Dharwad News: ಧಾರವಾಡ: ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಪಕ್ಷದ ಸಿಎಂ ಸೇರಿ ಹಲವರು ನಮ್ಮ ಪಕ್ಷದ ಬಗ್ಗೆ ಸಾಕಷ್ಟು ಮಾತಾಡಿದ್ದಾರೆ. ರಾಜ್ಯದಲ್ಲಿ ಅಧಿಕಾರಿದಲದಲಿ ಅವರೇ ಇದಾರೆ. ಅವರ ಬಡಿಡಾಟದಿಂದ ರಾಜ್ಯದ ಆಡಳಿತದ ಮೇಲೆ ಪರಿಣಾಮ ಬಿರುತ್ತಿದೆ. ಇದು ಅವರ ಮನೆ ಕೆಲಸ ಅಲ್ಲಾ, ಅವರು ತಮ್ಮ ಪಕ್ಷದ ಬಗ್ಗೆ ಏಕೆ ಮಾತಾಡ್ತಾರೆ. ನೀವು ಮಾತಾಡಿದ್ದಕ್ಕೆ ನಾವು ಕೂಡಾ ನಿಮ್ಮ ಪಕ್ಷದ ಬಗ್ಗೆ ಮಾತಾಡಿದ್ದು. ಸಚಿವ ಸಂತೋಷ ಲಾಡ್ ಅವರು ಸ್ವಾಮೀತ್ವದ ಬಗ್ಗೆ ಮಾತಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಚಿಲ್ಲರೆ ರಾಜಕಾರಣ ಮಾಡುತ್ತಿದೆ, ಸ್ವಾಮೀತ್ವ ಭಾರತ ಸರ್ಕಾರದ ಯೋಜನೆ. ಇದನ್ನ ಆರಂಭ ಮಾಡಿದ್ದೇ ನಾವು. ಮೋದಿ ಅವರು ಬರುವ ಮೊದಲೇ ಹಳ್ಳಿಯಲ್ಲಿ ವಾಸ ಮಾಡುವ ಜನರ ಮನೆ ಸುತ್ತಮುತ್ತ ವಾತಾವರಣ ಬಗ್ಗೆ ಇವರಿಗೆ ಲಕ್ಷನೇ ಇರಲಿಲ್ಲ. ೬೦ ವರ್ಷದ ಆಡಳಿತ ಮಾಡಿದ್ರು, ಸ್ವಾಮೀತ್ವ ಯೋಜನೆ ಎಂದರೆ ರಸ್ತೆ ಬದಿ ವ್ಯಾಪಾರ ಮಾಡುವವರ, ಹಳ್ಳಿಯಲ್ಲಿ ರೈತರ ಜಾಗ ಬಿಟ್ಟು ಉಳಿದಿದ್ದಕ್ಕೆ ಗುರುತು ಕೊಡುವದು ಯೋಜನೆ ಇದು. ಇದಾಗಿದ್ದೇ ಮೋದಿ ಕಾಲದಲ್ಲಿ ಇವರು ಮೋದಿ ಪೋಟೊನೂ ಹಾಕಲ್ಲಾ, ಅವರ ಹೆಸರು ಹೇಳಲ್ಲ, ನಮಗೂ ಹೇಳಲ್ಲ. ಅಧಿಕಾರಿಗಳು ಸಹಿತ ಹೇಗೆ ವರ್ತನೆ ಮಾಡ್ತಾರೆ ಎನ್ನುವುದು ಗೊತ್ತಾಗುತ್ತಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಗಾಂಧಿ ಭಾರತ ಕಾರ್ಯಕ್ರಮ ವಿಚಾರದ ಬಗ್ಗೆ ಮಾತನಾಡಿರುವ ಪ್ರಹ್ಲಾದ್ ಜೋಶಿ, ಇವರು ಕೇಜ್ರಿವಾಲ್ ಅವರಿಗೆ ಮಾತಾಡಲಿಕ್ಕೆ ಕೊಡಲಿಲ್ಲ. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ವಿಸರ್ಜನೆ ಮಾಡಲು ಹೇಳಿದ್ರು. ಅವರು ಹೇಳಿದಂತ ಕಾಂಗ್ರೆಸ್ ಪಕ್ಷನೇ ಇವತ್ತು ಅಸ್ತಿತ್ವಕ್ಕೆ ಇಲ್ಲಾ. ಈ ಕಾಂಗ್ರೆಸ್ ಪಕ್ಷದ್ದು ಎ ದಿಂದ ಜಡ್ ವರೆಗೆ ಮುಗಿದು ಹೋಗಿದೆ ಕಥೆ. ಇದು ಒರಿಜಿನಲ್ ಕಾಂಗ್ರೆಸ್ ಅಲ್ಲಾ, ಡುಪ್ಲಿಕೆಟ್ ಕಾಂಗ್ರೆಸ್. ನಕಲಿ ಕಾಂಗ್ರೆಸ್ಸಿನ ನಕಲಿ ಗಾಂಧಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶ ಇದು. ಅದಕ್ಕೆ ಸರ್ಕಾರದ ದುಡ್ಡನ್ನ ಪೋಲು ಮಾಡ್ತಾರೆ.
