Special Stories: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು, ಯಾವಾಗ ಓರ್ವ ಹೆಣ್ಣು ಧೈರ್ಯವಾಗಿ, ಒಬ್ಬಂಟಿಯಾಗಿ ಮಧ್ಯರಾತ್ರಿ ನಡೆಯುವಳೋ, ಅಂದು ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತೆ ಅಂತಾ ಹೇಳಿದ್ದರು. ಆದರೆ ಈವರೆಗೆ ನಮಗೆ ಸ್ವಾತಂತ್ರ ಸಿಗಲೇ ಇಲ್ಲ. ಮುಂದೆ ಸಿಗುವ ಭರವಸೆಯೂ ಉಳಿದಿಲ್ಲ. ಏಕೆಂದರೆ, ಹೆಣ್ಣು ಒಬ್ಬಂಟಿಯಾಗಿರದೇ, ಅಣ್ಣ- ಅಪ್ಪ- ಪತಿಯೊಂದಿಗೆ ಇದ್ದರೂ ಕೂಡ ಆಕೆಯನ್ನು ಬಿಡದ ಕಾಮುಕರು, ಆಕೆ ಮಾನ ಹರಣ ಮಾಡುತ್ತಾರೆ.
ಆದರೆ ಪ್ರಪಂಚದ 10 ದೇಶಗಳಲ್ಲಿ ಸ್ತ್ರೀಯರು ಯಾವುದೇ ಭಯವಿಲ್ಲದೇ, ತಮಗೆ ಬೇಕಾದ ರೀತಿ ಉಡುಗೆ ತೊಟ್ಟು, ಯಾವ ಹೊತ್ತಿನಲ್ಲಾದರೂ ಹೊರಗೆ ತಿರುಗಾಡಬಹುದು. ಅಷ್ಟು ಸೇಫ್ ಆ ದೇಶಗಳು. ಅಲ್ಲದೇ, ಅಲ್ಲ ದರೋಡೆ, ಕಳ್ಳತನವಾಗುವುದಿಲ್ಲ. ಯಾವುದೇ ವ್ಯಕ್ತಿ ತನ್ನ ಪತ್ನಿ, ಪ್ರಿಯತಮೆಯನ್ನು ಕತ್ತರಿಸಿ, ಫ್ರಿಜ್‌ನಲ್ಲಿ ಇರಿಸಿುವ ಧೈರ್ಯ ಮಾಡುವುದಿಲ್ಲ. ಯಾವುದೇ ಹೆಂಗಸು, ಪತಿಯನ್ನು ತುಂಡರಿಸಿ, ಡ್ರಮ್‌ನಲ್ಲಿ ತುಂಬಿಸುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಏಕೆಂದರೆ, ಅಲ್ಲಿನ ಶಿಕ್ಷೆಗಳೇ ಅಷ್ಟು ಘೋರವಾಗಿದೆ. ಹಾಗಾಗಿ ಅದು ಪ್ರಪಂಚದ ದೇಶಗಳಲ್ಲಿ ಸೇಫೆಸ್ಟ್ ಕಂಟ್ರಿ ಎನ್ನಿಸಿಕೊಂಡಿದೆ. ಹಾಗಾದ್ರೆ ಯಾವುದು ಆ ದೇಶಗಳು..? ಅದರ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
10 ನೇ ಸ್ಥಾನದಲ್ಲಿ ಜಪಾನ್, 9ನೇ ಸ್ಥಾನದಲ್ಲಿ ಸಿಂಗಾಪೂರ, 8ನೇ ಸ್ಥಾನದಲ್ಲಿ ಅರ್ಮೇನಿಯಾ ದೇಶವಿದೆ, 7ನೇ ಸ್ಥಾನದಲ್ಲಿ ಹಾಂಕ್‌ಕಾಂಗ್, 6ನೇ ಸ್ಥಾನದಲ್ಲಿ ಐಲ್ ಆಫ್ ಮೆನ್, ಓಮನ್ ದೇಶ 5ನೇ ಸ್ಥಾನದಲ್ಲಿದೆ, 4ನೇ ಸ್ಥಾನದಲ್ಲಿ ತೈವಾನ್, 3ನೇ ಸ್ಥಾನದಲ್ಲಿ ಕತಾರ್, 2ನೇ ಸ್ಥಾನದಲ್ಲಿ ದುಬೈ ಸಮೇತವಾಗಿ ಸೆವೆನ್ ಎಮಿರೇಟ್ಸ್ ಅಂದ್ರೆ ಯುಎಇ, ಮೊಟ್ಟ ಮೊದಲ ಸ್ಥಾನದಲ್ಲಿ ಎಂಡೋರಾ.
