Friday, November 22, 2024

Latest Posts

ಮಾತಿನಲ್ಲೇ ಇನ್ನೊಬ್ಬರನ್ನು ನೋಯಿಸುವ ರಾಶಿಯವರು ಇವರು

- Advertisement -

Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಸದಾ ಹಸನ್ಮುಖಿಯಾಗಿದ್ದರೆ, ಕೆಲವರು ಸದಾ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಮಾತಿನ ಮಲ್ಲರಾಗಿದ್ದರೆ, ಮತ್ತೆ ಕೆಲವರು ಮೌನಿಯಾಗಿರುತ್ತಾರೆ. ಅದೇ ರೀತಿ ಕೆಲವು ರಾಶಿಯವರು ಮಾತಿನಲ್ಲೇ ಇನ್ನೊಬ್ಬರನ್ನು ನೋಯಿಸುತ್ತಾರೆ. ಹಾಗಾದ್ರೆ ಅಷ್ಟು ಕಟುವಾಗಿ ಮಾತನಾಡುವ ರಾಶಿಯವರು ಯಾರು ಅಂತಾ ತಿಳಿಯೋಣ ಬನ್ನಿ..

ಮಿಥುನ ರಾಶಿ: ಮಿಥುನ ರಾಶಿಯವರು ತಮಾಷೆಯ ಸ್‌ವಭಾವದವರು ಆದ್ದರಿಂದ, ಇವರ ತಮಾಷೆ ಮಾಡುವ ಗುಣದಿಂದಲೇ ಇವರು ಇನ್ನೊಬ್ಬರ ಮನಸ್ಸು ನೋಯಿಸಬಹುದು. ಕೆಲವೊಮ್ಮೆ ಕೆಲವರ ತ್ವಚೆ, ಕೂದಲು, ಬಣ್ಣ ಹೀಗೆ ವೈಯಕ್ತಿಕ ವಿಚಾರದ ಮೇಲೆ ತಮಾಷೆ ಮಾಡಿ, ಎದುರಿನವರ ಬೇಸರಕ್ಕೆ ಕಾರಣವಾಗುತ್ತಾರೆ.

ತುಲಾ ರಾಶಿ: ತುಲಾ ರಾಶಿಯವರು ತಮಾಷೆ ಮಾಡಿ ಮಾತನಾಡುವ ಸ್ವಭಾವದವರು. ಆದರೆ, ಇವರ ತಮಾಷೆಯನ್ನು ಕೆಲವರು ಸಿರಿಯಸ್ ಆಗಿ ತೆಗೆದುಕೊಳ್ಳಬಹುದು. ಹಾಗಾಗಿ ತಮಾಷೆ ಮಾಡುವಾಗ, ಈ ರಾಶಿಯವರು ಎಡವಟ್ಟು ಮಾಡುತ್ತಾರೆ. ಇನ್ನು ತುಲಾ ರಾಶಿಯವರು ಸಿರಿಯಸ್ ಆಗಿ ರಿಯಾಕ್ಟ್ ಮಾಡಿದ್ರೆ, ಆಪ್ತರೂ ಕೂಡ ದೂರವಾಗಬೇಕು ಅಷ್ಟು ಕಠೋರವಾಗಿರುತ್ತದೆ ಅವರ ಮಾತು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ನೇರವಾಗಿ ಮಾತನಾಡುತ್ತಾರೆ. ಇವರ ಮಾತು ಕಠಿಣವಾಗಿರುತ್ತದೆ. ಇವರು ಕಾಳಜಿಯಿಂದ ವರ್ತಿಸುವವರಾಗಿರುವ ಕಾರಣಕ್ಕೆ, ಇವರ ಮುಖಕ್ಕೆ ಹೊಡೆದ ಹಾಗೆ ಹೇಳುವ ಸ್ವಭಾವದಿಂದ ಎದುರಿನವರಿಗೆ ಬೇಸರವಾಗುತ್ತದೆ. ಎಷ್ಟೋ ಬಾರಿ, ಇವರ ಮಾತಿನಿಂದಲೇ, ಇವರ ಒಳ್ಳೆಯತನ ಅಡಗಿ ಹೋಗುತ್ತದೆ.

ತಲೆ ಮೇಲೆ ತಲೆ ಬಿದ್ದರೂ ಸದಾ ಕೂಲ್ ಆಗಿ ಇರುವ ರಾಶಿಯವರಿವರು

ಹಣ ಖರ್ಚು ಮಾಡಲು ಹಿಂದೇಟು ಹಾಕುವ (ಕಂಜೂಸು) ರಾಶಿಗಳಿವು

ಈ ಸಂದರ್ಭದಲ್ಲಿ ಪತಿಯಾದವನು ಸದಾ ಪತ್ನಿಯ ಕಾಳಜಿ ಮಾಡಬೇಕು ಅಂತಾರೆ ಚಾಣಕ್ಯರು

- Advertisement -

Latest Posts

Don't Miss