ನಮ್ಮಲ್ಲಿ ಯಾರದೋ ದುಡ್ಡು ಎಲ್ಲಮ್ಮ ಜಾತ್ರೆ ಅಂತಾ ಗಾದೆ ಮಾತಿದೆ. ಸರ್ಕಾರದ ದುಡ್ಡಲ್ಲಿ ಜಾತ್ರೆ ಮಾಡ್ತಾ ಹೊರಟಿದ್ದಾರೆ. ರಾಹುಲ್ ಗಾಂಧಿ, ಇಗೀನ ಕಾಂಗ್ರೆಸ್ ನವರು, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಇವರು ದೇಶದಲ್ಲಿ ಅಸ್ತಿತ್ವದಲ್ಲೇ ಇಲ್ಲಾ. ಯಾವುದೋ ಎರಡು ರಾಜ್ಯದಲ್ಲಿ ಟುಕುಟುಕು ಜೀವ ಇಟ್ಕೊಂಡು ಕುತಿದಾರೆ. ಈ ಡುಪ್ಲಿಕೆಟ್ ಕಾಂಗ್ರೆಸ್ ಗೆ ನಕಲಿ ಗಾಂಧಿಗಳನ್ನ ಕೊಟ್ಟು ಕಾರ್ಯಕ್ರಮ ಮಾಡುತಿದ್ದಾರೆ. ಮೊದಲು ಒಮ್ಮೆ ಕಾರ್ಯಕ್ರಮ ಮಾಡಿದ್ದರು, ದುರ್ದೈವದಿಂದ ಮನಮೋಹನ್ ಸಿಂಗ್ ಅವರ ದೇಹಾಂತ ಆಗಿ ಅದನ್ನ ಮುಂದಕ್ಕೆ ಹಾಕಿದ್ರು. ಮತ್ತೆ ಅಷ್ಟೆ ದುಡ್ಡನ್ನ ಖರ್ಚು ಮಾಡಿ ಕಾರ್ಯಕ್ರಮ ಮಾಡುತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ದುಡ್ಡೇ ಇಲ್ಲದ ಕಾರಣ ಹಲವು ಕಾರ್ಯಕ್ರಮ ನಿಂತಿವೆ ಎಂದು ಮಾದ್ಯಮ ಒಂದು ವರದಿ ಮಾಡಿದೆ. ಆ ರೀತಿ ಸ್ಥಿತಿ ಇಟ್ಟುಕೊಂಡು ಹಣ ಪೋಲು ಮಾಡುತಿದ್ದಾರೆ. ಕಾಂಗ್ರೆಸ್ ನವರು ಇನ್ನೊಂದು ಹೇಳಿಕೆ ಕೊಟ್ಟಿದ್ದಾರೆ. ಇಡಿ ಇಷ್ಟು ಮುಟ್ಟುಗೊಲು ಹಾಕಿದೆ ಎಂದು ಹೇಳುತ್ತಾರೆ. ಅದಕ್ಕೆ ಇವರು ಸಾಮನ್ಯ ಹೇಳಿಕೆ ಅಂತಾರೆ. ಇಡಿ ಎಷ್ಟು ಮುಟ್ಟುಗೊಲು ಹಾಕಿದೆ ಎಂದು ಎಲ್ಲ ಕಡೆ ಹೇಳಿತ್ತೆ. ಅವರ ಪಕ್ಷ ಬಲಗೊಳ್ಳುತ್ತಿದೆ ಅಂತೆ, ಅದಕ್ಕೆ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ ಅಂತೆ. ಇವರು ವೈಲ್ಡಿಶ್ ಜನಾ ಇದಾರೆ, ಕಾಂಗ್ರೆಸ್ ನಲ್ಲಿ ಗಂಭೀರ ಇರುವ ಜನರೇ ಇಲ್ಲಾ ಎಂದು ಕಾಂಗ್ರೆಸ್ ಬಗ್ಗೆ ಜೋಶಿ ವ್ಯಂಗ್ಯವಾಡಿದ್ದಾರೆ.