ಇವಿಷ್ಟು ದೇಶ ಸೇಫೆಸ್ಟ್ ದೇಶ ಎನ್ನಿಸಿಕೊಂಡಿದೆ. ಇನ್ನು ಇದಕ್ಕೆ ಕಾರಣವೇನು ಅಂದ್ರೆ, ಅಲ್ಲಿನ ನಿಯಮಗಳೇ ಹಾಗಿದೆ. ನಮ್ಮ ದೇಶದಲ್ಲಿ ಅತ್ಯಾಚಾರಿಯನ್ನು ಕೆಲ ವರ್ಷಗಳ ಕಾಲ ಜೈಲಿನಲ್ಲಿರಿಸಿ, ಪುಕ್ಕಟೆಯಾಗಿ ಊಟ ಕೊಟ್ಟು, ಮುಂದೊಂದು ದಿನ ಆತ ಯಾರದ್ದೋ ಇನ್‌ಫ್ಲುಯೆನ್ಸ್‌ನಿಂದ ಹೊರಬಂದರೂ ಬಂದ. ಅಥವಾ ಅವನನ್ನು ಗಲ್ಲಿಗೇರಿಸಲಾಗುತ್ತದೆ.
ಆದರೆ ಈ ದೇಶಗಳಲ್ಲಿ ಹಾಗಲ್ಲ, ಅತ್ಯಾಚಾರಿ, ಕೊಲೆಗಡುಕ, ದರೋಡೆಕೋರ ಯಾರೇ ಇರಲಿ, ಆತ ಉದ್ಯಮಿಯ ಮಗನೇ ಆಗಿರಲಿ, ರಾಜಕೀಯದವರ ಕಡೆಯವನೇ ಆಗಿರಲಿ, ಯಾರಾದರೂ ಸರಿ ಆತನಿಗೆ ಅತ್ಯಂತ ಕಠಿಣ ಶಿಕ್ಷೆ ಕೊಡಲಾಗುತ್ತದೆ. ಒಬ್ಬರಿಗೆ ಕೊಟ್ಟ ಶಿಕ್ಷೆ ನೋಡಿ, ಇನ್ನೊಬ್ಬರು ಮುಂದೆಂದೂ ಆ ರೀತಿಯ ಕೆಲಸ ಮಾಡುವ ಮನಸ್ಸು ಮಾಡಬಾರದು. ಹಾಗೆ ಶಿಕ್ಷಿಸಲಾಗುತ್ತದೆ.
ಇನ್ನು ವಿಚಿತ್ರ ಮತ್ತು ಆಶ್ಚರ್ಯ ಎನ್ನಿಸುವ ವಿಷಯ ಅಂದ್ರೆ, ಭಾರತ 66ನೇ ಸೆಫೆಸ್ಟ್ ಕಂಟ್ರಿ ಅಂತೆ. ಅದಕ್ಕೂ ಮುನ್ನ ಅಂದ್ರೆ 65ನೇ ಸ್ಥಾನದಲ್ಲಿ ಪಾಕಿಸ್ತಾನವಿದೆ. ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡಿರುವ ಅಮೆರಿಕದ ಸ್ಥಾನ ಕೇಳಿದ್ರೆ, ನಿಮಗೆ ಶಾಕ್ ಆಗಬಹುದು. ಏಕೆಂದರೆ, ದೇಶದ ಸೆಫೆಸ್ಟ್ ಕಂಟ್ರಿಗಳಲ್ಲಿ ಅಮೆರಿಕ 89ನೇ ಸ್ಥಾನದಲ್ಲಿದೆ. ಇದರ ಅರ್ಥ ವಿಶ್ವದ ದೊಡ್ಡಣನ ಊರಿನಲ್ಲಿ ಹೆಣ್ಣು ಮಕ್ಕಳು ಸೇಫಾಗಿಲ್ಲ ಎಂದರ್ಥ. ಒಟ್ಟಾರೆಯಾಾಗಿ ವಿಶ್ವದ ಟಾಪ್ ಟೆನ್ ಸೆಫೆಸ್ಟ್ ದೇಶಗಳಲ್ಲಿ ಆದಷ್ಟು ಬೇಗ ಭಾರತವೂ ಸೇರಲಿ ಎಂಬುದೇ ನಮ್ಮ ಆಶಯ.