾವ ಕೆಲಸ ಮಾಡಬೇಕು ಅನ್ನೋದು ನಿಮಗೆ ಗೊತ್ತಿರಬೇಕು. ನಿಮ್ಮ ಅಂಗಡಿಯಲ್ಲಿ ಹೆಚ್ಚು ಡಿಮ್ಯಾಂಡ್ ಇಲ್ಲದ ವಸ್ತು ಹಾಳಾಗುತ್ತಿರಬಹುದು. ಅದನ್ನು ಯಾವ ರೀತಿ ಬಳಸಬೇಕು. ಅದನ್ನು ಹೇಗೆ ಮಾರಬೇಕು ಅನ್ನೋ ಬಗ್ಗೆ ನಿಮಗೆ ಗೊತ್ತಿರಬೇಕು.
ಡಾರ್ಕ್ ಚಾಕೋಲೇಟ್ ಸೇವನೆ ಎಷ್ಟು ಮಾಡಬೇಕು..? ಇದರಿಂದಾಗುವ ಆರೋಗ್ಯ ಲಾಭವೇನು..?