Saturday, February 8, 2025

Latest Posts

ಕೋಲ್ಕತ್ತಾದ ವೈದ್ಯೆಯ ರೇ*ಪ್ & ಕೊ*ಲೆ ಕೇಸ್: ಸಂಜಯ್ ದೋಷಿ ಎಂದು ಸಾಬೀತು

- Advertisement -

Kolkata News: ಕೋಲ್ಕತ್ತಾದ ಆರ್.ಜಿ.ಕರ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಕೆಲ ತಿಂಗಳ ಹಿಂದಷ್ಟೇ ಗ್ಯಾಂಗ್ ರೇಪ್ ನಡೆದಿದ್ದು, ಈ ರೇಪ್‌ ಕೇಸ್‌ನಲ್ಲಿ ಎ1 ಆರೋಪಿಯಾಗಿದ್ದ ಸಂಜಯ್ ರಾಯ್ ಆರೋಪಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

2024ರ ಆಗಸ್ಟ್ 9ರಂದು ಕೋಲ್ಕತ್ತಾದ ಆರ್.ಜಿ.ಕರ್ ಕಾಲೇಜಿನಲ್ಲಿ ನೈಟ್ ಶಿಫ್ಟ್ ಮಾಡುತ್ತಿದ್ದ ವೈದ್ಯೆಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಕೊನೆಗೆ ಆಕೆಯ ಕೊಲೆ ಮಾಡಲಾಗಿತ್ತು. ಈ ಕೇಸ್ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಹಲವರು ಸ್ವಾತಂತ್ರ್ಯ ದಿನಾಚರಣೆಯನ್ನು ಈ ದೇಶದಲ್ಲಿ ಹೆಸರಿಗಷ್ಟೇ ಆಚರಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು.

ಈ ಪ್ರಕರಣ ತೀವ್ರ ಸ್ವರೂಪ ಪಡೆದು, ಆರೋಪಿ ಸಂಜಯ್‌ಗೆ ಶಿಕ್ಷೆಯಾಗಲೇಬೇಕೆಂದು ಪ್ರತಿಭಟನೆಯೂ ನಡೆದಿತ್ತು. ಇದೀಗ ಕೋರ್ಟ್ ತೀರ್ಪು ನೀಡಿದ್ದು, ಸಂಜಯ್ ರಾವ್ ಅಪರಾಧಿ ಎಂದು ಸಾಬೀತಾಗಿದೆ.

- Advertisement -

Latest Posts

Don't Miss